alex Certify ಕಳುವಾಗಿದ್ದ ಬರೋಬ್ಬರಿ 18 ಲಕ್ಷ ರೂ. ಮೌಲ್ಯದ 100 ಮೊಬೈಲ್​ಗಳು ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಳುವಾಗಿದ್ದ ಬರೋಬ್ಬರಿ 18 ಲಕ್ಷ ರೂ. ಮೌಲ್ಯದ 100 ಮೊಬೈಲ್​ಗಳು ವಶಕ್ಕೆ

ಕಳೆದ 2 ದಿನಗಳಲ್ಲಿ ಹರಿಯಾಣದ ಗುರುಗ್ರಾಮ್​​ ಜಿಲ್ಲೆಯಲ್ಲಿ ಕಳುವಾಗಿದ್ದ ಸುಮಾರು 18 ಲಕ್ಷ ರೂಪಾಯಿ ಮೌಲ್ಯದ ಕನಿಷ್ಟ 100 ಸ್ಮಾರ್ಟ್​ ಫೋನ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು ಅವುಗಳ ಮಾಲೀಕರಿಗೆ ಹಿಂತಿರುಗಿಸಲಾಗಿದೆ.

ಪತ್ತೆಯಾದ ಈ ಮೊಬೈಲ್​ ಫೋನ್​ಗಳ ಒಟ್ಟು ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಆಗಿದೆ. ಗುರುಗ್ರಾಮ ಜಿಲ್ಲೆಯ ವಿವಿಧ ಪೊಲೀಸ್​ ಠಾಣೆಗಳಲ್ಲಿ ದಾಖಲಾದ ದೂರನ್ನು ಆಧರಿಸಿ ಕಾಣೆಯಾದ ಮೊಬೈಲ್​ ಫೋನ್​ಗಳನ್ನು ಪಡೆಯಲು ಪೊಲೀಸರ ತಂಡವು ವಿವಿಧ ರಾಜ್ಯಗಳಾದ ರಾಜಸ್ಥಾನ, ಪಂಜಾಬ್​, ಉತ್ತರ ಪ್ರದೇಶ, ದೆಹಲಿ , ಬಿಹಾರ ಹಾಗೂ ಹರಿಯಾಣದ ಕೆಲ ಭಾಗಗಳಿಗೆ ತೆರಳಿದ್ದರು ಎಂದು ಪೊಲೀಸ್​ ಹಿರಿಯ ಅಧಿಕಾರಿಗಳು ಹೇಳಿದರು.

ಕಳೆದ ವರ್ಷ ಸೆಪ್ಟೆಂಬರ್​ ಹಾಗೂ ಡಿಸೆಂಬರ್​ ನಡುವೆ ಕಳೆದುಹೋದ ಮೊಬೈಲ್​ ಪ್ರಕರಣಗಳ ವರದಿಯನ್ನು ನೋಡಿದ ನಂತರ ಈ ಫೋನ್​ಗಳನ್ನು ಪತ್ತೆ ಮಾಡಲಾಗಿದೆ.

ನಾವು ಸಾಮಾನ್ಯವಾಗಿ ಕಾಣೆಯಾದ ಫೋನ್‌ಗಳ ಅನಧಿಕೃತ ಬಳಕೆದಾರರಿಗೆ ಕರೆ ಮಾಡುತ್ತೇವೆ ಮತ್ತು ತಕ್ಷಣ ಫೋನ್‌ಗಳನ್ನು ಹಿಂತಿರುಗಿಸುವಂತೆ ಕೇಳುತ್ತೇವೆ. ಎಫ್‌ಐಆರ್‌ನ ಸಂದರ್ಭದಲ್ಲಿ, ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹರಿಯಾಣದ ಪೊಲೀಸ್ ಉಪ ಆಯುಕ್ತ (ಪಶ್ಚಿಮ) ದೀಪಕ್ ಸಹರನ್ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...