alex Certify ಒಮ್ಮೆ ಚಾರ್ಜ್‌ ಮಾಡಿದ್ರೆ 521 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್‌ SUV….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಮ್ಮೆ ಚಾರ್ಜ್‌ ಮಾಡಿದ್ರೆ 521 ಕಿಮೀ ಓಡುತ್ತೆ ಈ ಎಲೆಕ್ಟ್ರಿಕ್‌ SUV….!

ಚೀನಾದ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿ BYD ತನ್ನ ಎಲೆಕ್ಟ್ರಿಕ್ SUV BYD Atto 3 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆ 34 ಲಕ್ಷ ರೂಪಾಯಿಯಿಂದ ಆರಂಭ. ಈಗಾಗ್ಲೇ ಈ ಎಸ್‌ಯುವಿ ಖರೀದಿಗಾಗಿ 1500 ಮಂದಿ ಬುಕ್ಕಿಂಗ್‌ ಕೂಡ ಮಾಡಿದ್ದಾರೆ. BYD ಕಳೆದ ತಿಂಗಳ ಆರಂಭದಲ್ಲಿ Atto 3 ಎಲೆಕ್ಟ್ರಿಕ್ SUV ಅನ್ನು ಪರಿಚಯಿಸಿತ್ತು. ಅಕ್ಟೋಬರ್‌ 11ರಿಂದ್ಲೇ ಬುಕ್ಕಿಂಗ್‌ ಆರಂಭಿಸಿತ್ತು. 50 ಸಾವಿರ ರೂಪಾಯಿ ಡೌನ್‌ಪೇಮೆಂಟ್‌ ಮೂಲಕ ಈ ಎಸ್‌ಯುವಿಯನ್ನು ಬುಕ್‌ ಮಾಡಲು ಅವಕಾಶವಿದೆ.

2023ರ ಜನವರಿಯಿಂದ ಈ ಎಲೆಕ್ಟ್ರಿಕ್ ಎಸ್‌ಯುವಿ ವಿತರಣೆ  ಪ್ರಾರಂಭವಾಗಲಿದೆ. ಭಾರತದಲ್ಲಿ ಇದು ಹುಂಡೈ ಕೋನಾ ಮತ್ತು MG ZS EVಯೊಂದಿಗೆ ಪೈಪೋಟಿಗಿಳಿಯಲಿದೆ. BYD Atto 3 ಎಲೆಕ್ಟ್ರಿಕ್ SUV ಒಮ್ಮೆ ಚಾರ್ಜ್‌ ಮಾಡಿದ್ರೆ 521 ಕಿಮೀ ಓಡಬಲ್ಲ ಸಾಮರ್ಥ್ಯ ಹೊಂದಿದೆ. ಇದು 60.48kwh ಬ್ಯಾಟರಿ ಪ್ಯಾಕ್ ಹೊಂದಿದೆ. ವಾಹನದಲ್ಲಿ ಬ್ಲೇಡ್ ಬ್ಯಾಟರಿ ತಂತ್ರಜ್ಞಾನವನ್ನು ಬಳಸಲಾಗಿದ್ದು, ಬೆಂಕಿಯ ಸಾಧ್ಯತೆ ತೀರಾ ಕಡಿಮೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಕೇವಲ 7.3 ಸೆಕೆಂಡುಗಳಲ್ಲಿ ಸೊನ್ನೆಯಿಂದ 100 ಕಿಮೀ ವೇಗವನ್ನು ತಲುಪುತ್ತದೆ. DC ಫಾಸ್ಟ್ ಚಾರ್ಜರ್ ಮೂಲಕ 50 ನಿಮಿಷಗಳಲ್ಲಿ ಈ ಕಾರನ್ನು 80 ಪ್ರತಿಶತದಷ್ಟು ಚಾರ್ಜ್ ಮಾಡಬಹುದು.

ಸಾಕಷ್ಟು ವಿಶೇಷ ಫೀಚರ್‌ಗಳನ್ನುಳ್ಳ ಎಸ್‌ಯುವಿ ಇದು. ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ಸಪೋರ್ಟ್‌ನೊಂದಿದೆ. 12.8-ಇಂಚಿನ ಟಚ್‌ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಫ್ಲಾಟ್-ಬಾಟಮ್ ಸ್ಟೇರಿಂಗ್ ವೀಲ್ಸ್, 5 ಇಂಚಿನ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್, 360-ಡಿಗ್ರಿ ಕ್ಯಾಮೆರಾ, ಪನೋರಮಿಕ್ ಸನ್‌ರೂಫ್, 6-ವೇ ಪವರ್ ಅಡ್ಜಸ್ಟಬಲ್ ಡ್ರೈವರ್ ಸೀಟ್ ಹೀಗೆ ನಾನಾ ತೆರನಾದ ವೈಶಿಷ್ಟ್ಯಗಳು ಈ ಕಾರಿನಲ್ಲಿವೆ. ವೈರ್‌ಲೆಸ್ ಚಾರ್ಜಿಂಗ್ ಕೂಡ ಲಭ್ಯವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...