alex Certify ಎದೆ ಝಲ್ ಎನಿಸುವಂತಿದೆ ಭೀಕರ ಅಪಘಾತ; ವೃದ್ಧೆಯ ಮೇಲೆಯೇ ಹರಿದ ಲಾರಿ; ಸ್ಥಳದಲ್ಲೇ ಉಸಿರು ಚೆಲ್ಲಿದ ಹಿರಿ ಜೀವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎದೆ ಝಲ್ ಎನಿಸುವಂತಿದೆ ಭೀಕರ ಅಪಘಾತ; ವೃದ್ಧೆಯ ಮೇಲೆಯೇ ಹರಿದ ಲಾರಿ; ಸ್ಥಳದಲ್ಲೇ ಉಸಿರು ಚೆಲ್ಲಿದ ಹಿರಿ ಜೀವ

ಬಳ್ಳಾರಿ: ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಚಕ್ರಕ್ಕೆ ಸಿಲುಕಿದ ವೃದ್ಧೆಯೊಬ್ಬರು ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ.

ಬಳ್ಳಾರಿಯ ಜಿಂದಾಲ್ ಕಾರ್ಖಾನೆ ಎದುರು ನಡೆದು ಹೋಗುತ್ತಿದ್ದ ವೃದ್ಧೆಯ ಮೇಲೆ ಲಾರಿಯೊಂದು ಹರಿದಿದೆ. ಲಾರಿಯ ಚಕ್ರದಡಿಗೆ ಸಿಲುಕಿದ ವೃದ್ಧೆಯ ಜೀವ ಅಪ್ಪಚ್ಚಿಯಾಗಿದೆ. ಆದರೂ ಲಾರಿ ಚಾಲಕ ತನಗೇನೂ ಗೊತ್ತೇ ಆಗಿಲ್ಲ ಎಂಬಂತೆ ಲಾರಿ ಚಲಾಯಿಸಿಕೊಂಡು ಹೋಗಿದ್ದಾನೆ.

ʼಶಿವಸೇನೆʼ ಸರ್ಕಾರ ಉರುಳಿಸಿ ಬಾಳಾ ಠಾಕ್ರೆ ಫೋಟೋವನ್ನು ಟ್ವಿಟರ್​ನಲ್ಲಿ ಹಂಚಿಕೊಂಡ ‘ಮಹಾ’ಸಿಎಂ ಶಿಂಧೆ

ಈ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನಿಸುವಂತಿದೆ. ಜಿಂದಾಲ್ ಕಾರ್ಖಾನೆ ಓಲ್ಡ್ ಗೇಟ್ ಬಳಿ ಈ ಅಪಘಾತ ಸಂಭವಿಸಿದ್ದು, ತೋರಣಗಲ್ ಪೊಲೀಸರು ಲಾರಿ ಚಾಲಕನ್ನು ವಶಕ್ಕೆ ಪಡೆದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...