alex Certify ಈ ವಿಡಿಯೋ ನೋಡಿದ್ರೆ ಮೊಬೈಲ್ ಬಳಸುವ ಮುನ್ನ ಹತ್ತು ಬಾರಿ ಯೋಚನೆ ಮಾಡ್ತೀರಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಡಿಯೋ ನೋಡಿದ್ರೆ ಮೊಬೈಲ್ ಬಳಸುವ ಮುನ್ನ ಹತ್ತು ಬಾರಿ ಯೋಚನೆ ಮಾಡ್ತೀರಿ…!

ಮೊಬೈಲ್​ ಫೋನ್​ಗಳಿಗೆ ಎಂತವರ ಚಿತ್ತವನ್ನು ಕೂಡ ತನ್ನತ್ತ ಸೆಳೆಯುವ ಶಕ್ತಿಯಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಮೊಬೈಲ್​ಗಳ ಮೇಲಿನ ಅತಿಯಾದ ಮೋಹ ಡೆಡ್ಲಿ ಅಪಘಾತಗಳಿಗೆ ಕಾರಣವಾಗಲೂಬಹುದು.

ಈ ಮಾತಿಗೆ ಸ್ಪಷ್ಟ ಉದಾಹರಣೆ ಎಂಬಂತೆ ಟರ್ಕಿಯ ಮಾಲ್​ವೊಂದರಲ್ಲಿ ಮೊಬೈಲ್​ ನೋಡುತ್ತಾ ಬರುತ್ತಿದ್ದ ಯುವಕ ತೆರೆದ ರಂಧ್ರವೊಂದರಲ್ಲಿ ಬಿದ್ದಿದ್ದಾನೆ. ಅದೃಷ್ಟವಶಾತ್​ ಆತನಿಗೆ ಯಾವುದೇ ಗಾಯಗಳುಂಟಾಗಲಿಲ್ಲ.

ಸಿಸಿ ಕ್ಯಾಮರಾದಲ್ಲಿ ಈ ಘಟನೆಯ ಸಂಪೂರ್ಣ ದೃಶ್ಯಾವಳಿಯು ಸೆರೆಯಾಗಿದೆ. ವಿಡಿಯೋದಲ್ಲಿ ಇಸ್ತಾನ್​ಬುಲ್​​ನ ಶಾಪಿಂಗ್​ ಮಾಲ್​ವೊಂದರ ಸ್ಟೋರ್​ ಒಂದರಲ್ಲಿ ಯುವಕನೊಬ್ಬ ಮೊಬೈಲ್​ ನೋಡುತ್ತಾ ನಡೆದುಕೊಂಡು ಬರುತ್ತಿರುತ್ತಾನೆ. ಈತನಿಗೆ ಮೇಲಿನ ಮಹಡಿಯಿಂದ ಕೆಳ ಮಹಡಿಗೆ ಬಾಕ್ಸ್​ಗಳನ್ನು ಸಾಗಿಸಲು ರಂಧ್ರವೊಂದನ್ನು ತೆಗೆದಿದ್ದಾರೆ ಎಂಬುದು ಲಕ್ಷ್ಯಕ್ಕಿರಲಿಲ್ಲ.

ಹೀಗಾಗಿ ನಡೆದುಕೊಂಡು ಬರುತ್ತಿದ್ದ ಯುವಕ ಆ ರಂಧ್ರದಿಂದ ಸೀದಾ ಕೆಳಗಿನ ಫ್ಲೋರ್​ಗೆ ಹೋಗಿದ್ದಾನೆ. ಅದೃಷ್ಟವಶಾತ್​ ಆತ ಬಾಕ್ಸ್​ಗಳ ಮೇಲೆಯೇ ಬಿದ್ದಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...