alex Certify ಈ ರಾಶಿಯ ಸ್ತ್ರೀಯರಿಗೆ ಕಾದಿದೆ ʼಧನ ಲಾಭʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ಸ್ತ್ರೀಯರಿಗೆ ಕಾದಿದೆ ʼಧನ ಲಾಭʼ

ಮೇಷ : ಈ ದಿನವು ನಿಮಗೆ ಉತ್ತಮವಾಗಿರಲಿದೆ. ವಿದ್ಯಾರ್ಥಿಗಳು ಗುರು ಅನುಗ್ರಹದಿಂದ ಅಂದುಕೊಂಡಿದ್ದನ್ನು ಸಾಧಿಸಲಿದ್ದಾರೆ. ಉದ್ಯಮದಲ್ಲಿ ಎಲ್ಲಾ ರೀತಿಯ ಸವಾಲುಗಳನ್ನು ಎದುರಿಸಿ ಮುನ್ನುಗ್ಗಲಿದ್ದೀರಿ. ದಾಂಪತ್ಯ ಜೀವನ ಸಂತಸಮಯವಾಗಿ ಇರಲಿದೆ.

ವೃಷಭ : ನಿಮ್ಮ ಗುರಿಯಿಂದ ನಿಮ್ಮ ವಿಚಲಿತರನ್ನಾಗಿಸಲು ಕೆಲ ಅಡೆತಡೆಗಳು ಎದುರಾಗಬಹುದು. ಯಾವುದೇ ಕಾರಣಕ್ಕೂ ಮನಸ್ಸನ್ನು ಚಂಚಲ ಮಾಡಿಕೊಳ್ಳಬೇಡಿ. ತಾಯಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಮಾನಸಿಕವಾಗಿ ವಿಚಲಿತರಾಗುವಿರಿ.

ಮಿಥುನ : ಕೆಲವೊಂದು ವಿಚಾರಗಳಲ್ಲಿ ನೀವು ದೃಢ ಸಂಕಲ್ಪದಿಂದ ಇರಲೇಬೇಕು. ಸ್ಥಿಮಿತ ಕಳೆದುಕೊಳ್ಳಬೇಡಿ. ಸಂಗಾತಿಯು ಚಿಕ್ಕ ಚಿಕ್ಕ ವಿಷಯಕ್ಕೂ ನಿಮ್ಮ ಮೇಲೆ ರೇಗಲಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರಿಗೆ ಈ ದಿನ ಶುಭವಾಗಲಿದೆ.

ಕಟಕ : ಉದ್ಯೋಗದ ನಿಮಿತ್ತ ನಿಮಗೆ ವಿದೇಶಿ ಪ್ರಯಾಣದ ಭಾಗ್ಯ ಕೂಡಿ ಬರಲಿದೆ. ಪ್ರಯಾಣ ಕೂಡ ಉತ್ತಮವಾಗಿಯೇ ಇರಲಿದೆ. ಸಂಗಾತಿಯು ನಿಮ್ಮನ್ನು ಎಲ್ಲಾ ಪರಿಸ್ಥಿತಿಯಲ್ಲಿಯೂ ಅರ್ಥ ಮಾಡಿಕೊಳ್ಳುತ್ತಾರೆ.

ಸಿಂಹ : ಯಾವುದೇ ವಿಚಾರದಲ್ಲಿ ಆಗಲಿ ಅತಿಯಾದ ಆತುರ ಸಲ್ಲದು. ತಾಳ್ಮೆಯನ್ನು ಕಾಯ್ದುಕೊಳ್ಳುವುದನ್ನು ಕಲಿತುಕೊಳ್ಳಿ. ಸೌಂದರ್ಯವರ್ಧಕ ಮಾರಾಟಗಾರರಿಗೆ ಇದು ಸುದಿನವಾಗಿದೆ. ನವವಿವಾಹಿತರಿಗೆ ಸಂತಾನ ಭಾಗ್ಯವಿದೆ.

ಕನ್ಯಾ : ಅನೇಕ ದಿನಗಳ ಬಳಿಕ ಕುಟುಂಬಸ್ಥರ ಜೊತೆಯಲ್ಲಿ ಕಾಲ ಕಳೆಯಲಿದ್ದೀರಿ. ಈ ದಿನ ನಿಮಗೆ ಸಂತಸಮಯವಾಗಿ ಇರಲಿದೆ. ಬಹಳ ದಿನಗಳ ಬಳಿಕ ಸ್ನೇಹಿತರನ್ನು ಭೇಟಿಯಾಗಲಿದ್ದೀರಿ. ಹಳೆಯ ಸಾಲಗಳು ತೀರಲಿವೆ.

