alex Certify ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಕೂಗಿದ ಕಾಲೇಜು ವಿದ್ಯಾರ್ಥಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಕೂಗಿದ ಕಾಲೇಜು ವಿದ್ಯಾರ್ಥಿಗಳು

ಕನ್ನಡ ಸೇರಿದಂತೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟಿಸಿರುವ ಊರ್ವಶಿ ರೌಟೇಲ ಇತ್ತೀಚೆಗೆ ಮುಜುಗರದ ಸನ್ನಿವೇಶವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಊರ್ವಶಿ ಕಾಲೇಜು ಸಮಾರಂಭವೊಂದಕ್ಕೆ ಅತಿಥಿಯಾಗಿ ತೆರಳಿದ್ದ ವೇಳೆ ಈ ಘಟನೆ ನಡೆದಿದೆ.

ಊರ್ವಶಿ ರೌಟೇಲ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗುತ್ತಿರುವಾಗ ಕಾಲೇಜು ವಿದ್ಯಾರ್ಥಿಗಳು ‘ಪಂತ್’ ‘ಪಂತ್’ ಎಂದು ಕೂಗಿದ್ದಾರೆ. ಇದರಿಂದ ಊರ್ವಶಿ ರೌಟೇಲಾ ಮುಜುಗರಕ್ಕೊಳಗಾದರೂ ಅದನ್ನು ತೋರ್ಪಡಿಸದೆ ನಗುನಗುತ್ತಲೇ ಮುಂದೆ ಸಾಗಿದ್ದಾರೆ.

ಅಷ್ಟಕ್ಕೂ ಊರ್ವಶಿ ರೌಟೇಲಾರನ್ನು ಕಾಣುತ್ತಲೇ ‘ಪಂತ್’ ಎಂದು ಟೀಮ್ ಇಂಡಿಯಾ ಆಟಗಾರ ರಿಷಬ್ ಪಂತ್ ಹೆಸರು ಕೂಗಿದ್ದರ ಹಿಂದೆ ಕಾರಣವೂ ಇದೆ. ಊರ್ವಶಿ ರೌಟೇಲಾ, ರಿಷಬ್ ಪಂತ್ ಜೊತೆ ಡೇಟಿಂಗ್ ನಲ್ಲಿದ್ದಾರೆ ಎಂಬ ಮಾತುಗಳು ಈ ಹಿಂದೆ ಕೇಳಿಬರುತ್ತಿತ್ತು. ಈ ಕಾರಣಕ್ಕಾಗಿಯೇ ವಿದ್ಯಾರ್ಥಿಗಳು ‘ಪಂತ್’ ಎಂದು ಕೂಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...