alex Certify ಐಎಎಫ್​ ಟ್ಯಾಬ್ಲೋದಲ್ಲಿ ಭಾಗಿಯಾದ ದೇಶದ 2ನೇ ರೈಫಲ್​ ಜೆಟ್​ ಫೈಟರ್​ ಪೈಲಟ್​ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಎಎಫ್​ ಟ್ಯಾಬ್ಲೋದಲ್ಲಿ ಭಾಗಿಯಾದ ದೇಶದ 2ನೇ ರೈಫಲ್​ ಜೆಟ್​ ಫೈಟರ್​ ಪೈಲಟ್​ ಬಗ್ಗೆ ಇಲ್ಲಿದೆ ಮಾಹಿತಿ

ದೇಶವು 73ನೇ ವರ್ಷದ ಗಣರಾಜ್ಯೋತ್ಸವದ ಸಂಭ್ರಮದಲ್ಲಿದೆ. ಈ ಗಣರಾಜ್ಯೋತ್ಸವದ ಅಂಗವಾಗಿ ದೇಶದ ಮೊದಲ ಮಹಿಳಾ ರಫೇಲ್​ ಫೈಟರ್​ ಜೆಟ್​ ಪೈಲಟ್​​ ಶಿವಾಂಗಿ ಸಿಂಗ್​​ ಗಣರಾಜ್ಯೋತ್ಸವದ ಪರೇಡ್​​ನಲ್ಲಿ ಭಾರತೀಯ ವಾಯುಪಡೆಯ ಟ್ಯಾಬ್ಲೋದಲ್ಲಿ ಭಾಗಿಯಾಗಿದ್ದಾರೆ.

ಶಿವಾಂಗಿ ಸಿಂಗ್​ ಐಎಎಫ್​ ಟ್ಯಾಬ್ಲೋದ ಭಾಗವಾದ ಎರಡನೇ ಮಹಿಳಾ ಫೈಟರ್​​ ಜೆಟ್​ ಪೈಲಟ್​ ಆಗಿದ್ದಾರೆ. ಕಳೆದ ವರ್ಷ ಫ್ಲೈಟ್​ ಲೆಫ್ಟಿನೆಂಟ್​ ಭಾವನಾ ಕಾಂತ್​​​ ಐಎಎಫ್​​ ಟ್ಯಾಬ್ಲೋದಲ್ಲಿ ಭಾಗಿಯಾದ ಮೊದಲ ಮಹಿಳಾ ಫೈಟರ್​ ಜೆಟ್​ ಪೈಲಟ್​ ಎನಿಸಿಕೊಂಡಿದ್ದರು.

ವಾರಣಾಸಿ ಮೂಲದವರಾದ ಶಿವಾಂಗಿ ಸಿಂಗ್​ 2017ರಲ್ಲಿ ಐಎಎಫ್​​ಗೆ ಸೇರ್ಪಡೆಗೊಂಡಿದ್ದಾರೆ. ಇವರು ಐಎಎಫ್​​ನ ಎರಡನೇ ಬ್ಯಾಚ್​ ಮಹಿಳಾ ಫೈಟರ್​ ಪೈಲಟ್​ಗಳಲ್ಲಿ ನೇಮಕಗೊಂಡಿದ್ದಾರೆ. ಇವರು ರಫೇಲ್​​ ಗೂ ಮುನ್ನ ಮಿಗ್​ 21 ಬೈಸನ್​ ವಿಮಾನದ ಹಾರಾಟ ನಡೆಸುತ್ತಿದ್ದರು. ಇವರು ಪಂಜಾಬ್​​ನ ಅಂಬಾಲಾ ಮೂಲದ ಐಎಎಫ್​​ನ ಗೋಲ್ಡನ್​​ ಆರೋಸ್​ ಸ್ಕ್ವಾಡ್ರನ್​​ನ ಭಾಗವಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...