alex Certify ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೇ ಉಳಿದ ಸುರೇಶ್​ ರೈನಾ…! ವೈರಲ್​ ಆಯ್ತು ಹಳೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೇ ಉಳಿದ ಸುರೇಶ್​ ರೈನಾ…! ವೈರಲ್​ ಆಯ್ತು ಹಳೆ ವಿಡಿಯೋ

ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪ್ರಬಲ ಆಟಗಾರ ಎನಿಸಿಕೊಂಡಿದ್ದ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸುರೇಶ್​ ರೈನಾ ಭಾನುವಾರ ನಡೆದ 2022 ನೇ ಸಾಲಿನ ಐಪಿಎಲ್​ ಹರಾಜು ಪ್ರಕ್ರಿಯೆಯಲ್ಲಿ ಮಾರಾಟವಾಗದೇ ಹಾಗೆಯೇ ಉಳಿದಿದ್ದು ಅಭಿಮಾನಿಗಳಿಗೆ ಶಾಕ್​ ಆಗಿದೆ.

ಮೊದಲ ದಿನ ಮಾರಾಟವಾಗದ ಹಿನ್ನೆಲೆಯಲ್ಲಿ 2 ಕೋಟಿ ರೂಪಾಯಿಗಳ ಮೂಲ ಬೆಲೆಯನ್ನು ಹೊಂದಿದ್ದ ಅನುಭವಿ ಬ್ಯಾಟ್ಸ್​ಮನ್​​ ಸುರೇಶ್​ ರೈನಾರನ್ನು ಎರಡನೇ ದಿನವೂ ಫ್ರಾಂಚೈಸಿಗಳು ನಿರ್ಲಕ್ಷಿಸಿದವು. ಹೀಗಾಗಿ ಐಪಿಎಲ್​ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ರೈನಾ ಮಾರಾಟವಾಗದೇ ಉಳಿದರು.

2008ರಲ್ಲಿ ಐಪಿಎಲ್​ ಸ್ಪರ್ಧೆಯು ಪ್ರಾರಂಭವಾದಾಗಿನಿಂದ ಎರಡನೇ ಬಾರಿಗೆ ಐಪಿಎಲ್​ನಲ್ಲಿ ರೈನಾರ ಕಮಾಲ್​ನ್ನು ಅಭಿಮಾನಿಗಳು ಮಿಸ್​​ ಮಾಡಿಕೊಳ್ಳಲಿದ್ದಾರೆ. ವೈಯಕ್ತಿಕ ಕಾರಣಗಳಿಂದಾಗಿ 2020ರಲ್ಲಿ ಯುಎಇನಿಂದ ಹಿಂದಿರುಗಿದ್ದ ಸುರೇಶ್​ ರೈನಾ ಐಪಿಎಲ್​ ಸೀಸನ್​ನಲ್ಲಿ ಆಟವಾಡಿರಲಿಲ್ಲ.

ಈ ನಡುವೆ ಸುರೇಶ್​ ರೈನಾರ ಹಳೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಎಂ.ಎಸ್. ಧೋನಿಯ ಉತ್ತಮ ಸ್ನೇಹಿತರಾಗಿರುವ ಸುರೇಶ್​ ರೈನಾ, ಈ ಹಿಂದೆ 2022ರ ಐಪಿಎಲ್​ ಸೀಸನ್​ನಲ್ಲಿ ಧೋನಿ ಇಲ್ಲದಿದ್ದರೆ ನಾನೂ ಆಟವಾಡೋದಿಲ್ಲ ಎಂದು ಹೇಳಿದ್ದರು. ಅಲ್ಲದೇ 2021ರಲ್ಲಿ ಸಿಎಸ್​ಕೆ ಐಪಿಎಲ್​ ಟ್ರೋಫಿಯನ್ನು ಗೆದ್ದರೆ 2022ರ ಐಪಿಎಲ್​ ಪಂದ್ಯವನ್ನು ಆಡಲು ನಾನು ಧೋನಿಯನ್ನು ಒಪ್ಪಿಸುವುದಾಗಿಯೂ ಹೇಳಿದ್ದರು. ಈ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಮತ್ತೊಮ್ಮೆ ಹರಿದಾಡುತ್ತಿದೆ.

ಎರಡು ವರ್ಷಗಳ ಕಾಲ ಸಿಎಸ್​ಕೆ ಫ್ರಾಂಚೈಸಿ ಬ್ಯಾನ್​ ಆಗಿದ್ದು ಹೊರತುಪಡಿಸಿದರೆ 2008 ರಿಂದಲೂ ಧೋನಿ ಹಾಗೂ ರೈನಾ ಸಿಎಸ್​ಕೆ ಪರವಾಗಿಯೇ ಆಟವಾಡುತ್ತಿದ್ದಾರೆ.

— ABHISHEK BAMNAVAT 🇮🇳 (@CoverDrive001) February 13, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...