alex Certify ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 9.91 ಲಕ್ಷ ಕೋಟಿ ರೂಪಾಯಿ ಸಾಲ ‘ರೈಟ್ ಆಫ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದ 5 ವರ್ಷಗಳಲ್ಲಿ ಬರೋಬ್ಬರಿ 9.91 ಲಕ್ಷ ಕೋಟಿ ರೂಪಾಯಿ ಸಾಲ ‘ರೈಟ್ ಆಫ್’

ಬ್ಯಾಂಕುಗಳು ತಾವು ನೀಡಿದ ಸಾಲದ ವಸೂಲಿ ಪ್ರಕ್ರಿಯೆಯನ್ನು ಬಹುತೇಕ ಸ್ಥಗಿತಗೊಳಿಸುವ ವಿಧಾನವನ್ನು ‘ರೈಟ್ ಆಫ್’ ಎನ್ನುತ್ತಾರೆ. ಈ ರೀತಿ ಕಳೆದ 5 ಹಣಕಾಸು ವರ್ಷಗಳಲ್ಲಿ ದೇಶದ ಬ್ಯಾಂಕುಗಳು ಬರೋಬ್ಬರಿ 9.91 ಲಕ್ಷ ಕೋಟಿ ರೂಪಾಯಿ ಮೊತ್ತದ ಸಾಲವನ್ನು ರೈಟ್ ಆಫ್ ಮಾಡಿವೆ.

ಖುದ್ದು ಕೇಂದ್ರ ಸರ್ಕಾರವೇ ಮಂಗಳವಾರದಂದು ಸಂಸತ್ತಿನಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, 2017 – 18ರಲ್ಲಿ 1.61 ಲಕ್ಷ ಕೋಟಿ ರೂಪಾಯಿ, 2018 – 19 ರಲ್ಲಿ 2.36 ಲಕ್ಷ ಕೋಟಿ ರೂಪಾಯಿ, 2019-20 ರಲ್ಲಿ 2.34 ಲಕ್ಷ ಕೋಟಿ ರೂಪಾಯಿ ರೈಟ್ ಆಫ್ ಮಾಡಲಾಗಿದೆ.

ಅದೇ ರೀತಿ 2020 – 21ನೇ ಆರ್ಥಿಕ ವರ್ಷದಲ್ಲಿ 2.02 ಲಕ್ಷ ಕೋಟಿ ರೂಪಾಯಿ ರೈಟ್ ಆಫ್ ಮಾಡಲಾಗಿದ್ದರೆ, 2021 – 22ನೇ ಆರ್ಥಿಕ ವರ್ಷದಲ್ಲಿ ಈ ಮೊತ್ತ 1.57 ಲಕ್ಷ ಕೋಟಿ ರೂಪಾಯಿಗಳಾಗಿದೆ. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಭಾಗವತ್ ಕೆ. ಕರಾಡ್ ರಾಜ್ಯಸಭೆಯಲ್ಲಿ ಈ ಲಿಖಿತ ಉತ್ತರ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...