alex Certify ಈ ಹಾಡು ಕೇಳುತ್ತಿದ್ದಂತೆ ಅಳು ನಿಲ್ಲಿಸಿದ ಪುಟ್ಟ ಕಂದಮ್ಮ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಹಾಡು ಕೇಳುತ್ತಿದ್ದಂತೆ ಅಳು ನಿಲ್ಲಿಸಿದ ಪುಟ್ಟ ಕಂದಮ್ಮ..!

ಎಪಿ ಧಿಲ್ಲೋನ್ ಅವರ ಹಿಟ್ ಪಂಜಾಬಿ ಹಾಡು ಎಕ್ಸ್‌ಕ್ಯೂಸಸ್‍ನ  ಕ್ರೇಜ್ ಇಂದಿಗೂ ಕಡಿಮೆಯಾಗಿಲ್ಲ. ಈ ಹಾಡು ಬಹಳಷ್ಟು ಜನರಿಗೆ ಅಚ್ಚುಮೆಚ್ಚಾಗಿದೆ. ಕೇವಲ ವಯಸ್ಕರು ಮಾತ್ರವಲ್ಲ, ಶಿಶುಗಳು ಕೂಡ ಎಪಿ ಧಿಲ್ಲೋನ್ ಅವರ ಹಾಡುಗಳ ಗೀಳನ್ನು ಹೊಂದಿದ್ದಾರೆ. ಅಳುವ ಶಿಶುಗಳಿಗೆ ಈ ಹಾಡು ಮಾಂತ್ರಿಕವಾಗಿ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ.

ಹೌದು, ಇದೀಗ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಗುವೊಂದು ಅಳುತ್ತಿರುವಾಗ ತಾಯಿ ಸಮಾಧಾನ ಮಾಡಿದ್ದಾಳೆ. ಏನು ಮಾಡಿದ್ರೂ ಮಗು ಅಳು ನಿಲ್ಲಿಸದಿದ್ದಕ್ಕೆ ಕೊನೆಗೆ, ಎಪಿ ಧಿಲ್ಲೋನ್ ಅವರ ಎಕ್ಸ್‌ಕ್ಯೂಸಸ್ ಹಾಡನ್ನು ತಾಯಿ ನುಡಿಸಿದ್ದಾರೆ. ತಕ್ಷಣವೇ ಮಗು ಅಳು ನಿಲ್ಲಿಸಿದೆ.

ಅಲರ್ಜಿಯಿಂದ ಪಾರಾಗಲು ಅನುಸರಿಸಿ ಈ ʼಉಪಾಯʼ

ಎಕ್ಸ್‌ಕ್ಯೂಸ್‌ ಹಾಡಿನ ಪ್ರಾರಂಭದ ಬೀಟ್‌ಗಳನ್ನು ಕೇಳಿದ ತಕ್ಷಣವೇ, ಮಗು ಅಳುವುದನ್ನು ನಿಲ್ಲಿಸಿ ಹಾಡನ್ನು ಕೇಳಲು ಶುರು ಮಾಡಿದ್ದಾಳೆ. ಕೆಲವು ಕ್ಷಣಗಳ ನಂತರ ಪುಟ್ಟ ಕಂದ ಹಾಡನ್ನು ಕೇಳುವುದನ್ನು ಆನಂದಿಸುವುದನ್ನು ಮುಂದುವರೆಸಿದಂತೆ, ಖುಷಿಯಿಂದ ನಗೆ ಬೀರಿದ್ದಾಳೆ.

ದೆಹಲಿಯ ಮೇಕಪ್ ಬ್ಲಾಗರ್ ಆಗಿರುವ ಮಗುವಿನ ತಾಯಿ ಶೈಲ್ಜಾ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಹ್ಯಾಂಡಲ್ ನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಎಪಿ ಧಿಲ್ಲೋನ್ ಅವರ ಸಂಗೀತವು ತನ್ನ ಮಗುವಿನ ಮೇಲೆ ಮೋಡಿ ಮಾಡಿದೆ ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...