alex Certify ಓಲಾ ಎಲೆಕ್ಟ್ರಿಕ್‌ನಿಂದ ಗ್ರಾಹಕರಿಗೆ ನವರಾತ್ರಿ ಆಫರ್‌; ಈ ಸ್ಕೂಟರ್‌ ಮೇಲೆ ಸಿಕ್ತಿದೆ 10 ಸಾವಿರ ರೂಪಾಯಿ ಡಿಸ್ಕೌಂಟ್‌…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಓಲಾ ಎಲೆಕ್ಟ್ರಿಕ್‌ನಿಂದ ಗ್ರಾಹಕರಿಗೆ ನವರಾತ್ರಿ ಆಫರ್‌; ಈ ಸ್ಕೂಟರ್‌ ಮೇಲೆ ಸಿಕ್ತಿದೆ 10 ಸಾವಿರ ರೂಪಾಯಿ ಡಿಸ್ಕೌಂಟ್‌…..!

ಓಲಾ ಎಲೆಕ್ಟ್ರಿಕ್, ನವರಾತ್ರಿ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡುತ್ತಿದೆ. ಬೆಂಗಳೂರು ಮೂಲದ ಈ EV ತಯಾರಕ ಕಂಪನಿ, Ola S1 Pro ಎಲೆಕ್ಟ್ರಿಕ್ ಸ್ಕೂಟರ್‌ಗೆ 10,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಕಂಪನಿಯ ಪ್ರಕಾರ ರಿಯಾಯಿತಿ ಕೊಡುಗೆ ಅಕ್ಟೋಬರ್ 5ರವರೆಗೆ ಮಾನ್ಯವಾಗಿರುತ್ತದೆ. ಹೊಸ ಖರೀದಿದಾರರಿಗೆ ಮಾತ್ರ ಈ ಆಫರ್‌ ಲಭ್ಯವಿರುತ್ತದೆ.

ಇದರೊಂದಿಗೆ ಐದು ವರ್ಷಗಳ ವಿಸ್ತೃತ ವಾರಂಟಿ ಪ್ಯಾಕೇಜ್‌ನಲ್ಲಿ 1,500 ರೂಪಾಯಿ ರಿಯಾಯಿತಿಯನ್ನು ಸಹ ನೀಡಲಾಗುತ್ತಿದೆ. Ola S1 Pro 1.40 ಲಕ್ಷ ರೂಪಾಯಿಗೆ ಮಾರಾಟವಾಗುತ್ತಿತ್ತು. ಪ್ರಸ್ತುತ ಈ ಎಲೆಕ್ಟ್ರಿಕ್ ಸ್ಕೂಟರ್ 1.30 ಲಕ್ಷ ರೂಪಾಯಿಗೆ ಸಿಗಲಿದೆ. ಹಬ್ಬದ ಋತುವಿನ ಆಫರ್‌ ಭಾಗವಾಗಿ, ಓಲಾ ಎಲೆಕ್ಟ್ರಿಕ್‌ನಿಂದ ಜೀರೋ ಪ್ರೊಸೆಸಿಂಗ್‌ ಶುಲ್ಕದಡಿ ಸಾಲವನ್ನು ನೀಡಲಾಗುತ್ತಿದೆ. ಇದು ಶೇ. 8.99ರ ಪರಿಚಯಾತ್ಮಕ ಬಡ್ಡಿ ದರದಲ್ಲಿ ಲಭ್ಯವಿದೆ.

S1 Pro 4 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಪ್ರತಿ ಚಾರ್ಜ್‌ಗೆ 181 ಕಿಮೀ ದೂರ ಚಲಿಸಬಲ್ಲದು. ಹೈಪರ್‌ ಡ್ರೈವ್‌  ಮೋಟಾರ್ ಅನ್ನು ಅಳವಡಿಸಿದ್ದು, 11.3 Bhp ಮತ್ತು 58 Nm ಅನ್ನು ಉತ್ಪಾದಿಸುತ್ತದೆ. Ola S1 Pro ನ ಗರಿಷ್ಠ ವೇಗ 116 ಕಿಮೀ. ಇದನ್ನು 6.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. Ola S1 ಪ್ರೊ ಸ್ಪರ್ಧೆOla S1 Pro ಸ್ಕೂಟರ್‌ಗೆ ಮಾರುಕಟ್ಟೆಯಲ್ಲಿ Ather 450X ಮತ್ತು TVS iQube ನಂತಹ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪೈಪೋಟಿ ಒಡ್ಡುತ್ತಿವೆ. Ather 450X ಬೆಲೆ 1,55,657 ರೂಪಾಯಿ. ಇದು ಪ್ರತಿ ಚಾರ್ಜ್‌ಗೆ 146 ಕಿಮೀ ಓಡಬಲ್ಲದು. ಟಿವಿಎಸ್ ಐಕ್ಯೂಬ್ ಬೆಲೆ ಒಂದು ಲಕ್ಷ ರೂಪಾಯಿ  ಸನಿಹದಲ್ಲಿದೆ. ಇದು 100 ರಿಂದ 146ಕಿಮೀ ದೂರ ಚಲಿಸಬಲ್ಲದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...