alex Certify ಎತ್ತಿನಗಾಡಿ ಓಟ ಸ್ಪರ್ಧೆ, ಕಂಬಳ, ಕೋಳಿ ಪಂದ್ಯ ಕೇಳಿರುತ್ತೀರಿ….. ಇಲ್ಲಿ ನಡೆಸಲಾಗುತ್ತೆ ಕತ್ತೆ ರೇಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಎತ್ತಿನಗಾಡಿ ಓಟ ಸ್ಪರ್ಧೆ, ಕಂಬಳ, ಕೋಳಿ ಪಂದ್ಯ ಕೇಳಿರುತ್ತೀರಿ….. ಇಲ್ಲಿ ನಡೆಸಲಾಗುತ್ತೆ ಕತ್ತೆ ರೇಸ್…!

ನೀವು ಬಹುಶಃ ಕೋಳಿ ಪಂದ್ಯಗಳು, ಬುಲ್-ಫೈಟ್ಸ್ ಅಥವಾ ಕುದುರೆ ರೇಸ್ ಗಳ ಬಗ್ಗೆ ಕೇಳಿರಬಹುದು. ಆದರೆ, ಇಲ್ಲೊಂದೆಡೆ ಕತ್ತೆ ರೇಸ್ ಗೆ ಬಹಳ ಫೇಮಸ್ ಆಗಿದೆ. ಅದು ಎಲ್ಲಿ ಅಂತೀರಾ ಈ ಸ್ಟೋರಿ ಓದಿ…..

ತೆಲಂಗಾಣ ರಾಜ್ಯದ ಕರ್ನೂಲ್ ಜಿಲ್ಲೆಯಲ್ಲಿ ವಿಭಿನ್ನವಾದ ಕತ್ತೆ ರೇಸ್ ನಡೆಸಲಾಗುತ್ತದೆ. ಕರ್ನೂಲ್ ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಕತ್ತೆ ರೇಸ್ ಜನಪ್ರಿಯವಾಗಿದೆ. ಓಟವು ಹೇಗಿರುತ್ತದೆ ಅಂದ್ರೆ, ಹಳ್ಳಿಗರು ಕತ್ತೆಗಳ ಬೆನ್ನಿನ ಮೇಲೆ ಸ್ವಲ್ಪ ಭಾರವನ್ನು ಸೇರಿಸುತ್ತಾರೆ. ನಂತರ ಪ್ರಾಣಿಗಳನ್ನು ನಿಗದಿತ ಸಮಯದವರೆಗೆ ಓಟಕ್ಕೆ ಬಳಸಲಾಗುತ್ತದೆ. ಈ ಸ್ಟೋರಿ ಓದುತ್ತಿದ್ರೆ, ನಿಮಗಿದು ವಿಚಿತ್ರವೆನಿಸಬಹುದು. ಆದರೆ, ಜಿಲ್ಲೆಯ ಹಲವಾರು ಹಳ್ಳಿಗಳಲ್ಲಿ ಈ ರೇಸ್ ಬಹಳ ಪ್ರಸಿದ್ಧವಾಗಿದೆ.

ಎತ್ತಿನ ಗಾಡಿ ಎಳೆಯುವುದು, ಕುರಿ ಮತ್ತು ಹಂದಿಗಳ ಕಾದಾಟ ಇಲ್ಲಿ ಸಾಮಾನ್ಯ ಚಟುವಟಿಕೆಗಳಾಗಿವೆ. ಇತ್ತೀಚಿಗೆ ಕೆಲವು ಗ್ರಾಮಸ್ಥರು ಕತ್ತೆ ಹಾಲು ಮಾರಾಟ ಮಾಡಿ ಹಣ ಗಳಿಸಲು ಮುಂದಾಗಿದ್ದಾರೆ. ಅಲ್ಲಗಡ್ಡ, ರುದ್ವಾರಂ, ಚಗಳಮರ್ರಿ, ಕೋವೆಲಕುಂಟಾ, ಬನಗನಪಲ್ಲಿ, ಕೋಡುಮೂರು, ಅವುಕು, ಪತ್ತಿಕೊಂಡ, ಆದೋನಿ, ಕಲ್ಲೂರು, ವೇಲುಗೋಡಿ ಮುಂತಾದ ಗ್ರಾಮಗಳಲ್ಲಿ ಈ ಕ್ರೀಡೆ ಸಾಮಾನ್ಯವಾಗಿದೆ. ಈ ಗ್ರಾಮಸ್ಥರು ಇದೀಗ ಸಂಕ್ರಾಂತಿ ಹಬ್ಬಕ್ಕೆ ಸಜ್ಜಾಗುತ್ತಿದ್ದಾರೆ.

