alex Certify ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರೂವ್ ಮಾಡಿದ ಅಧಿಕಾರಿ: ನಿಶ್ಚಿತ ವರನನ್ನೇ ಬಂಧಿಸಿದ ಲೇಡಿ ಪೊಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂದು ಪ್ರೂವ್ ಮಾಡಿದ ಅಧಿಕಾರಿ: ನಿಶ್ಚಿತ ವರನನ್ನೇ ಬಂಧಿಸಿದ ಲೇಡಿ ಪೊಲೀಸ್

ಗುವಾಹಟಿ: ತಮ್ಮ ಕರ್ತವ್ಯಕ್ಕಿಂತ ಮಿಗಿಲಾದದ್ದು ಯಾವುದೂ ಇಲ್ಲ ಎಂಬುದನ್ನು ಅಸ್ಸಾಂನ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಸಾಬೀತುಪಡಿಸಿದ್ದಾರೆ.

ಹೌದು, ಅಪರೂಪದ ಘಟನೆಯೊಂದರಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯು ತಮ್ಮ ನಿಶ್ಚಿತ ವರನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದು, ಅವನನ್ನು ಬಂಧಿಸಿದ್ದಾರೆ. ನಾಗಾಂವ್ ಜಿಲ್ಲೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿರುವ ಜುನ್ಮೋನಿ ರಾಭಾ, ವಂಚನೆಯ ಆರೋಪದ ಮೇಲೆ ರಾಣಾ ಪೊಗಾಗ್ ನನ್ನು ಬಂಧಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಪೊಲೀಸ್ ಅಧಿಕಾರಿ ರಾಬಾ ಮತ್ತು ಪೊಗಾಗ್ ಶಾಸ್ತ್ರೋಕ್ತವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವರ್ಷದ ನವೆಂಬರ್‌ನಲ್ಲಿ ವಿವಾಹವಾಗಲು ನಿರ್ಧರಿಸಿದ್ದರು. ಅಲ್ಲದೆ ಆತ ತಾನು ಒಬ್ಬ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುವ ಅಧಿಕಾರಿ ಎಂದು ಹೇಳಿ ನಂಬಿಸಿದ್ದ.

ಅಷ್ಟೇ ಅಲ್ಲದೆ, ಹಲವಾರು ಜನರಿಗೆ ಉದ್ಯೋಗ ನೀಡುವುದಾಗಿ ಭರವಸೆ ನೀಡಿ, ಅವರಿಂದ ಹಣ ಪಡೆದು ವಂಚಿಸಿದ್ದ. ಇದನ್ನು ತಿಳಿದ ಅಧಿಕಾರಿ ಆತನನ್ನು ಬಂಧಿಸಿದ್ದಾರೆ. ಪೋಗಾಗ್ ಮನೆಯಿಂದ ಒಎನ್‌ಜಿಸಿಯ 11 ನಕಲಿ ಸೀಲುಗಳು ಮತ್ತು ನಕಲಿ ಗುರುತಿನ ಚೀಟಿಗಳು ಸೇರಿದಂತೆ ಹಲವು ದೋಷಾರೋಪಣೆ ದಾಖಲೆಗಳನ್ನು ವಶಪಡಿಸಿಕೊಂಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...