alex Certify ಏಕದಿನ ಸರಣಿಯ 2ನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್ ಗೆ ಭರ್ಜರಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಕದಿನ ಸರಣಿಯ 2ನೇ ಪಂದ್ಯ: ದಕ್ಷಿಣ ಆಫ್ರಿಕಾ ವಿರುದ್ಧ ಐರ್ಲೆಂಡ್ ಗೆ ಭರ್ಜರಿ ಜಯ

ಡಬ್ಲಿನ್ ನಲ್ಲಿ ನಡೆದ ದಕ್ಷಿಣ ಆಫ್ರಿಕಾ ಹಾಗೂ ಐರ್ಲೆಂಡ್ ನಡುವಣ ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡದ ನಾಯಕ ಬವುಮಾ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು.

ಮೊದಲು ಬ್ಯಾಟಿಂಗ್ ಮಾಡಿದ ಐರ್ಲ್ಯಾಂಡ್ ತಂಡದಲ್ಲಿ ಆರಂಭಿಕ ಆಟಗಾರ ಸ್ಟ್ರೈಲಿಂಗ್ 27 ರನ್ ಗಳಿಸಿ ಕೆ ಮಹಾರಾಜ್ ಬೌಲಿಂಗ್‌ನಲ್ಲಿ ಬೋಲ್ಡ್ ಆದರು. ಬಳಿಕ ಬಂದ ಆಂಡಿ ಮೆಕ್ ಬ್ರೈನ್ 30 ರನ್ ಗಳಿಸಿದ್ದು, ಶಾಮ್ಸಿ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಐರ್ಲೆಂಡ್ ತಂಡದ ನಾಯಕ ಆಂಡ್ರ್ಯೂ ಬಲ್ಬಿರ್ನಿ ಹಾಗೂ ಹ್ಯಾರಿ ಟೆಕ್ಟರ್ ಉತ್ತಮ ಜೊತೆಯಾಟವಾಡಿದರು.

ಬಲ್ಬಿರ್ನಿ 102 ರನ್ ಗಳಿಸಿ ರಬಾಡಾ ಬೌಲಿಂಗ್‌ನಲ್ಲಿ ಔಟಾದರೇ ಹ್ಯಾರಿ ಟೆಕ್ಟರ್ 79 ರನ್ ಗಳಿಸಿ ಅಂತಿಮ ಓವರ್ ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಐರ್ಲೆಂಡ್ ತಂಡ ಒಟ್ಟಾರೆ 5 ವಿಕೆಟ್ ನಷ್ಟಕ್ಕೆ 290 ರನ್ ಗಳ ಮೊತ್ತ ದಾಖಲಿಸಿತು.

ಹುಡುಗನ ದವಡೆಯಲ್ಲಿತ್ತು ಬರೋಬ್ಬರಿ 82 ಹಲ್ಲುಗಳು…!

ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡದಲ್ಲಿ ಐಡೆನ್ ಮಾರ್ಕ್ರಮ್ ಕೇವಲ 5ರನ್ ಗಳಿಸಿ, ಡೊಕ್ರೆಲ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ನಂತರ ಬಂದ ನಾಯಕ ಟೆಂಬಾ ಬವುಮಾ 10 ರನ್ ಗಳಿಸಿದ್ದು ಜೋಶುವಾ ಲಿಟಲ್ ಬೌಲಿಂಗ್‌ನಲ್ಲಿ ಔಟಾದರು. ಜನ್ನೆಮನ್ ಮಲನ್ ಹಾಗೂ ರಾಸ್ಸಿ ವಾನ್ ಡೆರ್ ಡುಸೆನ್ ಹೊರತುಪಡಿಸಿ ದಕ್ಷಿಣ ಆಫ್ರಿಕಾದ ಯಾವ ಬ್ಯಾಟ್ಸ್‌ಮನ್‌ ಗಳಿಂದಲೂ ಉತ್ತಮ ಪ್ರದರ್ಶನ ದೊರೆಯಲಿಲ್ಲ.

ಜನ್ನೆಮನ್ ಮಲನ್ 84ರನ್ ಗಳಿಸಿ ಔಟಾದರೇ ವಾನ್ ಡೆರ್ ಡುಸೆನ್ 49ರನ್ ಗಳಿಸಿದ್ದು ಆಂಡಿ ಮೆಕ್ ಬ್ರೈನ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ದಕ್ಷಿಣ ಆಫ್ರಿಕಾ ತಂಡ ಗುರಿ ತಲುಪುವಲ್ಲಿ ವಿಫಲವಾಗಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 247ರನ್ ಗಳಿಸಿತು. ಐರ್ಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 43ರನ್ ಗಳ ಭರ್ಜರಿ ಜಯ ಸಾಧಿಸಿದೆ. ಮೂರು ಏಕದಿನ ಸರಣಿಯಲ್ಲಿ ಮೊದಲನೇ ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯವನ್ನು ಐರ್ಲ್ಯಾಂಡ್ ಗೆಲ್ಲುವ ಮೂಲಕ 1-0 ಯಿಂದ ಮುನ್ನಡೆಯಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...