alex Certify ಐಪಿಎಲ್ ಪಂದ್ಯದ ವೇಳೆ ಮೊಣಕಾಲೂರಿ ಗೆಳೆಯನಿಗೆ ಯುವತಿಯಿಂದ ಪ್ರೇಮ ನಿವೇದನೆ: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್ ಪಂದ್ಯದ ವೇಳೆ ಮೊಣಕಾಲೂರಿ ಗೆಳೆಯನಿಗೆ ಯುವತಿಯಿಂದ ಪ್ರೇಮ ನಿವೇದನೆ: ವಿಡಿಯೋ ವೈರಲ್

ಬುಧವಾರ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯವನ್ನು ನೀವು ವೀಕ್ಷಿಸಿದ್ದರೆ, ಪುಣೆಯ ಎಂಸಿಎ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ನಡೆದ ಈ ಅಮೂಲ್ಯ ಕ್ಷಣವನ್ನು ನೀವು ಖಂಡಿತಾ ಮಿಸ್ ಮಾಡಿರಲು ಸಾಧ್ಯವಿಲ್ಲ.

ಆರ್ಸಿಬಿ ಕೊಟ್ಟ ಟಾರ್ಗೆಟ್ ಅನ್ನು ಚೆನ್ನೈ ತಂಡ ಚೇಸ್ ಮಾಡಲು ಹೆಣಗಾಡುತ್ತಿದ್ರೆ, ಪ್ರೇಕ್ಷಕರ ಗ್ಯಾಲರಿಯು ಆರ್ಸಿಬಿ ಅಭಿಮಾನಿಗಳ ಪ್ರೇಮ ನಿವೇದನೆಗೆ ಸುದ್ದಿಯಾಗಿದೆ. ಯುವತಿಯೊಬ್ಬಳು ತನ್ನ ಮೊಣಕಾಲಿನ ಮೇಲೆ ಕುಳಿತು, ಕ್ರೀಡಾಂಗಣಕ್ಕೆ ತನ್ನೊಂದಿಗೆ ಬಂದಿದ್ದ ಗೆಳೆಯನಿಗೆ ಪ್ರೇಮ ನಿವೇದನೆ ಮಾಡಿದ್ದಾಳೆ.

ಸಹಜವಾಗಿ, ಅವರಿಬ್ಬರ ಪ್ರೇಮ ಪ್ರಸ್ತಾಪದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜಿ ವೈರಲ್ ಆಗಿದೆ. ಈ ವಿಡಿಯೋ ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರ ಗಮನವನ್ನು ಸೆಳೆದಿದೆ. ಇನ್ನು ನೆಟ್ಟಿಗರಲ್ಲಿ ಕೆಲವರು ಇದನ್ನು ಜೋಡಿ ಗೋಲು ಎಂದು ಕರೆದ್ರೆ, ಇನ್ನೂ ಕೆಲವರು ಈ ಕ್ಷಣವನ್ನು ಪಂದ್ಯದ ಅತ್ಯುತ್ತಮ ಭಾಗವೆಂದು ಘೋಷಿಸಿದ್ದಾರೆ.

ಯುವತಿಯು ಗೆಳೆಯನಿಗೆ ಪ್ರೇಮ ನಿವೇದನೆ ಮಾಡುತ್ತಿರುವ ವಿಡಿಯೋ ದೇಶ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ವೈರಲ್ ಆಗಿದೆ. ಫಾಕ್ಸ್ ಕ್ರಿಕೆಟ್‌ನ ಇನ್ಸ್ಟಾಗ್ರಾಂ ಹ್ಯಾಂಡಲ್ ಈ ವಿಡಿಯೋವನ್ನು ಹಂಚಿಕೊಂಡಿದೆ.

ಇಲ್ಲಿಯವರೆಗೆ, ಪುರುಷರು ತಮ್ಮ ಮೊಣಕಾಲಿನ ಮೇಲೆ ಕುಳಿತು ಹುಡುಗಿಯರಿಗೆ ಪ್ರಪೋಸ್ ಮಾಡಿಕುವ ಹಲವಾರು ವಿಡಿಯೋಗಳನ್ನು ನಾವು ನೋಡಿದ್ದೇವೆ. ಆದರೆ, ಯುವತಿ ತನ್ನ ಬಾಯ್‌ಫ್ರೆಂಡ್‌ಗೆ ಪ್ರಪೋಸ್ ಮಾಡಲು ಮೊಣಕಾಲಿನ ಮೇಲೆ ಕುಳಿತಿರುವ ವಿಡಿಯೋ ನೆಟ್ಟಿಗರನ್ನು ವಿಸ್ಮಯಗೊಳಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...