alex Certify ಕನಸಿನಲ್ಲಿ ಇವು ಕಾಣಿಸಿಕೊಂಡರೆ ಶೀಘ್ರವೇ ಕೂಡಿ ಬರಲಿದೆ ʼಕಂಕಣ ಭಾಗ್ಯʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕನಸಿನಲ್ಲಿ ಇವು ಕಾಣಿಸಿಕೊಂಡರೆ ಶೀಘ್ರವೇ ಕೂಡಿ ಬರಲಿದೆ ʼಕಂಕಣ ಭಾಗ್ಯʼ

ಪ್ರತಿಯೊಬ್ಬರೂ ರಾತ್ರಿ ಮಲಗಿದಾಗ ಕನಸು ಕಾಣ್ತಾರೆ. ಈ ಕನಸಿಗೂ ನಮ್ಮ ಜೀವನದಲ್ಲಾಗುವ ಘಟನೆಗಳಿಗೂ ಸಂಬಂಧವಿರುತ್ತದೆ. ಶಾಸ್ತ್ರಗಳ ಪ್ರಕಾರ, ಮುಂದಾಗುವ ಘಟನೆಗಳ ಬಗ್ಗೆ ಕನಸು ನಮಗೆ ಸೂಚನೆ ನೀಡುತ್ತದೆ. ಕೆಲ ಕನಸುಗಳು ಕಂಕಣ ಕೂಡಿ ಬಂದಿದೆ. ಮದುವೆ ಶೀಘ್ರವೇ ಆಗಲಿದೆ ಎಂಬ ಸಂಕೇತವನ್ನು ನೀಡುತ್ತವೆ.

ಯುವತಿಯೊಬ್ಬಳಿಗೆ ಕನಸಿನಲ್ಲಿ ಪಕ್ಷಿ ಕಂಡ್ರೆ ಆಕೆ ಪ್ರೇಮ ಸಂಬಂಧ ವಿವಾಹವಾಗಿ ಪರಿವರ್ತನೆಯಾಗಲಿದೆ ಎಂದರ್ಥ. ಶೀಘ್ರವೇ ಆಕೆಗೆ ಮದುವೆ ಪ್ರಾಪ್ತಿಯಾಗಲಿದೆ.

ಸಂತೋಷವಾಗಿ ಯಾರಾದ್ರೂ ನೃತ್ಯ ಮಾಡಿದಂತೆ ಕಂಡರೆ ಶೀಘ್ರ ಮದುವೆಯಾಗಲಿದೆ ಎಂದುಕೊಳ್ಳಿ.

ಕನ್ಯೆಯೊಬ್ಬಳ ಕನಸಿನಲ್ಲಿ ಮೂರ್ತಿ ಮಾಡುವ ಶಿಲ್ಪಿ ಕಂಡ್ರೆ ಆಕೆ ಜೀವನದಲ್ಲಿ ಬೇಗ ಪತಿಯ ಆಗಮನವಾಗಲಿದೆ ಎಂದರ್ಥ.

ಯುವತಿಯೊಬ್ಬಳು ಕನಸಿನಲ್ಲಿ ಸ್ನೇಹಿತೆ ಬಳೆಗಳನ್ನು ಧರಿಸಿದ್ರೆ ಆಕೆಗೆ ಆದಷ್ಟು ಬೇಗ ಮದುವೆಯಾಗಲಿದೆ ಎಂಬ ಸಂಕೇತ.

ಯುವತಿಯೊಬ್ಬಳಿಗೆ ಜಾತ್ರೆಯಲ್ಲಿ ಸುತ್ತಾಡಿದಂತೆ ಕನಸು ಬಿದ್ರೆ ಅದು ಕೂಡ ಮದುವೆಯ ಸೂಚನೆ ನೀಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...