alex Certify ಕತ್ತರಿಸಿದ ಹಣ್ಣುಗಳಿಗೆ ಉಪ್ಪು ಹಾಕಿಕೊಂಡು ತಿನ್ನುತ್ತೀರಾ ? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕತ್ತರಿಸಿದ ಹಣ್ಣುಗಳಿಗೆ ಉಪ್ಪು ಹಾಕಿಕೊಂಡು ತಿನ್ನುತ್ತೀರಾ ? ಇಲ್ಲಿದೆ ಆರೋಗ್ಯ ತಜ್ಞರ ಸಲಹೆ

ಹಣ್ಣುಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಪ್ರತಿನಿತ್ಯ ತಿಂದರೆ ಅನೇಕ ರೋಗಗಳು ನಮ್ಮಿಂದ ದೂರವಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹಣ್ಣುಗಳು ಜೀವಸತ್ವಗಳು ಮತ್ತು ಪೋಷಕಾಂಶಗಳ ಪವರ್‌ಹೌಸ್ ಆಗಿವೆ.

ದೇಹದಲ್ಲಿನ ಪೋಷಕಾಂಶಗಳ ಕೊರತೆಯನ್ನು ನೀಗಿಸುತ್ತದೆ. ಹಣ್ಣುಗಳ ಸೇವನೆಗೆ ಬೇರೆ ಬೇರೆ ವಿಧಾನಗಳಿವೆ. ಕೆಲವರು ಬೆಳಗ್ಗೆ ಹಣ್ಣುಗಳನ್ನು ತಿನ್ನಲು ಇಷ್ಟಪಟ್ಟರೆ ಕೆಲವರು ಸಂಜೆ ಸೇವನೆ ಮಾಡ್ತಾರೆ.

ಅನೇಕರು ಹಣ್ಣುಗಳನ್ನು ಕಟ್‌ ಮಾಡಿಕೊಂಡು ಸ್ವಲ್ಪ ಉಪ್ಪು ಹಾಕಿಕೊಂಡು ತಿನ್ನುತ್ತಾರೆ. ಮಾರುಕಟ್ಟೆಗಳಲ್ಲಿ ನೀವು ಫ್ರೂಟ್‌ ಬೌಲ್‌ ಖರೀದಿ ಮಾಡಿದ್ರೆ ಅಲ್ಲೂ ಅದೇ ರೀತಿ ಉಪ್ಪು ಹಾಕಿ ಕೊಡುತ್ತಾರೆ. ಆದರೆ ಆರೋಗ್ಯ ತಜ್ಞರ ಪ್ರಕಾರ ಹಣ್ಣುಗಳ ಮೇಲೆ ಉಪ್ಪು ಸಿಂಪಡಿಸಿಕೊಂಡು ತಿನ್ನುವುದು ಆರೋಗ್ಯಕ್ಕೆ ಹಾನಿಕಾರಕ.

ಆರೋಗ್ಯವಂತ ವ್ಯಕ್ತಿಗೆ ದಿನಕ್ಕೆ 5 ಗ್ರಾಂ ಉಪ್ಪು ಮಾತ್ರ ಬೇಕಾಗುತ್ತದೆ. ದೇಹವು ಆಹಾರದಿಂದ ಅಗತ್ಯವಿರುವಷ್ಟು ಉಪ್ಪನ್ನು ಪಡೆಯುತ್ತದೆ. ಇದಕ್ಕಿಂತ ಹೆಚ್ಚಿನ ಉಪ್ಪಿನ ಪ್ರಮಾಣವು ಹೃದಯ ಮತ್ತು ರಕ್ತದೊತ್ತಡಕ್ಕೆ ಒಳ್ಳೆಯದಲ್ಲ. ಹಾಗಾಗಿ ಹಣ್ಣುಗಳಿಗೂ ಉಪ್ಪು ಹಾಕಿಕೊಂಡು ತಿನ್ನುವುದನ್ನು ತಪ್ಪಿಸಿ.

ಹೆಚ್ಚು ಉಪ್ಪು ತಿಂದರೆ ದೇಹದಲ್ಲಿ ಸೋಡಿಯಂ ಪ್ರಮಾಣ ಹೆಚ್ಚುತ್ತದೆ. ಈ ಕಾರಣದಿಂದಾಗಿ ದೇಹದಲ್ಲಿ ನೀರಿನ ಧಾರಣವು ಪ್ರಾರಂಭವಾಗುತ್ತದೆ, ಇದು ಊತಕ್ಕೆ ಕಾರಣವಾಗುತ್ತದೆ. ದೇಹದ ವಿಷಗಳು ಒಳಗೇ ಉಳಿಯುತ್ತವೆ.

ಕತ್ತರಿಸಿದ ಹಣ್ಣುಗಳಿಗೆ ಉಪ್ಪನ್ನು ಹಾಕುವುದರಿಂದ ದೇಹವು ಅದರ ಪೋಷಕಾಂಶಗಳನ್ನು ಪಡೆಯುವುದಿಲ್ಲ. ಉಪ್ಪು ಹಾಕಿದ ಬಳಿಕ ಹಣ್ಣುಗಳ ಪೋಷಕಾಂಶಗಳು ನೀರಿನ ರೂಪದಲ್ಲಿ ಹೊರಬರುತ್ತವೆ. ನಂತರ ಹಣ್ಣುಗಳನ್ನು ತಿನ್ನುವುದರಿಂದ ಹೆಚ್ಚಿನ ಪ್ರಯೋಜನವಿಲ್ಲ. ಈ ಹಣ್ಣುಗಳನ್ನು ತಿನ್ನುವುದರಿಂದ ಮೂತ್ರದೊಂದಿಗೆ ದೇಹದ ನೀರು ಹೊರಬರುತ್ತದೆ, ಇದು ಸಹ ದೇಹಕ್ಕೆ ಒಳ್ಳೆಯದಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...