alex Certify ಎಥೆನಾಲ್ ಮಾತ್ರವಲ್ಲ ವಿದ್ಯುತ್ ಬಳಕೆಯಿಂದಲೂ ಓಡುತ್ತೆ ಈ ಕಾರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎಥೆನಾಲ್ ಮಾತ್ರವಲ್ಲ ವಿದ್ಯುತ್ ಬಳಕೆಯಿಂದಲೂ ಓಡುತ್ತೆ ಈ ಕಾರು…!

ಮಾಲಿನ್ಯ ನಿಯಂತ್ರಣಕ್ಕಾಗಿ ದೇಶದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಈ ಪೈಕಿ ಎಲೆಕ್ಟ್ರಿಕ್ ವಾಹನಗಳ ಬಳಕೆಯೂ ಒಂದು. ಇದೀಗ ಟೊಯೋಟಾ ಕಂಪನಿ ಕಾರೊಂದನ್ನು ಅಭಿವೃದ್ಧಿಪಡಿಸಿದ್ದು, ಇದು ಎಥೆನಾಲ್ ಮಾತ್ರವಲ್ಲದೆ ವಿದ್ಯುತ್ ಬಳಕೆಯಿಂದಲೂ ಚಲಿಸುತ್ತದೆ.

ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳವಾರದಂದು ಈ ಹೈಬ್ರಿಡ್ ಕಾರನ್ನು ಅನಾವರಣಗೊಳಿಸಿದ್ದು, ಕೊರೊಲಾ ಆಲ್ವಿಸ್ ಎಫ್ ಎಫ್ ವಿ -ಎಸ್ ಹೆಚ್ ಇ ವಿ ಹೆಸರಿನ ಈ ಕಾರು ಪ್ರಯೋಗಾರ್ಥವಾಗಿ ಅನಾವರಣ ಮಾಡಲಾಗಿದೆ.

ಈ ಕಾರಿನಲ್ಲಿ ವಿದ್ಯುತ್ ಚಾಲಿತ ಮೋಟಾರ್ ಜೊತೆಗೆ ಜೈವಿಕ ಇಂಧನ ಬಳಸುವ ಎಂಜಿನ್ ಅಳವಡಿಸಲಾಗಿದ್ದು, ಹೀಗಾಗಿ ವಿದ್ಯುತ್ ಜೊತೆಗೆ ಎಥೆನಾಲ್ ಬಳಕೆಯಿಂದಲೂ ಚಲಿಸುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಕಾರುಗಳನ್ನು ರಸ್ತೆಗಿಳಿಸುವ ಯೋಜನೆ ಟೊಯೋಟೊ ಕಂಪನಿಗಿದೆ.

— Nitin Gadkari (@nitin_gadkari) October 11, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...