alex Certify ಕಂಪನಿಗೆ ರೆಸ್ಯೂಮ್​ ತಲುಪಿಸಲು ಜೊಮ್ಯಾಟೋ ಡೆಲಿವರಿ ಬಾಯ್​ ಆದ ಯುವಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಪನಿಗೆ ರೆಸ್ಯೂಮ್​ ತಲುಪಿಸಲು ಜೊಮ್ಯಾಟೋ ಡೆಲಿವರಿ ಬಾಯ್​ ಆದ ಯುವಕ

ಈಗಿನ ಜಮಾನದಲ್ಲಿ ಉದ್ಯೋಗವನ್ನು ಹುಡುಕೋದು ಅಂದರೆ ಕಷ್ಟಕರ ಕೆಲಸವೇ ಸರಿ. ಅದರಲ್ಲೂ ವಿಶೇಷವಾಗಿ ಸಾಂಕ್ರಾಮಿಕದ ಬಳಿಕ ಕೆಲಸ ಸಿಗೋದೇ ಒಂದು ಕಷ್ಟವಾಗಿದೆ.

ಆದರೆ ಈ ಸಮಸ್ಯೆಯಿಂದ ಪಾರಾಗಲು ಇಲ್ಲೊಬ್ಬ ವ್ಯಕ್ತಿ ವಿನೂತನ ಉಪಾಯವೊಂದನ್ನು ಮಾಡಿದ್ದಾರೆ. ಟ್ವಿಟರ್​ ಬಳಕೆದಾರರಾದ ಅಮನ್​ ಖಂಡೇಲ್ವಾಲ್​​ ಎಂಬವರು ಜೊಮ್ಯಾಟೋ ಡೆಲಿವರಿ ಬಾಯ್ ಆಗುವ ಮೂಲಕ ವಿವಿಧ ಕಂಪನಿಗಳನ್ನು ಆಕರ್ಷಿಸಲು ಮುಂದಾಗಿದ್ದಾರೆ.

ಬೆಂಗಳೂರಿನ ಹಲವಾರು ಸ್ಟಾರ್ಟಪ್​ ಕಂಪನಿಗಳಿಗೆ ಪೇಸ್ಟ್ರಿಗಳ ಬಾಕ್ಸ್​ನ ಜೊತೆಯಲ್ಲಿ ತಮ್ಮ ರೆಸ್ಯೂಮ್​ನ್ನೂ ಇರಿಸಿ ಕಳಿಸಿದ್ದಾರೆ. ಈ ವಿಚಾರವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ಅಮನ್​, ನನಗೆ ಬಹುತೇಕ ರೆಸ್ಯೂಮ್​ಗಳು ಕಸದ ಬುಟ್ಟಿ ಸೇರುತ್ತದೆ. ಆದರೆ ನಿಮ್ಮ ಹೊಟ್ಟೆಯಲ್ಲಿ ನನ್ನ ರೆಸ್ಯೂಮ್​ ಎಂದು ಶೀರ್ಷಿಕೆ ನೀಡಿದ್ದಾರೆ.

ಜೊಮ್ಯಾಟೋ ಡೆಲಿವರಿ ಬಾಯ್​ ಆಗಿ ನಾನು ಪೇಸ್ಟ್ರಿ ಬಾಕ್ಸ್​ನಲ್ಲಿ ನನ್ನ ರೆಸ್ಯೂಮ್​ಗಳನ್ನು ಕಳಿಸಿದ್ದೇನೆ. ಬೆಂಗಳೂರಿನ ಸಾಕಷ್ಟು ಸ್ಟಾರ್ಟಪ್​ ಕಂಪನಿಗಳಿಗೆ ಇದನ್ನು ತಲುಪಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ ಅಮನ್​ ಉದ್ಯೋಗದಾತರ ಗಮನ ಸೆಳೆದಿರೋದು ಮಾತ್ರವಲ್ಲದೇ ನೆಟ್ಟಿಗರ ಗಮನವನ್ನೂ ಸೆಳೆದಿದ್ದಾರೆ. ಇವರ ಟ್ವೀಟ್​ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

— Aman Khandelwal (@AmanKhandelwall) July 2, 2022

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...