alex Certify ಉತ್ತರ ಪ್ರದೇಶದ ಈ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳೋ ಭೂಮಿಗೆ ಪಾಕಿಸ್ತಾನಿಗಳೇ ಮಾಲೀಕರು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಪ್ರದೇಶದ ಈ ಗ್ರಾಮದಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳೋ ಭೂಮಿಗೆ ಪಾಕಿಸ್ತಾನಿಗಳೇ ಮಾಲೀಕರು….!

ಭಾರತ ಮತ್ತು ಪಾಕಿಸ್ತಾನ ಇಬ್ಭಾಗವಾಗಿ 75 ವರ್ಷಗಳೇ ಕಳೆದಿವೆ. ಆದರೆ ಸ್ವಾತಂತ್ರ್ಯ ಬಂದಾಕ್ಷಣ ಭಾರತವನ್ನು ತೊರೆದು ಪಾಕಿಸ್ತಾನಕ್ಕೆ ಹೋದವರಿಗೆ ಸೇರಿದ ಭೂಮಿ ಇನ್ನೂ ಇಲ್ಲಿದೆ. ಜಮೀನಿನ ದಾಖಲೆಗಳಲ್ಲಿ ಅವರ ಹೆಸರಿದ್ದು, ದೇಶ ಪಾಕಿಸ್ತಾನ ಎಂದು ಕೂಡ ಉಲ್ಲೇಖವಾಗಿದೆ.

ಈ ಪ್ರಕರಣ ಬೆಳಕಿಗೆ ಬಂದಿರೋದು ಉತ್ತರ ಪ್ರದೇಶದ ಕಾನ್ಪುರದಲ್ಲಿ. ಗ್ರಾಮಾಂತರ ಪ್ರದೇಶವಾದ ಅಕ್ಬರ್‌ಪುರ ತೆಹಸಿಲ್‌ನ ಬಾರಾ ಗ್ರಾಮದ ಭೂ ದಾಖಲೆಗಳಲ್ಲಿ ಹಲವು ಪಾಕಿಸ್ತಾನಿಗಳ ಹೆಸರು ದಾಖಲಾಗಿದೆ.

ಡಿಎಂ ಆದೇಶದ ಮೇರೆಗೆ ಪಾಕಿಸ್ತಾನಿಗಳ ಹೆಸರಿನಲ್ಲಿ ನೋಂದಣಿಯಾಗಿರುವ ಜಮೀನುಗಳ ವಿವರಗಳನ್ನು ಸಿದ್ಧಪಡಿಸಲಾಗ್ತಿದೆ. ಇದಾದ ಬಳಿಕ ಶತ್ರು ಆಸ್ತಿ ನಿಯಮದ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ದೇಶ ವಿಭಜನೆಯ ಸಮಯದಲ್ಲಿ ಹಲವರು ಈ ಪ್ರದೇಶದಿಂದ ಪಾಕಿಸ್ತಾನಕ್ಕೆ ತೆರಳಿದ್ದಾರೆ. ಅವರ ಜಮೀನುಗಳು ಇಲ್ಲಿವೆ. ಈ ಜಮೀನು ಹಲವು ವರ್ಷಗಳಿಂದ ಖಾಲಿ ಇತ್ತು. ಜನಸಂಖ್ಯೆ ಹೆಚ್ಚಾದಂತೆ ಕೆಲವರು ಅದನ್ನು ವಶಪಡಿಸಿಕೊಳ್ಳಲು ಪ್ರಾರಂಭಿಸಿದರು.

ಈ ಭೂಮಿ ಯಾರ ಹೆಸರಲ್ಲಿದೆಯೋ ಅವರು ಬದುಕಿದ್ದಾರೋ ಇಲ್ಲವೋ ಗೊತ್ತಿಲ್ಲ. ಈ ಬಗ್ಗೆ ಮಾಹಿತಿಯಿಲ್ಲ, ಪರಿಶೀಲನೆ ನಡೆಸ್ತಿದ್ದೇವೆ ಅಂತಿದ್ದಾರೆ ಕಾನ್ಪುರ ದೇಹತ್ ಜಿಲ್ಲಾ ಮ್ಯಾಜಿಸ್ಟ್ರೇಟ್ ನೇಹಾ ಜೈನ್. ಅದೇನೇ ಆದ್ರೂ ದೂರದ ಪಾಕಿಸ್ತಾನದಲ್ಲಿರುವವರ ಜಮೀನು ಭಾರತದಲ್ಲಿದೆ ಅನ್ನೋ ಸುದ್ದಿ ಸಂಚಲನ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...