alex Certify ಉದ್ಯೋಗಿಗಳಿಗೆ 170 ದೇಶಗಳಲ್ಲಿ ಎಲ್ಲಿಯಾದ್ರೂ ಕೆಲಸ ಮಾಡಲು ಅವಕಾಶ ನೀಡ್ತಿದೆ ಈ ಕಂಪನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಿಗಳಿಗೆ 170 ದೇಶಗಳಲ್ಲಿ ಎಲ್ಲಿಯಾದ್ರೂ ಕೆಲಸ ಮಾಡಲು ಅವಕಾಶ ನೀಡ್ತಿದೆ ಈ ಕಂಪನಿ….!

ಸಾಂಕ್ರಾಮಿಕ ರೋಗ ಜಗತ್ತಿಗೆ ಕಾಲಿಟ್ಟ ನಂತರ ಉದ್ಯೋಗಿಗಳಿಗೆ ಹಲವು ಕಂಪನಿಗಳು ವರ್ಕ್ ಫ್ರಮ್ ಹೋಮ್ ಅನ್ನು ನೀಡಿತ್ತು. ಇದೀಗ ಕೂಡ ಕೆಲವು ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಮ್ ಅನ್ನು ಮುಂದುವರೆಸಿದ್ದರೆ, ಕೆಲವು ಕಂಪನಿಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಯಿಸಿದೆ.

ಇದೀಗ ಏರ್‌ ಬಿಎನ್‌ಬಿ ಕಂಪನಿ ತನ್ನ ಉದ್ಯೋಗಿಗಳಿಗೆ ಅವರ ಆದ್ಯತೆಗೆ ಅನುಗುಣವಾಗಿ ಕಚೇರಿ, ಮನೆ ಅಥವಾ ದೇಶದ ಯಾವುದೇ ಭಾಗದಿಂದ ಎಲ್ಲಿಂದಲಾದರೂ ಕೆಲಸ ಮಾಡಲು ಅವಕಾಶ ನೀಡುವುದಾಗಿ ಘೋಷಿಸಿದೆ. ಉದ್ಯೋಗಿಗಳು ತಮ್ಮ ಕೆಲಸದ ವಾತಾವರಣವನ್ನು ಮುಕ್ತವಾಗಿ ನಿರ್ಧರಿಸಬಹುದು ಮತ್ತು ಅವರ ನಿರ್ಧಾರವು ಅವರ ಸಂಬಳದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಸಂಸ್ಥೆ ಹೇಳಿದೆ.

ಸೆಪ್ಟೆಂಬರ್‌ನಿಂದ, ಕಂಪನಿಯು ಬೇರೆ ದೇಶದ ಉದ್ಯೋಗಿಗಳಿಗೆ ಕೆಲಸ ಮಾಡಲು ಅವಕಾಶ ನೀಡುತ್ತದೆ. ಅವರು ವರ್ಷಕ್ಕೆ 90 ದಿನಗಳವರೆಗೆ 170 ದೇಶಗಳಲ್ಲಿ ಎಲ್ಲಿಯಾದರೂ ವಾಸಿಸಬಹುದು ಮತ್ತು ಕೆಲಸ ಮಾಡಬಹುದು ಎಂದು ಹೇಳಿದೆ.

ಈ ಸಂಬಂಧ ಕಂಪನಿ ಸಿಇಒ ಐದು ಪ್ರಮುಖ ವಿಚಾರಗಳನ್ನು ವಿವರಿಸಿದ್ದಾರೆ.

1. ಮನೆ ಅಥವಾ ಕಛೇರಿಯಿಂದ ಕೆಲಸ ಮಾಡಿ

ಕಂಪನಿಯು ಉದ್ಯೋಗಿಗಳಿಗೆ ಅವರು ಹೆಚ್ಚು ಉತ್ಪಾದಕತೆಯನ್ನು ಅನುಭವಿಸುವ ಆಧಾರದ ಮೇಲೆ ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುತ್ತಿದೆ ಎಂದು ಸಿಇಒ ಹೇಳಿದ್ದಾರೆ. ಹೆಚ್ಚಿನ ಉದ್ಯೋಗಿಗಳು ಈ ಅನುಕೂಲತೆಯನ್ನು ಹೊಂದಿರುತ್ತಾರೆ. ಕಡಿಮೆ ಸಂಖ್ಯೆಯ ಜನರು ಮಾತ್ರ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಲು ಕಚೇರಿಯಲ್ಲಿ ಅಥವಾ ನಿರ್ದಿಷ್ಟ ಸ್ಥಳದಲ್ಲಿ ಕೆಲಸ ಮಾಡಬೇಕಾಗುತ್ತದೆ.

