alex Certify ಉತ್ತಮ ನಿದ್ದೆ ಹಾಗೂ ಆರೋಗ್ಯಕ್ಕಾಗಿ ಮ್ಯಾಟ್ರೆಸ್‌ಗಳ ಆಯ್ಕೆ ಹೀಗಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತಮ ನಿದ್ದೆ ಹಾಗೂ ಆರೋಗ್ಯಕ್ಕಾಗಿ ಮ್ಯಾಟ್ರೆಸ್‌ಗಳ ಆಯ್ಕೆ ಹೀಗಿರಲಿ

ಸುದೀರ್ಘ ಕೆಲಸದ ನಂತರ ಎಲ್ಲರೂ ವಿಶ್ರಾಂತಿ ಬಯಸ್ತಾರೆ. ಆರಾಮಾಗಿ ಮಲಗಿ ನಿದ್ರಿಸಲು ಇಚ್ಛಿಸ್ತಾರೆ. ನಮ್ಮ ಶಾಂತಿಯುತ ನಿದ್ದೆಗೆ ಅತ್ಯಂತ ಅವಶ್ಯಕವಾದದ್ದು ಉತ್ತಮ ಹಾಸಿಗೆ. ನಾವು ಮಲಗುವ ಹಾಸಿಗೆ ಚೆನ್ನಾಗಿದ್ದರೆ ದೇಹಕ್ಕೆ ಆರಾಮ ಸಿಗುತ್ತದೆ. ರಾತ್ರಿಯ ನಿದ್ದೆ ಚೆನ್ನಾಗಿ ಆಗುತ್ತದೆ.

ಹಾಸಿಗೆ ಸರಿಯಾಗಿಲ್ಲದಿದ್ರೆ ಬೆನ್ನು, ಕುತ್ತಿಗೆ ಮತ್ತು ತಲೆ ನೋವು ಬರಬಹುದು. ನಿದ್ದೆಯೂ ಪೂರ್ಣಗೊಳ್ಳದೆ ದಿನವಿಡೀ ಕಿರಿಕಿರಿ ಅನುಭವಿಸಬೇಕಾಗಬಹುದು. ಅಸ್ವಸ್ಥತೆ ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟುವ ಸಲುವಾಗಿ ಹಾಸಿಗೆಯನ್ನು ಖರೀದಿಸುವ ಮೊದಲು ಎಚ್ಚರಿಕೆಯಿಂದ ಗಮನಿಸಬೇಕು. ಹಾಸಿಗೆಯನ್ನು ಖರೀದಿಸುವ ಮೊದಲು ಹಲವಾರು ಅಂಶಗಳನ್ನು ದೃಷ್ಟಿಕೋನದಲ್ಲಿ ಇಟ್ಟುಕೊಳ್ಳುವುದು ಉತ್ತಮ.

ದೇಹದ ತೂಕ…

ಮೊದಲನೆಯದಾಗಿ ನಿಮ್ಮ ತೂಕ. ದೇಹದ ತೂಕಕ್ಕೆ ಪ್ರತಿಕ್ರಿಯಿಸುವ ತೂಕ-ಪ್ರೇರಿತ ಮೆಮೊರಿ ಫೋಮ್ ಅನ್ನು ಬಳಸುವ ಹಾಸಿಗೆಗಳನ್ನು ಬಳಸುವುದು ಉತ್ತಮ. ಹಾಸಿಗೆ ನಿಮ್ಮ ದೇಹವನ್ನು ಚೆನ್ನಾಗಿ ಹಿಡಿದಿಟ್ಟುಕೊಳ್ಳುತ್ತದೆ, ಅದು ಕುಸಿಯಲು ಬಿಡುವುದಿಲ್ಲ. ನೀವು ರಾತ್ರಿಯಿಡೀ ಆರಾಮವಾಗಿ ಮಲಗಲು ಅನುವು ಮಾಡಿಕೊಡುತ್ತದೆ.ಆರಾಮದಾಯಕವಾದ ಹಾಸಿಗೆಯ ಮೇಲೆ ಮಲಗಿದ್ದರೆ ನೀವು ನಿಮ್ಮ ಭಂಗಿಗಳನ್ನು ವಿಸ್ತರಿಸಬಹುದು. ಅದು ನಿಮ್ಮ ನಿದ್ರೆಗೆ ಸಹಕಾರಿಯಾಗಿರುತ್ತದೆ.

