alex Certify ಒಂದೇ ಮನೆಯಲ್ಲಿ 6 ಹೆಬ್ಬಾವುಗಳು ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ಮನೆಯಲ್ಲಿ 6 ಹೆಬ್ಬಾವುಗಳು ಪತ್ತೆ

ಮನೆಯೊಂದರಲ್ಲಿ ಹೆಬ್ಬಾವುಗಳು ಆರಾಮದಾಯಕವಾಗಿ ಓಡಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಹಾಗಂತ ಈ ಮನೆ ಮಾಲೀಕರು ದೈತ್ಯ ಹೆಬ್ಬಾವುಗಳನ್ನು ಸಾಕುತ್ತಿಲ್ಲ. ಆದರೆ, ಸುಮಾರು ಆರು ಹೆಬ್ಬಾವುಗಳು ಈ ಮನೆಯಲ್ಲಿ ಕಾಣಿಸಿಕೊಂಡಿದೆ.

ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಸನ್‌ಶೈನ್ ಕೋಸ್ಟ್‌ನಲ್ಲಿರುವ ಬುಡೆರಿಮ್‌ ಸಮೀಪವಿರುವ ಮನೆಯೊಂದರಲ್ಲಿ ಆರು ದೈತ್ಯ ಹೆಬ್ಬಾವುಗಳು ಕಾಣಿಸಿಕೊಂಡಿವೆ. ಹಾವು ರಕ್ಷಕರೊಬ್ಬರು ಕುಟುಂಬದ ಮನೆಯಿಂದ ಆರು ಕಾರ್ಪೆಟ್ ಹೆಬ್ಬಾವುಗಳನ್ನು ಹೇಗೆ ರಕ್ಷಿಸಿದರು ಎಂಬುದರ ದೃಶ್ಯವನ್ನು ಚಿತ್ರೀಕರಿಸಿದ್ದಾರೆ.

ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಬಾಲ್ಕನಿಯಲ್ಲಿ ಮೂರು ಹಾವುಗಳನ್ನು ರಕ್ಷಿಸಿದ್ದನ್ನು ಉರಗ ತಜ್ಞ ತೋರಿಸಿದ್ದಾರೆ. ಮೊದಲು ಎರಡು ಕಾರ್ಪೆಟ್ ಹೆಬ್ಬಾವುಗಳನ್ನು ತೋರಿಸಿದ ಅವರು, ಇದು ಗಂಡು ಮತ್ತು ಹೆಣ್ಣು ಹಾವಿನಂತೆ ಕಾಣುತ್ತದೆ ಮತ್ತು ಅವೆರಡೂ ಪರಸ್ಪರ ಸಂಯೋಗ ಮಾಡಲಿವೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ನಂತರ, ಉರಗ ತಜ್ಞ ಅದೇ ಮನೆಗೆ ರಕ್ಷಿಸಲು ಬಂದ ಮತ್ತೊಂದು ಕಂಬಳಿ ಹೆಬ್ಬಾವನ್ನು ತೋರಿಸಿದ್ದಾರೆ. ಹಾವು ಬಾಲ್ಕನಿಯಲ್ಲಿ ಕುರ್ಚಿಯ ಮೇಲೆ ಅತ್ತಿಂದಿತ್ತ ಓಡಾಡುತ್ತಿತ್ತು. ಹಾವಿನ ಮಿಲನದ ಅವಧಿ ಮತ್ತು ಹತ್ತಿರದ ಮಳೆಕಾಡಿನ ಕಾರಣದಿಂದಾಗಿ, ನಾಲ್ಕು ಹೆಬ್ಬಾವುಗಳು 2-3 ದಿನಗಳ ಅವಧಿಯಲ್ಲಿ ಈ ಮನೆಯ ಬಾಲ್ಕನಿಯಲ್ಲಿ ಕಾಣಿಸಿಕೊಂಡವು.

ಒಟ್ಟಾರೆಯಾಗಿ, ಎರಡು ವಾರಗಳ ಅವಧಿಯಲ್ಲಿ ಆರು ಹೆಬ್ಬಾವುಗಳು ಅವರ ಮನೆಗೆ ಬಂದಿವೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಭಾರಿ ಸದ್ದು ಮಾಡುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...