alex Certify ಎಳೆ ಮಕ್ಕಳಿಗೆ ಯಾವ ಯಾವ ಎಣ್ಣೆಯಿಂದ ‌ಮಸಾಜ್ ಮಾಡುವುದು ಒಳ್ಳೆಯದು….? ಇಲ್ಲಿದೆ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಳೆ ಮಕ್ಕಳಿಗೆ ಯಾವ ಯಾವ ಎಣ್ಣೆಯಿಂದ ‌ಮಸಾಜ್ ಮಾಡುವುದು ಒಳ್ಳೆಯದು….? ಇಲ್ಲಿದೆ ವಿವರ

8 benefits from pediatric massage for babies and children | Smart Tips

ಎಳೆ ಮಕ್ಕಳಿಗೆ ಎಣ್ಣೆಯಿಂದ ಮರ್ದನ ಮಾಡುವುದರಿಂದ ಅವರ ಬೆಳವಣಿಗೆ ಸರಿಯಾಗಿ ಆಗುತ್ತದೆ. ಅಷ್ಟೇ ಅಲ್ಲದೆ, ಹಾಯಾಗಿ ನಿದ್ರೆ ಹೋಗುವುದರಿಂದ ಚರ್ಮ ಆರೋಗ್ಯವಾಗಿ ಬದಲಾಗುತ್ತದೆ. ಆದ್ದರಿಂದ ಯಾವ ಯಾವ ಎಣ್ಣೆ ಮಸಾಜ್ ಒಳ್ಳೆಯದು ಅಂತ ನೋಡೋಣ.

ಕೊಬ್ಬರಿ ಎಣ್ಣೆ

ಉಳಿದ ಎಣ್ಣೆಗಳಿಗೆ ಹೋಲಿಸಿದರೆ ಕೊಬ್ಬರಿ ಎಣ್ಣೆ ತೆಳುವಾಗಿರುತ್ತದೆ. ಅದನ್ನು ಹಚ್ಚಿದ ತಕ್ಷಣವೇ ಚರ್ಮದಲ್ಲಿ ಇಂಗಿ ಹೋಗುತ್ತದೆ. ಚರ್ಮಕ್ಕೆ ತಂಪು ಉಂಟುಮಾಡುತ್ತದೆ. ಬೇಬಿ ಆಯಿಲ್ ಮತ್ತು ಕೊಬ್ಬರಿ ಎಣ್ಣೆ ಎರಡನ್ನೂ ಸಮ ಪಾಲಿನಲ್ಲಿ ತೆಗೆದುಕೊಂಡು ಮಕ್ಕಳಿಗೆ ಮರ್ದನ ಮಾಡಬೇಕು. ಒಂದು ಗಂಟೆ ಬಳಿಕ ಸ್ನಾನ ಮಾಡಿಸಬೇಕು. ಅದಾದ ಬಳಿಕ ಅವರು ಹಾಯಾಗಿ ನಿದ್ರಿಸುತ್ತಾರೆ.

ಸಾಸಿವೆ ಎಣ್ಣೆ

ಸಾಸಿವೆ ಎಣ್ಣೆಯನ್ನು ಎಂದಿಗೂ ನೇರವಾಗಿ ಬಳಸಬಾರದು. ಯಾಕೆಂದರೆ ಇದಕ್ಕೆ ಬಿಸಿಯ ಗುಣವಿದೆ. ಚರ್ಮಕ್ಕೆ ಹಚ್ಚಿದಾಗ ದೇಹವು ಬಿಸಿಯಾಗುತ್ತದೆ. ಆದರೆ ಲ್ಯಾವೆಂಡರ್, ಜೋಜೋಬಾ, ಜಾಸ್ಮಿನ್ ಅಂತಹ ಎಸೆನ್ಶಿಯಲ್ ಎಣ್ಣೆಗಳಲ್ಲಿ ಒಂದನ್ನು ಇದರೊಂದಿಗೆ ಬೆರೆಸಿ ಹಚ್ಚಿದರೆ ಮಕ್ಕಳ ದೇಹ ಉತ್ತೇಜಿತಗೊಳ್ಳುತ್ತದೆ. ಅಲಸಿಕೆ ದೂರವಾಗುತ್ತದೆ. ಚರ್ಮ ಕೋಮಲವಾಗಿ ಬದಲಾಗುತ್ತದೆ.

ಆಲಿವ್ ಎಣ್ಣೆ

ಮಕ್ಕಳಿಗೆ ಮರ್ದನ ಮಾಡಲು ಬಳಸುವ ಎಣ್ಣೆಗಳಲ್ಲಿ ಆಲಿವ್ ಮೊದಲ ಸ್ಥಾನದಲ್ಲಿದೆ. ಚರ್ಮಕ್ಕೆ ತುಂಬಾ ಒಳಿತು ಉಂಟು ಮಾಡುತ್ತದೆ. ದಪ್ಪಗಿರುವ ಎಣ್ಣೆ ಹಚ್ಚಿದಾಗ ಮಾಂಸಖಂಡಗಳು, ಕೀಲುಗಳು ಉತ್ತೇಜನ ಹೊಂದುತ್ತದೆ. ಮಕ್ಕಳ ಬೆಳವಣಿಗೆಯಲ್ಲಿ ಆಲಿವ್ ಎಣ್ಣೆ ಪ್ರಧಾನ ಪಾತ್ರ ನಿರ್ವಹಿಸುತ್ತದೆ.

ಬಾದಾಮಿ ಎಣ್ಣೆ

ಈ ಎಣ್ಣೆಯಲ್ಲಿ ವಿಟಮಿನ್ ‘ಇ’ ಹೇರಳವಾಗಿರುತ್ತದೆ. ಈ ವಿಟಮಿನ್ ಚರ್ಮಕ್ಕೆ ಯಾವುದೇ ರೀತಿಯಲ್ಲೂ ಹಾನಿ ಉಂಟು ಮಾಡದೆ ರಕ್ಷಣೆ ನೀಡುತ್ತದೆ. ಅಷ್ಟೇ ಅಲ್ಲದೆ, ಈ ಎಣ್ಣೆಯಿಂದ ಮರ್ದನ ಮಾಡಿ ಸ್ನಾನ ಮಾಡಿಸಿದರೆ ಮಕ್ಕಳು ಹಾಯಾಗಿ ನಿದ್ರಿಸುತ್ತಾರೆ.

ಹರಳೆಣ್ಣೆ

ಮೊದಲೆಲ್ಲ ತಲೆಗೆ, ಮೈಗೆ ಈ ಎಣ್ಣೆಯನ್ನು ಬಳಸಲಾಗುತ್ತಿತ್ತು. ಕ್ರಮೇಣ ಇದರ ಬಳಕೆ ಕಡಿಮೆಯಾಗಿದೆ. ಈ ತೈಲದಿಂದ ಚರ್ಮಕ್ಕೆ ತೇವಾಂಶ ದೊರಕುತ್ತದೆ. ಶರೀರವು ಮೃದುವಾಗಿ ಬದಲಾಗುತ್ತದೆ. ಶುಷ್ಕತೆ ಹತ್ತಿರ ಸುಳಿಯದು. ಹರಳೆಣ್ಣೆಯನ್ನು ನೇರವಾಗಿ ಬಳಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...