ಅತಿಯಾದ ಬೆವರುವಿಕೆ…

ಕಳಪೆ ಗುಣಮಟ್ಟದ ಹಾಸಿಗೆಯಲ್ಲಿ ಹೆಚ್ಚಿನ ಶಾಖದ ಅನುಭವವಾಗುತ್ತದೆ. ಅದು ‘ಉಸಿರಾಡಲು’ ಯಾವುದೇ ಅವಕಾಶ ಕೊಡುವುದಿಲ್ಲ. ಇದರಿಂದ ಹಾಸಿಗೆ ಬಿಸಿಯಾಗುತ್ತದೆ. ಪರಿಣಾಮ ಹಾಸಿಗೆ ಮೇಲೆ ಮಲಗಿದವರು ತೀವ್ರವಾಗಿ ಬೆವರುತ್ತಾರೆ. ಆರ್ದ್ರತೆಯನ್ನು ಅನುಭವಿಸುತ್ತಾರೆ.

ಕುಗ್ಗುವಿಕೆ/ವಿರೂಪಗೊಂಡ ಹಾಸಿಗೆ…

ಕಳಪೆ ಗುಣಮಟ್ಟದ ವಸ್ತುಗಳಿಂದ ಮಾಡಿದ ಹಾಸಿಗೆಗಳು ಬೇಗನೆ ವಿರೂಪಗೊಳ್ಳುತ್ತವೆ ಮತ್ತು ಕುಸಿಯುತ್ತವೆ. ಇದರಿಂದ ನಮ್ಮ ಬೆನ್ನು ಮೂಳೆಗೆ ಹೊಡೆತ ಬೀಳುತ್ತದೆ. ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಕಾಲಾನಂತರದಲ್ಲಿ ಈ ಸಮಸ್ಯೆ ಗಂಭೀರವಾಗಬಹುದು. ನೀವು ಅಂತಹ ಹಾಸಿಗೆಯನ್ನು ಬದಲಾಯಿಸುವುದು ಸೂಕ್ತ.

ಅಲರ್ಜಿ ಮತ್ತು ಸ್ವಚ್ಛತೆಯ ಕೊರತೆ…

ಕೆಲವೊಮ್ಮೆ ಮಲಗುವ ಹಾಸಿಗೆಯೆ ನಮಗೆ ಅಲರ್ಜಿ ಉಂಟುಮಾಡಬಹುದು. ಕಾಲಾನಂತರದಲ್ಲಿ ಹಾಸಿಗೆ ಮೇಲೆ ಧೂಳು ಸಂಗ್ರಹವಾಗುತ್ತದೆ. ಅಂತಹ ಹಾಸಿಗೆಯ ಮೇಲೆ ಮಲಗಿದಾಗ ಆ ಧೂಳಿನಿಂದಾಗಿ ಶ್ವಾಸಕೋಶ ಮತ್ತು ಚರ್ಮದ ಅಲರ್ಜಿಗೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಪರಿಹಾರವೆಂದರೆ ಪ್ರಮಾಣೀಕೃತ ವಿಷಕಾರಿಯಲ್ಲದ ಫೋಮ್. ಭಾರತದಲ್ಲಿನ ಹವಾಮಾನ ಪರಿಸ್ಥಿತಿಗಳಿಂದಾಗಿ ಹಾಸಿಗೆಗಳು ಬಹಳ ಬೇಗ ಕೊಳಕಾಗುತ್ತವೆ. ಇದರಿಂದ ಕೆಟ್ಟ ವಾಸನೆಯೂ ಬರಬಹುದು. ಪರಿಣಾಮ ನಿದ್ರೆಗೆ ತೊಂದರೆಯಾಗಬಹುದು.

ಅನಗತ್ಯ ಕೀಟಗಳ ಬೆಳವಣಿಗೆಗೆ ಕಾರಣವಾಗಬಹುದು. ಅಂತಹ ಸಮಸ್ಯೆಗಳನ್ನು ತಪ್ಪಿಸಲು ಡ್ರೈ-ಕ್ಲೀನ್ ಮಾಡಬಹುದಾದ ಬಟ್ಟೆಯೊಂದಿಗೆ ಬರುವ ಹಾಸಿಗೆಗಳನ್ನು ಬಳಸುವುದು ಉತ್ತಮ. ಈ ಬಟ್ಟೆಯನ್ನು ಸುಲಭವಾಗಿ ತೆಗೆದು, ತೊಳೆದು ಒಣಗಿಸಬಹುದು. ಹಾಸಿಗೆ ದೀರ್ಘಕಾಲದವರೆಗೆ ಸ್ವಚ್ಛವಾಗಿ ಮತ್ತು ಆರೋಗ್ಯಕರವಾಗಿ ಉಳಿಯುತ್ತದೆ. OEKO-TEX, ACA, ಮತ್ತು GOTS ನಂತಹ ಅಂತರರಾಷ್ಟ್ರೀಯ ಪ್ರಮಾಣೀಕರಣಗಳೊಂದಿಗೆ ಬರುವ ಉತ್ತಮ-ಗುಣಮಟ್ಟದ ಹಾಸಿಗೆ ಮೇಲೆ  ಹೂಡಿಕೆ ಮಾಡುವುದು ಒಳ್ಳೆಯದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...