alex Certify ಒಂದೇ ದಿನದ ʼಡ್ರಾʼ ಗಾಗಿ 200 ಲಾಟರಿ ಟಿಕೆಟ್‌ ಖರೀದಿ; ಈ ಅದೃಷ್ಟವಂತ ಗೆದ್ದಿದ್ದೆಷ್ಟು ಗೊತ್ತಾ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ದಿನದ ʼಡ್ರಾʼ ಗಾಗಿ 200 ಲಾಟರಿ ಟಿಕೆಟ್‌ ಖರೀದಿ; ಈ ಅದೃಷ್ಟವಂತ ಗೆದ್ದಿದ್ದೆಷ್ಟು ಗೊತ್ತಾ ?

ಅದೃಷ್ಟ ನಮ್ಮನ್ನು ಹುಡುಕಿಕೊಂಡು ಬರುತ್ತೆ ಅನ್ನೋ ಮಾತಿದೆ. ವರ್ಜೀನಿಯಾದ ವ್ಯಕ್ತಿಯೊಬ್ಬನಿಗೆ ನಿಜಕ್ಕೂ ಲಕ್‌ ಕುದುರಿದೆ. ಆತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಒಂದೇ ರೀತಿಯ 200 ಟಿಕೆಟ್‌ಗಳನ್ನು ಖರೀದಿಸಿದ್ದ. ಅವನ ಅದೃಷ್ಟ ಹೇಗಿತ್ತೆಂದರೆ 1 ಮಿಲಿಯನ್ ಡಾಲರ್‌ ಅಂದ್ರೆ 8 ಕೋಟಿಗೂ ಹೆಚ್ಚು ಮೊತ್ತದ ಲಾಟರಿಯನ್ನು ಆತ ಗೆದ್ದಿದ್ದಾನೆ.

ಅಲೆಕ್ಸಾಂಡ್ರಿಯಾದ ಅಲಿ ಘೇಮಿ ನಗರವನ್ನು ತೊರೆಯಲು ತಯಾರಿ ನಡೆಸುತ್ತಿದ್ದ. ವರ್ಜೀನಿಯಾದ ಅಂಗಡಿಯೊಂದರ ಬಳಿ ನಿಂತ ಆತ 1 ಡಾಲರ್‌ ಮೊತ್ತದ 200 ಲಾಟರಿ ಟಿಕೆಟ್‌ಗಳನ್ನು ಖರೀದಿಸಿಬಿಟ್ಟ. ಸಪ್ಟೆಂಬರ್‌ 6ಕ್ಕೆ ಲಾಟರಿ ಡ್ರಾ ನಿಗದಿಪಡಿಸಲಾಗಿತ್ತು. ಅಲಿ ಘೇಮಿ ಖರೀದಿಸಿದ ಎಲ್ಲಾ ಟಿಕೆಟ್‌ಗಳು 0-2-6-5 ಸಂಖ್ಯೆಗಳನ್ನು ಹೊಂದಿದ್ದವು.

ಇದು ಅವನ ಹುಟ್ಟಿದ ತಿಂಗಳು ಮತ್ತು ವರ್ಷವನ್ನು ಪ್ರತಿನಿಧಿಸುತ್ತದೆ. ವಿಶೇಷ ಅಂದ್ರೆ ಲಾಟರಿ ಡ್ರಾ ವೇಳೆ ಈ ಸಂಖ್ಯೆಗಳಿಗೇ ಬಹುಮಾನ ಬಂದಿದೆ. ಆತ ಸುಮಾರು 8 ಕೋಟಿಗೂ ಅಧಿಕ ಮೊತ್ತವನ್ನು ಲಾಟರಿಯಲ್ಲಿ ಗೆದ್ದಿದ್ದಾನೆ. ಲಾಟರಿಯಲ್ಲಿ ಹಣ ಗೆದ್ದ ಅಲಿ ಘೇಮಿ ಖುಷಿಯಿಂದ ಕುಣಿದಾಡಿದ್ದಾನೆ. ಲಾಟರಿ ಜೂಜು ಇದ್ದಂತೆ, ಒಮ್ಮೊಮ್ಮೆ ಅದೃಷ್ಟವಿದ್ದರೆ ಕೋಟಿಗಟ್ಟಲೆ ಹಣ ಆಟಗಾರರ ಕೈಸೇರುತ್ತದೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...