alex Certify ಈ ವರ್ಷ ಉದ್ಯೋಗಿಗಳಿಗೆ ಕಾದಿದೆ ಮತ್ತಷ್ಟು ಕಹಿ ಸುದ್ದಿ; ಅರ್ಥಶಾಸ್ತ್ರಜ್ಞರು ನುಡಿದಿದ್ದಾರೆ ಶಾಕಿಂಗ್‌ ಭವಿಷ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವರ್ಷ ಉದ್ಯೋಗಿಗಳಿಗೆ ಕಾದಿದೆ ಮತ್ತಷ್ಟು ಕಹಿ ಸುದ್ದಿ; ಅರ್ಥಶಾಸ್ತ್ರಜ್ಞರು ನುಡಿದಿದ್ದಾರೆ ಶಾಕಿಂಗ್‌ ಭವಿಷ್ಯ….!

ಟೆಕ್ಕಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಉದ್ಯೋಗಿಗಳ ಪಾಲಿಗೆ 2023 ಆರಂಭದಲ್ಲೇ ಕಹಿಯಾಗುತ್ತಿದೆ. ಪ್ರಪಂಚದಾದ್ಯಂತದ ಬಹುರಾಷ್ಟ್ರೀಯ ಕಂಪನಿಗಳು ಸೇರಿದಂತೆ ಅನೇಕ ಸಂಸ್ಥೆಗಳು ನಿರಂತರವಾಗಿ ಉದ್ಯೋಗ ಕಡಿತ ಮಾಡುತ್ತಿವೆ. ಅಮೆಜಾನ್, ಗೂಗಲ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ಕಂಪನಿಗಳು ಈಗಾಗ್ಲೇ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿವೆ.

ಅರ್ಥಶಾಸ್ತ್ರಜ್ಞರ ಪ್ರಕಾರ ಇದು ಸದ್ಯಕ್ಕೆ ಮುಗಿಯುವಂಥದ್ದಲ್ಲ. 2023 ರಲ್ಲಿ ಕಂಪನಿಗಳು ಭಾರೀ ಸಂಖ್ಯೆಯಲ್ಲಿ ನೌಕರರನ್ನು ಕೆಲಸದಿಂದ ಕಿತ್ತು ಹಾಕಲಿವೆ ಎಂದು ತಜ್ಞರು ಭವಿಷ್ಯ ನುಡಿದಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಕಂಪನಿಗಳು ವೇತನ ಕಡಿತ ಮಾಡಿದರೂ ಅಚ್ಚರಿಯಿಲ್ಲ. ವರದಿಗಳ ಪ್ರಕಾರ ಕೇವಲ 12 ಪ್ರತಿಶತದಷ್ಟು ಸಂಸ್ಥೆಗಳಲ್ಲಿ ಮುಂದಿನ ಮೂರು ತಿಂಗಳಲ್ಲಿ ಉದ್ಯೋಗಾವಕಾಶವನ್ನು ಹೆಚ್ಚಿಸಲಾಗುತ್ತದೆ ಎಂಬುದು ಅರ್ಥಶಾಸ್ತ್ರಜ್ಞರ ಅಂದಾಜು.

ನ್ಯಾಷನಲ್ ಅಸೋಸಿಯೇಷನ್ ​​ಫಾರ್ ಬ್ಯುಸಿನೆಸ್ ಎಕನಾಮಿಕ್ಸ್ ಈ ಬಗ್ಗೆ ಸಮೀಕ್ಷೆ ಮಾಡಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಆರಂಭಿಕ ದಿನಗಳ ನಂತರ ಹೆಚ್ಚಿನ ಉದ್ಯಮಿಗಳು ತಮ್ಮ ಸಂಸ್ಥೆಗಳಲ್ಲಿ ಉದ್ಯೋಗ ನಷ್ಟವನ್ನು ಅಂದಾಜು ಮಾಡಿರುವುದು ಇದೇ ಮೊದಲು. ಸಮೀಕ್ಷೆಯ ಪ್ರಕಾರ ಮೈಕ್ರೋಸಾಫ್ಟ್ ಮತ್ತು ಗೂಗಲ್‌ನಂತಹ ದೊಡ್ಡ ಟೆಕ್ ಕಂಪನಿಗಳು ನಡೆಸುತ್ತಿರುವ ವಜಾ ಪ್ರಕ್ರಿಯೆಯಿಂದ ಭಾರತ ಸೇರಿದಂತೆ ಜಾಗತಿಕವಾಗಿ ಜನವರಿಯಲ್ಲಿ ದಿನಕ್ಕೆ ಸರಾಸರಿ 3,000 ಐಟಿ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಲಾಗುತ್ತಿದೆ. ಮುಂದಿನ ವರ್ಷ 50 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿನ ಆರ್ಥಿಕ ಹಿಂಜರಿತದ ಅಪಾಯವಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.

ಹಾಗಾಗಿ ವಜಾ ಪ್ರಕ್ರಿಯೆ ಮತ್ತಷ್ಟು ವೇಗ ಪಡೆಯಬಹುದು. 166 ಟೆಕ್ ಕಂಪನಿಗಳು ಇಲ್ಲಿಯವರೆಗೆ 65,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿವೆ. ಗೂಗಲ್‌ನ ಮೂಲ ಕಂಪನಿ ಆಲ್ಫಾಬೆಟ್ 12,000 ಉದ್ಯೋಗಿಗಳನ್ನು ವಜಾ ಮಾಡುವುದಾಗಿ ಪ್ರಕಟಿಸಿದೆ. ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾ ಕೂಡ 2023ರ ಮೂರನೇ ತ್ರೈಮಾಸಿಕದ ಅಂತ್ಯದ ವೇಳೆಗೆ ಒಟ್ಟು 10,000 ಉದ್ಯೋಗ ಕಡಿತ ಮಾಡುವುದಾಗಿ ಹೇಳಿದ್ದಾರೆ.

ಅಮೆಜಾನ್ ಈ ಹಿಂದೆ ಭಾರತದಲ್ಲಿ ಸುಮಾರು 1,000 ಮತ್ತು ಜಾಗತಿಕವಾಗಿ 18,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಮ್ಯೂಸಿಕ್ ಸ್ಟ್ರೀಮಿಂಗ್ ದೈತ್ಯ ಸ್ಪಾಟಿಫೈ ಜಾಗತಿಕವಾಗಿ ಸುಮಾರು 600 ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. 2022 ರಲ್ಲಿ 1,000 ಕ್ಕೂ ಹೆಚ್ಚು ಕಂಪನಿಗಳು 1,54,336 ಉದ್ಯೋಗಿಗಳನ್ನು ವಜಾಗೊಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...