alex Certify ಕರುವನ್ನೂ ಬಿಡಲಿಲ್ಲ ಕಾಮುಕ ಯುವಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕರುವನ್ನೂ ಬಿಡಲಿಲ್ಲ ಕಾಮುಕ ಯುವಕರು….!

ಪಾಪಿಗಳು ಕರುವಿನ ಮೇಲೆ ಅತ್ಯಾಚಾರವೆಸಗಿದ ಅಮಾನವೀಯ ಘಟನೆಯು ರಾಜಸ್ಥಾನದ ಅಲ್ವಾರ್​​ನಲ್ಲಿ ನಡೆದಿದೆ. ಈ ಪ್ರಕರಣ ಸಂಬಂಧ ನಾಲ್ವರು ಪಾಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ವಾರ್​ ಜಿಲ್ಲೆಯ ಭಿವಾಡಿ ಪ್ರದೇಶದ ಚುಹಾದ್​​ಪುರ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ.

ಹಸುವಿನ ಜೊತೆ ನಾಲ್ವರು ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ರಾಜಸ್ಥಾನ ಪೊಲೀಸರು ನಾಲ್ವರನ್ನು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಆರೋಪಿಗಳಲ್ಲಿ ಓರ್ವ ರಸ್ತೆಯಲ್ಲಿ ಮಲಗಿದ್ದ ಕರುವಿನ ಮೇಲೆ ಅತ್ಯಾಚಾರವೆಸಗಿದ್ದು, ಮತ್ತೊಬ್ಬ ಆರೋಪಿ ಕರುವನ್ನು ಗಲಾಟೆ ಮಾಡದಂತೆ ತಡೆದಿದ್ದು ವಿಡಿಯೋ ವೈರಲ್ ಆಗಿದೆ.

ಈ ಘಟನೆ ನಡೆಯುವ ವೇಳೆಯಲ್ಲಿ ಇನ್ನಿಬ್ಬರು ಸ್ಥಳದಲ್ಲಿದ್ದರು. ಇದರಲ್ಲಿ ಒಬ್ಬ ಈ ಎಲ್ಲಾ ಘಟನೆಗಳನ್ನು ವಿಡಿಯೋ ಮಾಡಿಕೊಂಡಿದ್ದಾನೆ. ಅಲ್ವಾರ್ ಜಿಲ್ಲೆಯ ಚೋಪಾಂಕಿಯ ಗುಡ್ಡಗಾಡು ಪ್ರದೇಶದಲ್ಲಿ ಈ ಘೋರ ಕೃತ್ಯ ಎಸಗಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

— Bhiwadi Police (@Bhiwadipolice) February 14, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...