alex Certify ಈ ಸೂಪರ್‌ ಫುಢ್‌ಗಳ ಸೇವನೆಯಿಂದ ನಿಯಂತ್ರಿಸಬಹುದು ಸ್ತನ ಕ್ಯಾನ್ಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸೂಪರ್‌ ಫುಢ್‌ಗಳ ಸೇವನೆಯಿಂದ ನಿಯಂತ್ರಿಸಬಹುದು ಸ್ತನ ಕ್ಯಾನ್ಸರ್

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಸಾಮಾನ್ಯ ಎನ್ನುವಂತಾಗಿದೆ. ಜೀವಕೋಶಗಳ ಸಂಖ್ಯೆ ಹೆಚ್ಚಾಗಿ, ಒಂದು ಗಂಟಾಗುತ್ತದೆ. ಇದೇ ಸ್ತನ ಕ್ಯಾನ್ಸರ್ ಎನ್ನಿಸಿಕೊಳ್ಳುತ್ತದೆ. ಆರಂಭದಲ್ಲಿ ಇದು ತಿಳಿಯುವುದೇ ಇಲ್ಲ. ನಂತ್ರದ ದಿನಗಳಲ್ಲಿ ಸ್ತನದಲ್ಲಿ ಗಡ್ಡೆ, ಸ್ತನದ ಆಕಾರದಲ್ಲಿ ಬದಲಾವಣೆ ಹಾಗೂ ಸ್ತನದ ಬಣ್ಣದಲ್ಲಿ ಬದಲಾವಣೆ ಮೂಲಕ ಇದು ತಿಳಿದುಬರುತ್ತದೆ.

ಸ್ತನ ಕ್ಯಾನ್ಸರ್ ಗೆ ಚಿಕಿತ್ಸೆಯಿದೆ. ಆರೋಗ್ಯಕರ ಡಯಟ್ ಕೂಡ ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ನೆರವಾಗುತ್ತದೆ. ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ಸಲ್ಮನ್ ಮೀನು ಸೇವನೆ ಮಾಡಬೇಕು. ಇದ್ರಲ್ಲಿರುವ ಕೊಬ್ಬಿನಾಮ್ಲಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕ್ಯಾನ್ಸರ್ ಕೋಶಗಳ ಹರಡುವಿಕೆಯನ್ನು ನಿಧಾನಗೊಳಿಸುತ್ತದೆ.

ಬೆಳ್ಳುಳ್ಳಿ ಕೂಡ ಸ್ತನ ಕ್ಯಾನ್ಸರ್ ನಿಯಂತ್ರಣಕ್ಕೆ ಒಳ್ಳೆಯದು. ಇದ್ರಲ್ಲಿರುವ ಅಂಶಗಳು ಕ್ಯಾನ್ಸರ್ ಕೋಶಗಳ ನಾಶಕ್ಕೆ ಸಹಾಯ ಮಾಡುತ್ತವೆ.

ಪಾಲಕ್ ನಲ್ಲಿರುವ ಲುಟೀನ್ ಆಂಟಿಆಕ್ಸಿಡೆಂಟ್ ಗಳು ನಮ್ಮ ದೇಹವನ್ನು ರಕ್ಷಿಸುತ್ತವೆ. ಸ್ತನ ಕ್ಯಾನ್ಸರ್ ಬರದಂತೆ ತಡೆಯತ್ತದೆ.

ಅರಿಶಿನ ಸೇವನೆ ಕೂಡ ಬಹಳ ಒಳ್ಳೆಯದು. ಇದ್ರಲ್ಲಿರುವ ಕರ್ಕ್ಯುಮಿನ್, ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿಯಂತ್ರಣ ಸಾಮರ್ಥ್ಯ ಹೊಂದಿರುತ್ತದೆ. ಕ್ಯಾನ್ಸರ್ ಕೋಶದ ಮೇಲೆ ಆಕ್ರಮಣ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...