ತುಲಾ : ಸಂಗಾತಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಇದರಿಂದ ಆಸ್ಪತ್ರೆಗೆ ಅಲೆದಾಟ ತಪ್ಪಿದ್ದಲ್ಲ. ಉದ್ಯಮದಲ್ಲಿ ಸಫಲರಾಗಲು ಇನ್ನಷ್ಟು ಪ್ರಯತ್ನ ಮುಂದುವರಿಸಿ. ಸ್ತ್ರೀಯರಿಗೆ ಧನಲಾಭ ಕಾದಿದೆ. ಆರೋಗ್ಯದ ಕಡೆ ಗಮನ ನೀಡಿ.

ವೃಶ್ಚಿಕ : ಸಂಗಾತಿ ಹಾಗೂ ನಿಮ್ಮ ನಡುವಿನ ಸಂಬಂಧ ಗಟ್ಟಿಗೊಳ್ಳಲಿದೆ. ನಿಮ್ಮ ಯೋಜನೆಗಳು ಫಲಪ್ರದವಾಗಲು ಹೆಚ್ಚಿನ ಪ್ರಯತ್ನ ಮಾಡಿ. ಪೋಷಕರು ವ್ಯವಹಾರದಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಸ್ನೇಹಿತರ ನಿಜಬಣ್ಣ ಬಯಲಾಗಲಿದೆ.

ಧನು : ಭೂಮಿ ಖರೀದಿ ಮಾಡುವವರಿಗೆ ಇದು ಸುದಿನವಾಗಿದೆ. ಈ ದಿನ ನಿಮಗೆ ಹೆಚ್ಚಿನ ಅದೃಷ್ಟ ತರಲಿದೆ. ಸಂಬಂಧದ ವಿಚಾರದಲ್ಲಿ ನೀವು ಅನೇಕ ಅಪವಾದ ಎದುರಿಸಬೇಕಾದೀತು. ಸಾರ್ವಜನಿಕ ವಲಯದಲ್ಲಿ ಅವಮಾನವಾಗಲಿದೆ.

ಮಕರ : ವೈವಾಹಿಕ ಸಂಬಂಧಗಳಿಗೆ ಅನೇಕ ವರ್ಷಗಳಿಂದ ಹುಡುಕಾಟ ನಡೆಸುತ್ತಿರುವವರಿಗೆ ಇಂದು ಯೋಗ್ಯ ಕಂಕಣಬಲ ಕೂಡಿ ಬರಲಿದೆ. ಮಕ್ಕಳ ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ. ಆದರೆ ಮನೆ ಮದ್ದು ಇದಕ್ಕೆ ಪರಿಹಾರ ನೀಡಲಿದೆ.

ಕುಂಭ : ಉದ್ಯಮದಲ್ಲಿ ನೀವು ಆದಷ್ಟು ಜಾಗ್ರತೆಯಿಂದ ಇರಬೇಕು. ಇಲ್ಲವಾದಲ್ಲಿ ಬಹುದೊಡ್ಡ ನಷ್ಟ ಅನುಭವಿಸಲಿದ್ದೀರಿ. ಮದುವೆ ಬಗ್ಗೆ ಯೋಚನೆ ಮಾಡಲು ಇದು ಸೂಕ್ತ ಸಮಯವಲ್ಲ. ಯಾರಿಗೂ ಸಾಲ ನೀಡಲು ಹೋಗಬೇಡಿ.

ಮೀನ : ದಾಂಪತ್ಯ ಜೀವನ ಅತ್ಯಂತ ಚೆನ್ನಾಗಿ ಇರಲಿದೆ. ವೃತ್ತಿ ರಂಗದಲ್ಲಿ ಯಶಸ್ಸನ್ನು ಪಡೆಯಲಿದ್ದೀರಿ. ವ್ಯಾಪಾರದಲ್ಲಿ ಲಾಭವಿದೆ. ಶ್ರೀಕೃಷ್ಣನನ್ನು ಆರಾಧಿಸಿ. ಆರೋಗ್ಯದ ಕಡೆ ಗಮನ ನೀಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...