alex Certify ಕಣ್ಣಿಗೊಂದು ಸವಾಲು: ಒಂದೇ ಒಂದು ಚಿತ್ರ, ಭಿನ್ನ-ಭಿನ್ನ ಪ್ರಾಣಿಗಳು ಗುರುತಿಸಬಲ್ಲಿರಾ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿಗೊಂದು ಸವಾಲು: ಒಂದೇ ಒಂದು ಚಿತ್ರ, ಭಿನ್ನ-ಭಿನ್ನ ಪ್ರಾಣಿಗಳು ಗುರುತಿಸಬಲ್ಲಿರಾ….?

ಇತ್ತೀಚೆಗೆ ಸೋಶಿಯಲ್‌ ಮೀಡಿಯಾದಲ್ಲಿ ದಿನಕ್ಕೆ ಹತ್ತಾರು ವಿಡಿಯೋ ವೈರಲ್ ಆಗ್ತಿವೆ. ಅದರಲ್ಲಿ ಕೆಲವು ಒಬ್ಬರಿಗೊಬ್ಬರು ಚಾಲೆಂಜ್ ಮಾಡುವ ವಿಡಿಯೋಗಳು ಕೂಡಾ ವೈರಲ್ ಆಗ್ತಿವೆ. ಇವೆಲ್ಲ ವಿಡಿಯೋಗಳ ಜೊತೆ ಜೊತೆಗೆನೇ, ಕಣ್ಣಿಗೆ ಸವಾಲು ಹಾಕುವಂತ ಚಿತ್ರಗಳು ವೈರಲ್ ಆಗ್ತಿವೆ. ಅದರಲ್ಲಿ ಈ ಚಿತ್ರ ಕೂಡಾ ಒಂದು.

ಇದಕ್ಕೆ ಆಪ್ಟಿಕಲ್ ಇಲ್ಯೂಜನ್ ಚಿತ್ರ ಸವಾಲು ಅಂತ ಹೇಳಲಾಗುತ್ತೆ. ಈ ಚಿತ್ರವನ್ನ ಥಟ್ ಅಂತ ನೋಡಿದಾಗ ನಿಮಗೆ ಇದು ಒಂದೇ ಚಿತ್ರ ಅಂತ ಅನಿಸುತ್ತೆ. ಸ್ವಲ್ಪ ಗಮನ ಇಟ್ಟು ನೋಡಿದಾಗ, ಒಂದೇ ಚಿತ್ರದಲ್ಲಿ ಎರಡು ಮೂರು ಪ್ರಾಣಿಗಳು ಇರುವುದು ಗಮನಕ್ಕೆ ಬರುತ್ತೆ. ಇನ್ನಷ್ಟು ಏಕಾಗ್ರತೆ ಚಿತ್ತದಿಂದ ನೋಡಿದಾಗ ಈ ಚಿತ್ರದಲ್ಲಿ ಇನ್ನೂ ಅನೇಕ ಪ್ರಾಣಿಗಳ ಚಿತ್ರ ಇರುವುದು ಗೊತ್ತಾಗುತ್ತೆ.

ಮೆದುಳಿಗೆ ಕೆಲಸ ಕೊಡುವಂತ ಚಿತ್ರ ಇದಾಗಿದೆ. ಭ್ರಮೆ ಹುಟ್ಟಿಸುವಂತಿರೋ ಈ ಚಿತ್ರ ನೋಡಿ ನೆಟ್ಟಿಗರು ತಲೆ ಕೆರೆದುಕೊಂಡು ಈ ಚಿತ್ರದಲ್ಲಿ ಅಡಗಿರುವಂತಹ ಬೇರೆ-ಬೇರೆ ಪ್ರಾಣಿಗಳ ಚಿತ್ರವನ್ನ ಹುಡುಕುತ್ತಿದ್ಧಾರೆ. ಇದೊಂದು ಮೋಜಿನ ಆಟವಾಗಿದ್ದು, ಈ ಜಟಿಲ ರೀತಿಯ ಸವಾಲ್‌ನ್ನ ಕೇವಲ 1% ಜನರಷ್ಟೇ ಬಗೆಹರಿಸಿದ್ದಾರೆ. ನೀವು ಬೇಕಾದಲ್ಲಿ ಈ ಆಪ್ಟಿಕಲ್ ಇನ್ಯೂಜನ್ ಚಿತ್ರ ಸವಾಲನ್ನ ಸ್ವೀಕರಿಸಿ, ಇದರಲ್ಲಿ ಇರುವ ಪ್ರಾಣಿಗಳನ್ನ ಕಂಡು ಹಿಡಿಯಲು ಪ್ರಯತ್ನಿಸಿ. ಅದು ಕೂಡಾ 1 ನಿಮಿಷ ಕಾಲಾವಕಾಶದಲ್ಲಿ ಮಾತ್ರ. ಆ ನಂತರ ಈ ಕೆಳಗಿನ ಉತ್ತರವನ್ನ ನೋಡಿ.

ನೋಡಿದಾಕ್ಷಣ ಕಪ್ಪು ಆನೆಯಂತೆ ಕಾಣುವ ಈ ಚಿತ್ರದ ಮಧ್ಯಭಾಗದಲ್ಲಿ ಕತ್ತೆಯ ಚಿತ್ರ ಕಾಣಿಸುತ್ತೆ. ಅದೇ ಕತ್ತೆಯ ಮಧ್ಯಭಾಗದಲ್ಲಿ ಶ್ವಾನ, ಶ್ವಾನದ ಮಧ್ಯದಲ್ಲಿ ಬೆಕ್ಕು ನೋಡಬಹುದಾಗಿದೆ. ಸಾಮಾನ್ಯವಾಗಿ ಈ ರೀತಿಯ ಆಪ್ಟಿಕಲ್ ಇಲ್ಯೂಜನ್ ಚಿತ್ರದಲ್ಲಿ 4-5 ಪ್ರಾಣಿಗಳನ್ನಷ್ಟೆ ನೋಡಬಹುದು. ಆದರೆ ಈ ಚಿತ್ರ ಇನ್ನೂ ವಿಶೇಷವಾಗಿದೆ. ಕಾರಣ ಇಲ್ಲಿ 16 ಬಗೆಯ ಪ್ರಾಣಿಗಳನ್ನ ಕಾಣಬಹುದಾಗಿದೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅದು ನಿಮಗೆ ಸ್ಪಷ್ಟವಾಗಿ ಕಾಣಿಸುತ್ತೆ. ಇಲಿ, ಮೀನು, ಸರ್ಪ, ಸೊಳ್ಳೆ, ಆಮೆ, ಡಾಲ್ಫಿನ್, ಮೊಸಳೆ, ಪಕ್ಷಿ, ಕೋಳಿ, ಸಿಗಡಿ ಹಾಗೂ ನೀರು ನಾಯಿಯನ್ನ ಈ ಚಿತ್ರದಲ್ಲಿ ನೋಡಬಹುದು. ಇಷ್ಟು ಪ್ರಾಣಿಗಳಲ್ಲಿ ನೀವು ಎಷ್ಟು ಪ್ರಾಣಿಗಳನ್ನ ಕಂಡು ಹಿಡಿದಿದ್ದಿರಾ?

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...