ಕತ್ತೆಗಳ ಓಟಕ್ಕೆಂದೇ ಜನರು ಮಾರುಕಟ್ಟೆಯಲ್ಲಿ ಪ್ರಾಣಿಗಳನ್ನು ಖರೀದಿಸುತ್ತಾರೆ. ಹಬ್ಬದ ಪ್ರಯುಕ್ತ ಜನರು ಮಾರುಕಟ್ಟೆಯಲ್ಲಿ ಕತ್ತೆಗಳ ಮಾರಾಟ ಮತ್ತು ಖರೀದಿಯಲ್ಲಿ ನಿರತರಾಗಿದ್ದಾರೆ. ಕಾರ್ಯಕ್ರಮಗಳಲ್ಲಿ ಕತ್ತೆಗಳನ್ನು ಗೆಲ್ಲಲು ಸಿದ್ಧಪಡಿಸಲು, ಜನರು ಉತ್ತಮ ಮತ್ತು ಪೌಷ್ಟಿಕ ಆಹಾರವನ್ನು ನೀಡುತ್ತಾರೆ. ಇದರಲ್ಲಿ ಸಾಮಾನ್ಯ ಮೇವಿನ ಜೊತೆಗೆ ಶಕ್ತಿ ಹೆಚ್ಚಿಸಲು ಸುಮಾರು 2 ಕೆ.ಜಿ.ಗಳಷ್ಟು ಬೇಳೆಕಾಳುಗಳು, ಹಸಿಬೇಳೆ, ಬೆಲ್ಲ, ಭತ್ತ ಮತ್ತು ಇತರ ಕೆಲವು ವಸ್ತುಗಳನ್ನು ಒಳಗೊಂಡಿರುತ್ತದೆ.

ಅಪರೂಪದ ನಗುವಿನ ಕಾಯಿಲೆಯಿಂದ ಬಳಲುತ್ತಿರುವ 3 ವರ್ಷದ ಬಾಲಕಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಯುಗಾದಿ, ರಾಮ ನವಮಿ, ಸಂಕ್ರಾಂತಿ, ಕಾಶಿನಾಯನ ಉತ್ಸವ, ದೇವಿಯ ಬ್ರಹ್ಮೋತ್ಸವ ಮತ್ತು ಇತರ ಕೆಲವು ಸ್ಥಳೀಯ ಕಾರ್ಯಕ್ರಮಗಳಲ್ಲಿ ಕತ್ತೆ ಓಟವನ್ನು ಏರ್ಪಡಿಸಲಾಗುತ್ತದೆ. ಹಬ್ಬ ಹರಿದಿನಗಳಂದು ಈ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆ. ಈ ಕಾರ್ಯಕ್ರಮವನ್ನು ನಂದ್ಯಾಲ್, ಚಗಲಮರ್ರಿ, ಕರ್ನೂಲ್, ಅಳ್ವಕೊಂಡ, ಕೋವೆಲಕುಂಟ್ಲ ಮುಂತಾದ ಸ್ಥಳಗಳಲ್ಲಿ ನಡೆಸಲಾಗುತ್ತದೆ.

ಹಬ್ಬ ಹರಿದಿನಗಳಲ್ಲಿ ಇಂತಹ ಕತ್ತೆ ಓಟದ ಕಾರ್ಯಕ್ರಮಗಳು ಹೆಚ್ಚಾಗಿ ಕಂಡು ಬರುವುದರಿಂದ ಮುಕ್ತ ಮಾರುಕಟ್ಟೆಯಲ್ಲಿ ಅವುಗಳ ಬೆಲೆ 40,000 ರಿಂದ 1 ಲಕ್ಷ ರೂ. ಗಳವರೆಗೆ ಇರುತ್ತದೆ. ಕಾರ್ಯಕ್ರಮಗಳನ್ನು ನಡೆಸುವ ಜನರು ಕತ್ತೆಗಳನ್ನು ಅವುಗಳ ಗಾತ್ರ ಮತ್ತು ಎತ್ತರದ ಆಧಾರದ ಮೇಲೆ ಖರೀದಿಸುತ್ತಾರೆ. ಓಟವನ್ನು ಗೆಲ್ಲಲು ತರಬೇತಿ ನೀಡುತ್ತಾರೆ. ತರಬೇತಿಯು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಎರಡು ಬಾರಿ ಕತ್ತೆಗಳ ಬೆನ್ನಿನ ಮೇಲೆ 100 ಕೆಜಿಯಿಂದ 200 ಕೆ.ಜಿ ತೂಕವನ್ನು ಹೊರಿಸುವ ಮುಖಾಂತರ ತರಬೇತಿ ನೀಡಲಾಗುತ್ತದೆ.

ಕತ್ತೆಗಳು ನಿಗದಿತ ಸಮಯದಲ್ಲಿ ಓಟದಲ್ಲಿ 200 ಕೆ.ಜಿ ತೂಕದ ಮರಳಿನ ಚೀಲಗಳನ್ನು ಬೆನ್ನಿನ ಮೇಲೆ ಹೊತ್ತು ಓಡಬೇಕು. ಸಂಕ್ರಾಂತಿ ಸಮೀಪಿಸುತ್ತಿರುವುದರಿಂದ ಈ ವರ್ಷವೂ ಕತ್ತೆ ಕಾಳಗಕ್ಕಾಗಿ ಜನ ಕಾತರದಿಂದ ಕಾಯುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...