alex Certify ಈ ಸಮಯದಲ್ಲಿ ಗೂಬೆ ಕಂಡ್ರೆ ʼಶುಭʼ ಸಕೇತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಸಮಯದಲ್ಲಿ ಗೂಬೆ ಕಂಡ್ರೆ ʼಶುಭʼ ಸಕೇತ

ಸಾಮಾನ್ಯವಾಗಿ ಮೂರ್ಖ ಎಂದು ಬೈಯ್ಯುವಾಗ ಗೂಬೆ ಪದ ಬಳಸಲಾಗುತ್ತದೆ. ಆದ್ರೆ ಮೂಲತಃ ಇದು ತಪ್ಪು. ಗೂಬೆ, ತಾಯಿ ಲಕ್ಷ್ಮಿಯ ವಾಹನ. ಜೊತೆಗೆ ಅದು ಅತ್ಯಂತ ಬುದ್ದಿವಂತ ಪ್ರಾಣಿಗಳಲ್ಲಿ ಒಂದು.

ಭಾರತೀಯ ಸಮಾಜದಲ್ಲಿ ಗೂಬೆಯನ್ನು ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ. ಆದ್ರೆ ತಂತ್ರಶಾಸ್ತ್ರದಲ್ಲಿ ಗೂಬೆಗೆ ವಿಶೇಷ ಮಹತ್ವವಿದೆ. ಪ್ರಾಚೀನ ಕಾಲದಲ್ಲಿ ಹವಾಮಾನದ ಬಗ್ಗೆ ತಿಳಿಯಲೂ ಗೂಬೆಯನ್ನು ಬಳಕೆ ಮಾಡ್ತಾ ಇದ್ದರು. ಪುರಾಣ ಕಾಲದ ಉಲ್ಲೇಖದಂತೆ ಮಂತ್ರ-ತಂತ್ರ ಮಾಡುವವರು ಅಮವಾಸ್ಯೆ ರಾತ್ರಿಯಂದು ಗೂಬೆಯನ್ನು ಬಲಿ ಕೊಡ್ತಾರಂತೆ. ಇದರಿಂದ ಲಕ್ಷ್ಮಿ ಪ್ರಸನ್ನಳಾಗ್ತಾಳೆ ಎಂಬುದು ಅವರ ನಂಬಿಕೆ. ಆದ್ರೆ ಯಾವುದೇ ಬಲಿಯಿಂದ ತಾಯಿ ಲಕ್ಷ್ಮಿ ಪ್ರಸನ್ನಳಾಗುವುದಿಲ್ಲ. ಅದೇನೇ ಇರಲಿ, ಗೂಬೆ ಕೆಲ ಶುಭ ಸಂಕೇತಗಳನ್ನು ನೀಡುತ್ತದೆ.

ಬೆಳಿಗ್ಗೆ ಪೂರ್ವದಲ್ಲಿ ಕುಳಿತಿರುವ ಗೂಬೆಯನ್ನು ನೋಡಿದ್ರೆ ಅಥವಾ ಧ್ವನಿ ಕೇಳಿದ್ರೆ ಹಣ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.

ರಾತ್ರಿ ವೇಳೆ ಹೊರಗೆ ಹಾಕಿರುವ ಮಂಚದ ಮೇಲೆ ಗೂಬೆ ಬಂದು ಕುಳಿತಲ್ಲಿ ಆ ಮನೆಯಲ್ಲಿ ಶೀಘ್ರವೇ ಮದುವೆ ನಡೆಯಲಿದೆ ಎಂದರ್ಥ.

ಗರ್ಭಿಣಿ ಹೆರಿಗೆಗೆ ಹೋಗುವ ವೇಳೆ ಗೂಬೆ ನೋಡಿದ್ರೆ ಆಕೆಗೆ ಅವಳಿ ಮಕ್ಕಳು ಜನಿಸುತ್ತವೆ ಎಂಬ ನಂಬಿಕೆ ಇದೆ.

ಗೂಬೆ ದೇಹ ರೋಗಿ ಮೈಗೆ ತಾಕಿದ್ರೆ ಆತ ಬೇಗ ಗುಣಮುಖನಾಗುತ್ತಾನೆಂದರ್ಥ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...