alex Certify ಕಳೆದ 10 ವರ್ಷಗಳಿಂದ ವಿಮಾನ ನಿಲ್ದಾಣವೇ ಈತನ ಮನೆ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳೆದ 10 ವರ್ಷಗಳಿಂದ ವಿಮಾನ ನಿಲ್ದಾಣವೇ ಈತನ ಮನೆ….!

ನಾಗರಿಕ ಜೀವನದಿಂದ ಬೇಸತ್ತ ಕೆಲವರು ಕಾಡಿನಲ್ಲಿ ತಮ್ಮ ಜೀವನ ಕಳೆಯುತ್ತಿರುವ ಸುದ್ದಿಗಳನ್ನು ಬಹುಶಃ ನೀವು ಓದಿರಬಹುದು. ಆದರೆ, ಇಲ್ಲೊಬ್ಬಾತ ಕಳೆದ 10 ವರ್ಷಗಳಿಗೂ ಹೆಚ್ಚು ಚೀನಾದ ಬೀಜಿಂಗ್ ವಿಮಾನ ನಿಲ್ದಾಣದಲ್ಲಿ ವಾಸಿಸುತ್ತಿದ್ದಾರೆ.

ಹೌದು, ವ್ಯಕ್ತಿಯೊಬ್ಬರು ಚೀನಾದ ಬೀಜಿಂಗ್‍ ಇಂಟರ್ನ್ಯಾಷನಲ್ ಏರ್‌ಪೋರ್ಟ್ ಟರ್ಮಿನಲ್‌ನಲ್ಲಿ ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ವಾಸಿಸುತ್ತಿದ್ದಾರೆ. ತಮ್ಮ ಕುಟುಂಬದೊಂದಿಗೆ ಹಿಂತಿರುಗುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ. 59 ವರ್ಷದ ವೀ ಜಿಯಾಂಗುವೊ ಎಂಬುವವರು 2008ರಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್-2 ರಲ್ಲಿ ನೆಲೆಸಿದ್ದು, ಅಲ್ಲೇ ಅವರು ವಾಸಿಸುತ್ತಿದ್ದಾರೆ.

ಮದ್ಯಪಾನ ಮತ್ತು ಧೂಮಪಾನವನ್ನು ತ್ಯಜಿಸಲು ಅವರ ಕುಟುಂಬವು ಕಟ್ಟುನಿಟ್ಟಾಗಿ ಹೇಳಿದ ನಂತರ ಜಿಯಾಂಗುವೊ ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲೇ ವಾಸಿಸಲು ಶುರು ಮಾಡಿದ್ದಾರೆ. ತನ್ನ ಕುಟುಂಬದಿಂದ ಹೊರಬಂದ ಮೊದಲಿಗೆ ಅವರು, ರೈಲ್ವೆ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದರು. ನಂತರ ಬೀಜಿಂಗ್ ವಿಮಾನ ನಿಲ್ದಾಣದ ಟರ್ಮಿನಲ್-2ರಲ್ಲಿ ನೆಲೆಸಲು ಪ್ರಾರಂಭಿಸಿದ್ದಾರೆ.

ಜಿಯಾಂಗ್ವೊ ಅವರ ದೈನಂದಿನ ದಿನಚರಿಯು, ಆರು ಹಂದಿಮಾಂಸದ ಬನ್‌ಗಳು ಮತ್ತು ಉಪಹಾರಕ್ಕಾಗಿ ಒಂದು ಬೌಲ್ ಗಂಜಿ, ಊಟಕ್ಕೆ ಸ್ವಲ್ಪ ಆಹಾರ ಸೇವಿಸುತ್ತಾರೆ. ಕನಿಷ್ಠ ತನಗೆ ವಿಮಾನ ನಿಲ್ದಾಣದಲ್ಲಾದ್ರೂ ಸ್ವಾತಂತ್ರ್ಯವಿದೆ ಎಂಬುದು ಜಿಯಾಂಗುವೊ ಅವರ ಮಾತಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...