alex Certify ಉಕ್ರೇನ್‌ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರ ಒದಗಿಸಿದ ಸಿಖ್ ಸ್ವಯಂಸೇವಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉಕ್ರೇನ್‌ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಆಹಾರ ಒದಗಿಸಿದ ಸಿಖ್ ಸ್ವಯಂಸೇವಕರು

ರಷ್ಯಾ-ಉಕ್ರೇನ್ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಭಾರತ ಮತ್ತು ಇತರ ದೇಶಗಳ ಸಾವಿರಾರು ವಿದ್ಯಾರ್ಥಿಗಳು ತಮ್ಮ ದೇಶಗಳಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ. ಅವರಲ್ಲಿ ಹಲವಾರು ಮಂದಿ ಸಿಲುಕಿಕೊಂಡಿದ್ದು, ಆಶ್ರಯ, ಆಹಾರ ಇತ್ಯಾದಿಗಳಿಗಾಗಿ ಪರಿತಪಿಸುತ್ತಿದ್ದಾರೆ. ಇದೆಲ್ಲದರ ನಡುವೆ ಸಿಖ್ ಸ್ವಯಂಸೇವಕರು ನೆರವು ಒದಗಿಸುತ್ತಿದ್ದಾರೆ.

ಹೌದು, ಸಿಖ್ ಸಮುದಾಯವು ಒತ್ತಡದ ಸಮಯದಲ್ಲಿ ಭರವಸೆಯ ಕಿರಣವನ್ನು ನೀಡಿದೆ. ಉಕ್ರೇನ್‌ನಲ್ಲಿ ಸಂಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ರೈಲಿನಲ್ಲಿ ಉಚಿತ ಆಹಾರ, ಲಂಗರ್ ವಿತರಿಸುತ್ತಿರುವ ವಿಡಿಯೋ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ.

ಖಾಲ್ಸಾ ಏಡ್‌ನ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಸಿಖ್ ಲೋಕೋಪಕಾರಿ ರವೀಂದರ್ ಸಿಂಗ್ ಅವರು ಈ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಸ್ವಯಂಸೇವಕರು ವಿದ್ಯಾರ್ಥಿಗಳಿಗೆ ರೊಟ್ಟಿ ಮತ್ತು ಸಬ್ಜಿಯನ್ನು ವಿತರಿಸಿದ್ದಾರೆ. ಹರ್ದೀಪ್ ಸಿಂಗ್ ಅವರು ವಿವಿಧ ದೇಶಗಳ ಅನೇಕ ವಿದ್ಯಾರ್ಥಿಗಳಿಗೆ ಸಹಾಯವನ್ನು ನೀಡುತ್ತಿದ್ದಾರೆ.

‘ಲಂಗರ್’ ಪರಿಕಲ್ಪನೆಯು ಸಿಖ್ ಸಿದ್ಧಾಂತದಿಂದ ಹೊರಹೊಮ್ಮಿದೆ. ಇದರ ಅರ್ಥವೇನೆಂದರೆ ಮಾನವಕುಲಕ್ಕಾಗಿ ಸೇವೆಯನ್ನು ಮಾಡುವುದು ಎಂಬುದಾಗಿದೆ. ಜಾತಿ ಅಥವಾ ಧರ್ಮವನ್ನು ಲೆಕ್ಕಿಸದೆ ಯಾರೂ ಆಹಾರವಿಲ್ಲದೆ ಹೋಗಬಾರದು ಎಂಬ ಉದ್ದೇಶದಿಂದ ಆಹಾರ ತಯಾರಿಸಿ ಹಂಚಲಾಗುತ್ತದೆ. ಸಿಖ್ ಸ್ವಯಂ ಸೇವಕರ ಸೇವೆಯನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಸಿಖ್ ಸ್ವಯಂಸೇವಕರು ತಮ್ಮ ಕೈಲಾದ ಸಹಾಯ ಮಾಡಲು ಮುಂದಾಗಿದ್ದು ಇದೇ ಮೊದಲಲ್ಲ. ನವೆಂಬರ್ 2021 ರಲ್ಲಿ, ಕೆನಡಾ ಪ್ರವಾಹದಲ್ಲಿ ಸಿಕ್ಕಿಬಿದ್ದವರಿಗೆ 3,000 ಕ್ಕೂ ಹೆಚ್ಚು ಊಟವನ್ನು ತಲುಪಿಸಿದ್ದಾರೆ.

— ravinder singh (@RaviSinghKA) February 25, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...