alex Certify ‘ಓಮಿಕ್ರಾನ್’​ ರೂಪಾಂತರಿಯ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಓಮಿಕ್ರಾನ್’​ ರೂಪಾಂತರಿಯ ಬಗ್ಗೆ ಅಧ್ಯಯನದಲ್ಲಿ ಬಯಲಾಯ್ತು ಬೆಚ್ಚಿಬೀಳಿಸುವ ಮಾಹಿತಿ

ಓಮಿಕ್ರಾನ್​ ವೈರಸ್​ ಕಡಿಮೆ ತೀವ್ರತೆಯನ್ನು ಹೊಂದಿರುವುದು ಸದ್ಯಕ್ಕೆ ಒಳ್ಳೆಯ ಸುದ್ದಿ. ಹಾಗೆಂದ ಮಾತ್ರಕ್ಕೆ ಎಲ್ಲ ಸಂಕಷ್ಟಗಳೂ ದೂರವಾಯ್ತು ಎಂದಲ್ಲ. ಕೋವಿಡ್​ 19 ಸೋಂಕು ಬಹಳ ಪರಿಣಾಮಕಾರಿಯಾಗಿ ಹರಡುತ್ತಿದೆ. ಇದು ಸೌಮ್ಯವಾಗಲು ಯಾವುದೇ ಕಾರಣಗಳು ಗೋಚರವಾಗುತ್ತಿಲ್ಲ. ಮುಂದಿನ ರೂಪಾಂತರಿಯು ಇನ್ನಷ್ಟು ಭಯಾನಕವಾಗಿರಬಹುದು ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಭಾರತೀಯ ಮೂಲದ ಪ್ರಮುಖ ವಿಜ್ಞಾನಿ ಎಚ್ಚರಿಕೆ ನೀಡಿದ್ದಾರೆ.

ಕೇಂಬ್ರಿಡ್ಜ್ ಇನ್​ಸ್ಟಿಟ್ಯೂಟ್​ ಫಾರ್​ ಥೆರಪ್ಯೂಟಿಕ್​ ಇಮ್ಯೂನಾಲಜಿ ಹಾಗೂ ಇನ್​ಫೆಕ್ಷಿಯಸ್​ ಡಿಸೀಸ್​ನಲ್ಲಿ ಕ್ಲಿನಿಕಲ್​ ಮೈಕ್ರೋಬಯಾಲಜಿಯ ಪ್ರೊಫೆಸರ್​ ಆಗಿರುವ ರವೀಂದ್ರ ಗುಪ್ತಾ ಅವರು ಓಮಿಕ್ರಾನ್​ ರೂಪಾಂತರಿಯ ಕುರಿತು ಅಧ್ಯಯನ ನಡೆಸಿದ್ದಾರೆ.

ಅಧ್ಯಯನದಲ್ಲಿ ತಿಳಿದು ಬಂದ ಮಾಹಿತಿಯ ಪ್ರಕಾರ ಹೊಸ ರೂಪಾಂತರಿಯಾದ ಓಮಿಕ್ರಾನ್​ ಶ್ವಾಸಕೋಶಗಳಿಗೆ ಕಡಿಮೆ ಪ್ರಮಾಣದಲ್ಲಿ ಸೋಂಕು ತಗುಲಿಸುತ್ತಿದೆ ಎಂದು ತಿಳಿದು ಬಂದಿದೆ. ಆದರೆ ಇದು ಹೀಗೆಯೇ ಸೌಮ್ಯವಾಗಿಯೇ ಇರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕಾಲಾಂತರಗಳಲ್ಲಿ ಇದು ತನ್ನ ತೀವ್ರತೆಯನ್ನು ಬದಲಾಯಿಸಬಹುದು ಎಂದು ಗುಪ್ತಾ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...