alex Certify ಒಂದೇ ತಿಂಗಳಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್‌ ಕಾರುಗಳನ್ನು ಮಾರಾಟ ಮಾಡಿದೆ ಈ ಕಂಪನಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದೇ ತಿಂಗಳಲ್ಲಿ ಅತಿ ಹೆಚ್ಚು ಎಲೆಕ್ಟ್ರಿಕ್‌ ಕಾರುಗಳನ್ನು ಮಾರಾಟ ಮಾಡಿದೆ ಈ ಕಂಪನಿ…!

ಜೂನ್‌ ತಿಂಗಳಿನಲ್ಲಿ ಟಾಟಾ ಮೋಟಾರ್ಸ್ ಕಂಪನಿ ಭರ್ಜರಿ ವಹಿವಾಟು ನಡೆಸಿದೆ. ಕಳೆದ ಒಂದು ತಿಂಗಳಲ್ಲಿ 45,197 ಪ್ರಯಾಣಿಕ ವಾಹನಗಳನ್ನು ಮಾರಾಟ ಮಾಡಿದೆ. ಈ ಬಗ್ಗೆ ಅಂಕಿ-ಅಂಶಗಳನ್ನು ಖುದ್ದು ಕಂಪನಿಯೇ ಬಿಡುಗಡೆ ಮಾಡಿದ್ದು, ಇದು ಒಂದೇ ತಿಂಗಳಲ್ಲಿ ಸಂಸ್ಥೆಯ ಅತ್ಯಧಿಕ ಮಾರಾಟವಾಗಿದೆ.

ಈ ಅವಧಿಯಲ್ಲಿ ಟಾಟಾ ಮೋಟಾರ್ಸ್‌ ಕಂಪನಿಯು ತನ್ನ ಮಾಸಿಕ ಅತಿ ಹೆಚ್ಚು ಎಲೆಕ್ಟ್ರಿಕ್ ವಾಹನ ಮಾರಾಟವನ್ನು ಕೂಡ ದಾಖಲಿಸಿದೆ. ಜೂನ್‌ನಲ್ಲಿ ಟಾಟಾ ಮೋಟಾರ್ಸ್‌ ಭಾರತದಲ್ಲಿ 3507 ಎಲೆಕ್ಟ್ರಿಕ್‌ ವಾಹನಗಳನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಕೇವಲ 658 EVಗಳು ಮಾರಾಟವಾಗಿದ್ದವು.

ಈ ವರ್ಷದ ಮೇ ತಿಂಗಳಿನಲ್ಲೂ ಕಂಪನಿ 3,454 ಎಲೆಕ್ಟ್ರಿಕ್‌ ವಾಹನಗಳನ್ನು ಮಾರಾಟ ಮಾಡಿತ್ತು. ಸದ್ಯ Tigor EV, Nexon EV ಮತ್ತು Nexon EV Max ಈ ಮೂರು ಎಲೆಕ್ಟ್ರಿಕ್‌ ಕಾರುಗಳು ಭರಾಟೆಯಲ್ಲಿ ಸೇಲ್‌ ಆಗ್ತಿವೆ. Tigor EV ಪ್ರತಿ ಚಾರ್ಜ್‌ಗೆ 306 ಕಿಮೀ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ. ಇದರ ಆರಂಭಿಕ ಬೆಲೆ 12.49 ಲಕ್ಷ ರೂಪಾಯಿ.

ನೆಕ್ಸಾನ್ EV ಪ್ರತಿ ಚಾರ್ಜ್‌ಗೆ 312 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಆದರೆ ಇದೇ ಮಾಡೆಲ್‌ನ ನೆಕ್ಸಾನ್‌ ಇವಿ ಮ್ಯಾಕ್ಸ್ ಕಾರು ಪ್ರತಿ ಚಾರ್ಜ್‌ಗೆ 437 ಕಿಮೀ ಚಾಲನಾ ವ್ಯಾಪ್ತಿಯನ್ನು ನೀಡುತ್ತದೆ. ಕ್ರಮವಾಗಿ ಇವುಗಳ ಬೆಲೆ 14.79 ಲಕ್ಷ ರೂಪಾಯಿ ಮತ್ತು 17.74 ಲಕ್ಷ ರೂಪಾಯಿಯಿಂದ ಆರಂಭವಾಗ್ತಿದೆ.

ಪ್ರಸ್ತುತ ಭಾರತದಲ್ಲಿ ಅಗ್ಗದ ಎಲೆಕ್ಟ್ರಿಕ್‌ ಕಾರುಗಳನ್ನು ಟಾಟಾ ಮೋಟಾರ್ಸ್ ಮಾರಾಟ ಮಾಡ್ತಿದೆ. ಮುಂಬರುವ ದಿನಗಳಲ್ಲಿ ಇತರ ಕಂಪನಿಗಳು ಸಹ ಅಗ್ಗದ ಕಾರುಗಳನ್ನು ಮಾರುಕಟ್ಟೆಗೆ ತರಬಹುದು. ಮಾರುತಿ ಸುಜುಕಿ ಕೂಡ ಇದೇ ಪ್ರಯತ್ನದಲ್ಲಿದೆ. ಮಹೀಂದ್ರಾ ಕೂಡ ಎಲೆಕ್ಟ್ರಿಕ್ ಕಾರುಗಳತ್ತ ಗಮನ ಹರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...