alex Certify ಕಳ್ಳತನ‌ ಒಪ್ಪದಿದ್ದಕ್ಕೆ ಬಾಲಕನ‌ ಕೊಲೆಗೆ ಯತ್ನ. ವಿಡಿಯೋ ವೈರಲ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳ್ಳತನ‌ ಒಪ್ಪದಿದ್ದಕ್ಕೆ ಬಾಲಕನ‌ ಕೊಲೆಗೆ ಯತ್ನ. ವಿಡಿಯೋ ವೈರಲ್..!

ಭೋಪಾಲ್- ಆತ 14 ವರ್ಷದ ಬಾಲಕ. ಮೊಬೈಲ್ ಕದ್ದಿದ್ದಾನೆ ಎಂಬ ಆರೋಪದಡಿ ಆತನಿಗೆ ಚಿತ್ರ ಹಿಂಸೆ ಕೊಟ್ಟು ಬಾವಿಗೆ ನೇತಾಕಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಈ ಘಟನೆ ನಡೆದಿರೋದು, ಮಧ್ಯಪ್ರದೇಶದ ಛಾತ್ರಪುರ್ ಜಿಲ್ಲೆಯ ಆಟ್ ಕೋನಾದಲ್ಲಿ ನಡೆದಿದೆ.

ವೈರಲ್ ಆಗಿರೋ ವಿಡಿಯೋದಲ್ಲಿ ಬಾಲಕನಿಗೆ ಮೊಬೈಲ್ ಕದ್ದ ಆರೋಪವನ್ನು ಬಲವಂತವಾಗಿ ವರಿಸಲಾಗುತ್ತಿದೆ ಅನ್ನಿಸುತ್ತೆ. ನೀನು ಮೊಬೈಲ್ ಕದ್ದಿದ್ದನ್ನು ಒಪ್ಪಿಕೋ ಇಲ್ಲವಾದರೆ ನಿನ್ನನ್ನು ಈ ನೀರಿಗೆ ತಳ್ಳಿ ಸಾಯಿಸುತ್ತೇನೆ ಎಂದು ಹೇಳಿದ್ದಾರೆ. ಹೀಗೆ ಹೇಳುತ್ತಾ ಬಾವಿಯ ಅಂಚಿಗೆ ಆತನನ್ನು ನೇತಾಕಿಸಿದ್ದಾರೆ. ಈ ವೇಳೆ ಬಾಲಕ ನನ್ನನ್ನು ಸಾಯಿಸಬೇಡ ಎಂದು ಬೇಡಿಕೊಂಡಿದ್ದಾನೆ.

ಸದ್ಯ ಬಾಲಕ ಜೀವಾಪಾಯದಿಂದ ಪಾರಾಗಿದ್ದಾನೆ. ಇನ್ನು ಈ ವಿಡಿಯೋ ವೈರಲ್ ಆಗ್ತಾ ಇದ್ದಂತೆ, ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದು, ಸೆಕ್ಷನ್ 308ರ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...