2.ದೇಶದಲ್ಲಿ ಎಲ್ಲಿಯಾದ್ರೂ ನೆಲೆಸಬಹುದು

ಉದ್ಯೋಗಿಗಳು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸಬಹುದು. ಇದರರ್ಥ ಕುಟುಂಬಕ್ಕೆ ಹತ್ತಿರವಾಗುವುದು ಅಥವಾ ನಿಮಗೆ ಇಷ್ಟವಾಗುವ ಸ್ಥಳದಲ್ಲಿ ವಾಸಿಸಬಹುದು.

3.ಪ್ರಪಂಚದಾದ್ಯಂತ ಪ್ರಯಾಣಿಸಿ ಮತ್ತು ಕೆಲಸ ಮಾಡಿ

ಈ ಕಂಪನಿಯು ಉದ್ಯೋಗಿಗಳಿಗೆ ಕೆಲಸ ಮಾಡಲು, 170 ದೇಶಗಳಲ್ಲಿ ವಾಸಿಸಲು ಅವಕಾಶ ನೀಡುತ್ತದೆ. ಉದ್ಯೋಗಿಗಳು ತಮ್ಮ ಕೆಲಸದ ವಾತಾವರಣವನ್ನು ಮುಕ್ತವಾಗಿ ನಿರ್ಧರಿಸಬಹುದು

ಉದ್ಯೋಗಿಗಳು ಕೆಲಸದ ಪರವಾನಿಗೆಗಳನ್ನು ತಾವೇ ಪಡೆದುಕೊಳ್ಳಬೇಕಾಗಿದ್ದರೂ, ಹೆಚ್ಚಿನ ಜನರು ಪ್ರಪಂಚದಾದ್ಯಂತ ಪ್ರಯಾಣಿಸಲು ಮತ್ತು ಕೆಲಸ ಮಾಡಲು ಸುಲಭವಾಗುವಂತೆ, ಸ್ಥಳೀಯ ಸರ್ಕಾರಗಳೊಂದಿಗೆ ಸಕ್ರಿಯವಾಗಿ ಪಾಲುದಾರಿಕೆಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ.

4.ತಂಡದ ನಿಯಮಿತ ಭೇಟಿ (ಕೂಟ) ಮತ್ತು ಸಾಮಾಜಿಕ ಕಾರ್ಯಕ್ರಮಗಳು

ಈ ಕಂಪನಿಯು ವರ್ಷವಿಡೀ ಅರ್ಥಪೂರ್ಣ ವ್ಯಕ್ತಿಗತ ಕೂಟಗಳಿಗೆ ಆದ್ಯತೆ ನೀಡುತ್ತಿದೆ. ಸಾಂಕ್ರಾಮಿಕ ರೋಗವು ಇನ್ನೂ ಕಡಿಮೆಯಾಗಿಲ್ಲವಾದರಿಂದ, ಈ ವರ್ಷ ಸೀಮಿತ ಆಫ್-ಸೈಟ್ ಯೋಜನೆಗಳು ಇರುತ್ತವೆ. ಮುಂದಿನ ವರ್ಷ, ಇವುಗಳ ಸಂಖ್ಯೆ ಹೆಚ್ಚಾಗುತ್ತದೆ.

5.ಹೆಚ್ಚು ಸಂಘಟಿತ ರೀತಿಯಲ್ಲಿ ಕೆಲಸ ಮಾಡಿ

ನೌಕರರು ತಮ್ಮ ಯೋಜನೆಗಳನ್ನು ಸಂಘಟಿಸಲು ಹೆಚ್ಚು-ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಉದ್ಯೋಗಿಗಳು ಹೆಚ್ಚು ಸಂಘಟಿತ ರೀತಿಯಲ್ಲಿ ಕೆಲಸ ಮಾಡಿದರೆ ಒಳಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...