alex Certify ಉತ್ತರದಲ್ಲಿ ಗಂಗಾ ಆರತಿ, ದಕ್ಷಿಣದಲ್ಲಿ ತುಂಗಾ ಆರತಿ ಪ್ರಾರಂಭವಾಗಲಿ – ಸಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರದಲ್ಲಿ ಗಂಗಾ ಆರತಿ, ದಕ್ಷಿಣದಲ್ಲಿ ತುಂಗಾ ಆರತಿ ಪ್ರಾರಂಭವಾಗಲಿ – ಸಿಎಂ

ಬೆಂಗಳೂರು: ಉತ್ತರ ಭಾರತದಲ್ಲಿ ಪ್ರಸಿದ್ಧಿ ಪಡೆದಿರುವ ಗಂಗಾ ಆರತಿಯಂತೆಯೇ ದಕ್ಷಿಣ ಭಾರತದಲ್ಲಿ ತುಂಗಾ ಆರತಿ ಬೆಳಗಬೇಕಿದೆ. ಹೀಗಾಗಿ ತುಂಗಾ ಆರತಿ ಮಂಟಪಗಳನ್ನು ನಿರ್ಮಿಸಲು ಸರ್ಕಾರ ತೀರ್ಮಾನಿಸಿದ್ದು, ಇದಕ್ಕಾಗಿ 30 ಕೋಟಿ ರೂಪಾಯಿ ಅನುದಾನ ಮೀಸಲಿಡಲಾಗಿದೆ ಎಂದು ಸಿಎ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಹರಿಹರದ ಪಂಚಮಸಾಲಿ ಗುರುಪೀಠದ ವತಿಯಿಂದ ಜನವರಿಯಲ್ಲಿ ನಡೆಯಲಿರುವ ಹರಜಾತ್ರೆಯ ಧ್ವನಿಸುರುಳಿ, ಟಿ ಶರ್ಟ್ ಹಾಗೂ ಲೋಗೋ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತುಂಗಾ ಆರತಿ ಮಂಟಪಗಳ ನಿರ್ಮಾಣ ಯೋಜನೆಗೆ ಹರಜಾತ್ರೆಯ ಸಂದರ್ಭದಲ್ಲಿಯೇ ಅಂದರೆ, ಜನವರಿ 14 ಹಾಗೂ 15ರಂದು ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ.

ಪಂಚಮಸಾಲಿ ಸಮುದಾಯಕ್ಕೆ ದೊಡ್ಡ ಇತಿಹಾಸವೇ ಇದೆ. ಈ ಸಮುದಾಯದ ಜನ ಕೃಷಿಯನ್ನೇ ಜೀವನಾಧಾರವಾಗಿ ನಂಬಿದ್ದಾರೆ. ಆದರೆ, ಈ ಸಮಾಜದ ಜನರು 21ನೇ ಶತಮಾನದಲ್ಲಿ ಎಲ್ಲ ರಂಗದಲ್ಲಿಯೂ ಗುರುತಿಸಿಕೊಂಡು ಅಭಿವೃದ್ಧಿ ಹೊಂದಬೇಕಿದೆ. ಈ ನಿಟ್ಟಿನಲ್ಲಿನಲ್ಲಿಯೇ ಶ್ರೀಗಳು ಹೊಸ ಹೆಜ್ಜೆ ಹಾಕಿದ್ದಾರೆ. ಅವರು ಸಮಾಜಕ್ಕೆ ತಮ್ಮ ಬದ್ಧತೆ ಹಾಗೂ ಕರ್ತವ್ಯ ನಿಷ್ಠೆ ತೋರಿಸಿದ್ದಾರೆ. ಅವರು ಇಡೀ ಸಮುದಾಯಕ್ಕೆ ಹೊಸ ಕಲ್ಪನೆಯನ್ನು ಬಿತ್ತುತ್ತಿದ್ದಾರೆ. ಅವರ ನೇತೃತ್ವದಲ್ಲಿ ಹರಜಾತ್ರೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿರುವುದು ಪ್ರಶಂಸನೀಯ. ಶ್ರೀಗಳು ಪೀಠ ಏರಿದ ಆರಂಭದಲ್ಲಿಯೇ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದವರೆಗೂ ಪಾದ ಯಾತ್ರೆ ನಡೆಸಿ ಸಮಾಜಕ್ಕೆ ಹೊಸ ಕಲ್ಪನೆ ಬಿತ್ತಿದ್ದಾರೆ ಎಂದು ಹೇಳಿದ್ದಾರೆ.

ಶ್ರೀಗಳ ನೇತೃತ್ವದಲ್ಲಿ ಹರಜಾತ್ರೆಯ ಮೂಲಕ ನಾಡು, ಸಂಸೃತಿ ಬೆಳೆಸುವ ಕಾರ್ಯ ನಡೆಯುತ್ತಿದೆ. ಈ ಮೂಲಕ ಶೈಕ್ಷಣಿಕ ಸೇರಿದಂತೆ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಕಾರ್ಯಗಳು ನಡೆಯುತ್ತಿವೆ. ಇದರಿಂದಾಗಿ ಶಿಕ್ಷಣ, ಕೌಶಲ್ಯವನ್ನು ವಿದ್ಯಾರ್ಥಿಗಳು ಉತ್ತಮವಾಗಿ ಪಡೆದು ಉದ್ಯಮ ಹಾಗೂ ಉದ್ಯೋಗದಲ್ಲಿ ಪರಿಣತಿ ಸಾಧಿಸುವಂತಾಗುತ್ತಿದೆ ಎಂದು ಹೊಗಳಿದ್ದಾರೆ.

ಈಗಾಗಲೇ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವ ಕುರಿತು ಶ್ರೀಗಳು ಸೂಕ್ತ ಸಲಹೆ – ಸೂಚನೆಗಳನ್ನು ನೀಡಿದ್ದಾರೆ. ಈ ಕುರಿತು ಸರ್ಕಾರ ಕೂಡ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದು ಭರವಸೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...