alex Certify ಎಲ್ಲರ ಹೃದಯಗೆದ್ದ ‌ʼಜೋಶ್‌ʼ ಕಲಾವಿದ ದಿಲೀಪ್; ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲೂ ಮಿಂಚು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಲ್ಲರ ಹೃದಯಗೆದ್ದ ‌ʼಜೋಶ್‌ʼ ಕಲಾವಿದ ದಿಲೀಪ್; ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲೂ ಮಿಂಚು

ಬೆಂಗಳೂರಿನ ನೃತ್ಯಪಟು, ʼಜೋಶ್‌ʼ ಕಲಾವಿದ ದಿಲೀಪ್ ಇಡೀ ಭಾರತವೇ ಹೆಮ್ಮೆಪಡುವಂತಹ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಮಧ್ಯಮ ಕುಟುಂಬದ ಈ ಯುವ ನೃತ್ಯ ಪಟು ಪೋರ್ಚುಗಲ್‌ನಲ್ಲಿ ನಡೆದ ಡ್ಯಾನ್ಸ್ ವರ್ಲ್ಡ್ ಕಪ್ ಸ್ಪರ್ಧೆಯಲ್ಲಿ ಫೈನಲ್ ಹಂತ ತಲುಪಿದ್ದಾರೆ. ಈ ಮೂಲಕ ಬೆಂಗಳೂರು, ಕರ್ನಾಟಕ ಮಾತ್ರವಲ್ಲದೇ ಇಡೀ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡಿದ್ದಾರೆ.

ತನ್ನ ಅದ್ಬುತ ನೃತ್ಯದ ಮೂಲಕ ನೃತ್ಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯಿಂದ ಭಾರೀ ಸಂಚಲನ ಮೂಡಿಸುತ್ತಿರುವ ʼಜೋಶ್ʼ ಕಲಾವಿದ ದಿಲೀಪ್ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6 ರ ಅಂತಿಮ ಹಂತವನ್ನು ತಲುಪುವ ಮೂಲಕ ಇಡೀ ಕರ್ನಾಟಕಕ್ಕೆ ನೆಚ್ಚಿನ ನೃತ್ಯಪಟುವಾಗಿದ್ದರು.

Dilip

21 ವರ್ಷದ ʼಜೋಶ್ʼ ಕಲಾವಿದ ದಿಲೀಪ್ ಬಾಲ್ಯದಿಂದಲೂ ನೃತ್ಯದತ್ತ ಒಲವು ಹೊಂದಿದ್ದರು. ಬೆಂಗಳೂರಿನ ಕಲಾನಿಧಿ ಕಲಾ ಸ್ಟುಡಿಯೋದಲ್ಲಿ ನೃತ್ಯ ತರಬೇತಿ ಪಡೆದರು. ಮಧ್ಯಮ ವರ್ಗದ ಕುಟುಂಬದಿಂದ ಬಂದಿರುವ ಈ ಯುವಕನ ತಂದೆ ಡ್ರೈವರ್, ತಾಯಿ ಟೈಲರ್ ಆಗಿದ್ದು ಕುಟುಂಬಕ್ಕಿದ್ದ ಆರ್ಥಿಕ ಅಡ್ಡಿಯನ್ನ ಮೆಟ್ಟಿ ನೃತ್ಯ ಕ್ಷೇತ್ರದಲ್ಲಿ ಮುಂದೆ ಬಂದಿದ್ದರು.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅಲ್ಲದೆ ಹಲವು ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ದಿಲೀಪ್ ಭಾಗವಹಿಸಿದ್ದಾರೆ. ಇಲ್ಲಿಯವರೆಗೆ ಅವರು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವಾರು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಾರೆ ಮತ್ತು ಸುಮಾರು 150 ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ. ದಿಲೀಪ್ ʼಜೋಶ್‌ʼ ನಲ್ಲಿ ಸುಮಾರು 1.7 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ.

ದಿಲೀಪ್ ಅವರು ತಮ್ಮ ಪವರ್ ಡ್ಯಾನ್ಸ್ ಸ್ಟೆಪ್‌ಗಳಿಗೆ ಹೆಸರುವಾಸಿಯಾಗಿದ್ದಾರೆ. ಬ್ರೇಕ್‌ಡ್ಯಾನ್ಸ್, ಹಿಪ್ ಹಾಪ್, ಲಾಕಿಂಗ್, ಹೌಸ್ ಡ್ಯಾನ್ಸ್, ಕ್ರಂಪ್, ಕಾಂಟೆಂಪರರಿ, ಫೋಕ್ ಡ್ಯಾನ್ಸ್, ಬಾಲಿವುಡ್, ಲೈಟ್ ಫುಟ್, ಮತ್ತು ವ್ಯಾಕಿಂಗ್‌ನಂತಹ ನೃತ್ಯ ಪ್ರಕಾರಗಳಿಗೆ ಹೆಸರುವಾಸಿಯಾಗಿದ್ದಾರೆ.

ಅಲ್ಲದೆ 2019 ರಲ್ಲಿ ಪೋರ್ಚುಗಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ನೃತ್ಯ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ಅವರು ರಾಷ್ಟ್ರಕ್ಕೆ ಹೆಮ್ಮೆ ತಂದರು. 2022 ರಲ್ಲಿ ಮುಂಬೈನಲ್ಲಿ ನಡೆದ ಭಾರತೀಯ ಅರ್ಹತಾ ಪಂದ್ಯಗಳಲ್ಲಿ ದಿಲೀಪ್ ಅಂತರರಾಷ್ಟ್ರೀಯ ಕಂಚಿನ ಪದಕವನ್ನೂ ಗೆದ್ದಿದ್ದಾರೆ.

 

ಡ್ಯಾನ್ಸಿಂಗ್ ಸ್ಟಾರ್ (3), ದಿ ಜೋಡಿ , ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (5), ದಿ ಡ್ಯಾನ್ಸಿಂಗ್ ಐಕಾನ್, ಡ್ಯಾನ್ಸಿಂಗ್ ಚಾಂಪಿಯನ್ ಮತ್ತು ಡ್ಯಾನ್ಸ್ ಡ್ಯಾನ್ಸ್ ಶೋಗಳಲ್ಲೂ ದಿಲೀಪ್ ತಮ್ಮ ಹೆಜ್ಜೆ ಹಾಕಿ ರಂಜಿಸಿದ್ರು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...