alex Certify ಕಣ್ಮನ ಸೆಳೆಯುವ ʼದ್ವೀಪʼ ಪ್ರದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಮನ ಸೆಳೆಯುವ ʼದ್ವೀಪʼ ಪ್ರದೇಶ

Lakshadweep | History, Map, Religion, Capital, & Administration | Britannica

ಬಾಲಿವುಡ್ ಸೇರಿದಂತೆ ಚಿತ್ರಗಳಲ್ಲಿ ದ್ವೀಪ ಪ್ರದೇಶಗಳಲ್ಲಿ ಹಾಡು, ರೋಮ್ಯಾನ್ಸ್, ಫೈಟಿಂಗ್ ದೃಶ್ಯಗಳನ್ನು ನಾವು ನೋಡಿರ್ತೇವೆ. ವಿದೇಶದಲ್ಲಿ ಈ ಐರ್ಲ್ಯಾಂಡ್ ದೃಶ್ಯದ ಚಿತ್ರೀಕರಣವಾಗಿರಬಹುದೆಂದು ಅಂದಾಜಿಸುತ್ತೇವೆ. ಆದ್ರೆ ನಮ್ಮ ಅಂದಾಜು ತಪ್ಪು. ಭಾರತದಲ್ಲಿಯೇ ಕಣ್ಮನ ಸೆಳೆಯುವ, ಸಿನಿಮಾಗಳಲ್ಲಿ ತೋರಿಸುವ ಸುಂದರ ದ್ವೀಪ ತಾಣಗಳಿವೆ.

ಲಕ್ಷದ್ವೀಪ : ಭಾರತದ ಭೂ ಗಡಿಯಿಂದ ಕಡಿತಗೊಂಡ ಭೂ ಪ್ರದೇಶ ಲಕ್ಷದ್ವೀಪ. ಲಕ್ಷದ್ವೀಪದಲ್ಲಿರುವ ತೆಂಗಿನಗಿಡ ಇಲ್ಲಿನ ಸೌಂದರ್ಯವನ್ನು ಮತ್ತಷ್ಟು ಸುಂದರಗೊಳಿಸಿದೆ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ.

ದೀವ್ : ಗುಜರಾತಿನ ಸೇತುವೆಗಳ ಮೂಲಕ ಈ ದ್ವೀಪಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ಐತಿಹಾಸಿಕ ಕಟ್ಟಡಗಳು ಗುಜರಾತ್ ಹಾಗೂ ಪೋರ್ಚುಗಲ್ ಸಂಸ್ಕೃತಿಯ ಸಂಗಮವಾಗಿದೆ. ಇಲ್ಲಿನ ಸುಂದರ ಪರಿಸರ ಪ್ರವಾಸಿಗರನ್ನು ಆಕರ್ಷಿಸುತ್ತದೆ.

ದಮನ್ : ಹಳೆಯ ಕಟ್ಟಡಗಳು, ನದಿಗಳು, ಜಲಪಾತಗಳು, ಸಮುದ್ರದ ಸುಂದರ ದೃಶ್ಯಗಳು ಈ ದ್ವೀಪದ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ. ದಮನಗಂಗಾ, ಮೋತಿ ಬೀಚ್, ದೇವಿಕಾ ಬೀಚ್ ನಲ್ಲಿ ಪ್ರವಾಸಿಗರ ದಂಡೇ ನೆರೆದಿರುತ್ತದೆ. ಯಾವುದೇ ಋತುವಿನಲ್ಲಿ ಬೇಕಾದ್ರೂ ಇಲ್ಲಿಗೆ ಬರಬಹುದು.

ಮಜುಲಿ ದ್ವೀಪ : ಮಜುಲಿ ದ್ವೀಪ ಪ್ರದೇಶ ಗಿನ್ನಿಸ್ ದಾಖಲೆ ಸೇರಿದೆ. ವಿಶ್ವದ ಅತಿದೊಡ್ಡ ನದಿ ದ್ವೀಪ ಪ್ರದೇಶವೆಂದು ಇದನ್ನು ಘೋಷಣೆ ಮಾಡಲಾಗಿದೆ. ಮಜುಲಿ ದ್ವೀಪ ಬ್ರಹ್ಮಪುತ್ರ ನದಿಯಲ್ಲಿದೆ. ಗುವಾಹಾಟಿಯಿಂದ ಇಲ್ಲಿಗೆ ಬರುವುದು ಸುಲಭ. ಅಸ್ಸಾಂ ಸಂಸ್ಕೃತಿಯ ಒಂದು ನೋಟವನ್ನು ಈ ದ್ವೀಪದಲ್ಲಿ ಕಾಣಬಹುದು.

ದೀವರ್ ದ್ವೀಪ : ಮಾಂಡ್ವಿ ನದಿಯಲ್ಲಿ ಇದು ನಿರ್ಮಾಣವಾಗಿದೆ. ಆಹ್ಲಾದಕರ ಪ್ರಕೃತಿ ಪ್ರವಾಸಿಗರನ್ನು ಸೆಳೆಯುತ್ತದೆ. ದಿಲ್ ಚಾಹತಾಹೇ ಚಿತ್ರದ ಕೆಲ ದೃಶ್ಯಗಳನ್ನು ಇಲ್ಲಿ ಚಿತ್ರೀಕರಿಸಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...