alex Certify ಒಂದಲ್ಲ, ಎರಡಲ್ಲ……ಐದು ಡೋಸ್ ಕೋವಿಡ್ ಲಸಿಕೆ ಪಡೆದ ವೈದ್ಯೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಒಂದಲ್ಲ, ಎರಡಲ್ಲ……ಐದು ಡೋಸ್ ಕೋವಿಡ್ ಲಸಿಕೆ ಪಡೆದ ವೈದ್ಯೆ…!

ಆದೇಶಿಸಿರುವುದಕ್ಕಿಂತ ಹೆಚ್ಚು ಡೋಸ್ ಕೋವಿಡ್ ವ್ಯಾಕ್ಸಿನ್ ಪಡೆದಿರುವ ಮತ್ತೊಂದು ಘಟನೆ ನಡೆದಿದೆ. ಈ ವಿಚಿತ್ರ ಘಟನೆಯು ಬಿಹಾರದಲ್ಲೆ ನಡೆದಿದ್ದು, ರಾಜ್ಯದ ರಾಜಧಾನಿ ಪಾಟ್ನಾದ ವೈದ್ಯೆಯೊಬ್ಬರು ಲಸಿಕೆ ಅಭಿಯಾನ ಶುರುವಾದ್ಮೇಲೆ ತಮ್ಮ ಪ್ಯಾನ್ ಕಾರ್ಡ್ ಬಳಸಿ, ವಿವಿಧ ದಿನಾಂಕಗಳಲ್ಲಿ ಐದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರಿ ದಾಖಲೆಗಳಲ್ಲಿ ಈ ಕೃತ್ಯ ಬಯಲಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಿನ ತನಿಖೆಗೆ ಬಿಹಾರ ಸರ್ಕಾರ ಆದೇಶಿಸಿದೆ.

ಈ ಆರೋಪಗಳನ್ನ ಅಲ್ಲಗೆಳೆದಿರುವ ವೈದ್ಯೆ ವಿಭಾ ಕುಮಾರಿ ಸಿಂಗ್, ನಾನು ಸರ್ಕಾರದ ಪ್ರೋಟೊಕಾಲ್ ನಂತೆ, ಮೊದಲ ಎರಡು ಡೋಸ್ ಹಾಗೂ ಮುನ್ನೆಚ್ಚರಿಕಾ ಡೋಸ್ ಸೇರಿ ಮೂರು ಡೋಸ್ ಲಸಿಕೆ ಪಡೆದಿದ್ದೇನೆ ಎಂದಿದ್ದಾರೆ. ಜೊತೆಗೆ ನನ್ನ ಪ್ಯಾನ್ ಕಾರ್ಡ್ ಬಳಸಿ ಬೇರೆ ಯಾರೋ ಲಸಿಕೆ ಪಡೆದಿದ್ದಾರೆ ಎಂದು ಆರೋಪಿಸಿರುವ ಅವರು, ಬೇಕಾದರೆ ತನಿಖೆ ನಡೆಸಿ ಎಂದಿದ್ದಾರೆ.

ಕೋವಿನ್ ಪೋರ್ಟಲ್ ನಲ್ಲಿ ಡಾ. ವಿಭಾ ಅವರು 2021ರ ಜನವರಿ 28ರಂದು ತಮ್ಮ ಮೊದಲ ಡೋಸ್ ಪಡೆದಿದ್ದರು. ಅಲ್ಲದೇ ಮಾರ್ಚ್ ಒಳಗೆ ಮತ್ತೊಂದು ಡೋಸ್ ಪಡೆದು ಸಂಪೂರ್ಣವಾಗಿ ವ್ಯಾಕ್ಸಿನೇಟ್ ಆಗಿದ್ದರು. ಆದರೆ ಸರ್ಕಾರಿ ದಾಖಲೆಗಳ ಪ್ರಕಾರ, ವಿಭಾ ಅವರು 2021ರ ಫಬ್ರವರಿ 6ರಂದು ಹಾಗೂ ಜೂನ್ 17ರಂದು ಲಸಿಕೆ ಪಡೆದಿದ್ದಾರೆ, ಅಲ್ಲದೇ 2022ರ ಜನವರಿ 13ರಂದು ಮುನ್ನೆಚ್ಚರಿಕಾ ಡೋಸ್ ಪಡೆದಿದ್ದಾರೆ. ಒಟ್ಟು ಐದು ಡೋಸ್ ಗಳನ್ನ ವಿಭಾ ಪಡೆದಿದ್ದಾರೆ ಎಂದು ದಾಖಲೆಗಳು ಹೇಳುತ್ತಿವೆ.

ಪಾಟ್ನಾ ಜಿಲ್ಲೆಯ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಸಿಂಗ್ ಈ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ್ದು, ತಪ್ಪಿತಸ್ತರಿಗೆ ತಕ್ಕ ಶಿಕ್ಷೆ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...