alex Certify ಈ ರಾಶಿಯ ವ್ಯಾಪಾರಿಗಳಿಗೆ ಇದೆ ಇಂದು ಅನಿರೀಕ್ಷಿತ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ರಾಶಿಯ ವ್ಯಾಪಾರಿಗಳಿಗೆ ಇದೆ ಇಂದು ಅನಿರೀಕ್ಷಿತ ಲಾಭ

 

ಮೇಷ: ನಿಮ್ಮ ಅತಿಯಾದ ಸೋಮಾರಿತನವು ನಿಮ್ಮ ಕೈನಿಂದ ಒಳ್ಳೊಳ್ಳೆ ಅವಕಾಶಗಳನ್ನು ಕಿತ್ತುಕೊಳ್ಳಲಿದೆ. ಇದರಿಂದ ಮುಂದಿನ ದಿನಗಳಲ್ಲಿ ಪಶ್ಚಾತಾಪ ಅನುಭವಿಸುವ ಮೊದಲು ಈಗಲೇ ಎಚ್ಚೆತ್ತುಕೊಳ್ಳಿ.

ಉದ್ಯಮದಲ್ಲಿ ವಿದೇಶಿ ಗ್ರಾಹಕರ ನೆರವಿನಿಂದ ಅನಿರೀಕ್ಷಿತ ಲಾಭ ಗಳಿಸಲಿದ್ದೀರಿ.

ವೃಷಭ : ಕಚೇರಿ ಕೆಲಸದಲ್ಲಿ ಬಹಳಷ್ಟು ಹೊಸ ಅವಕಾಶಗಳು ನಿಮಗೆ ಒದಗಿ ಬರಲಿದೆ. ಇದರಿಂದ ನೀವು ಯಶಸ್ಸಿನ ಉತ್ತುಂಗಕ್ಕೆ ಏರಲಿದ್ದೀರಿ. ಜೀವನ ಸಂಗಾತಿಯೊಂದಿಗೆ ವೈಮನಸ್ಯ ಮೂಡುವ ಸಾಧ್ಯತೆ ಇದೆ.

ಮಕ್ಕಳ ನಡುವೆ ಇರುವ ಶೀತಲ ಸಮರವು ನಿಮ್ಮ ಆತಂಕಕ್ಕೆ ಕಾರಣವಾಗಬಹುದು.

ಮಿಥುನ : ಹೊಸ ಉದ್ಯಮವನ್ನು ಆರಂಭಿಸುವ ಮುನ್ನ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ. ನೀವು ಅತಿಯಾಗಿ ನಂಬಿದ್ದ ಸ್ನೇಹಿತರೇ ನಿಮಗೆ ಮೋಸ ಮಾಡಲಿದ್ದಾರೆ. ನೀವು ನಿಮ್ಮವರೇ ಅಲ್ಲ ಎಂದುಕೊಂಡಿದ್ದವರು ನಿಮಗೆ ಹತ್ತಿರವಾಗಲಿದ್ದಾರೆ. ದಾಂಪತ್ಯ ಜೀವನದಲ್ಲಿ ನೆಮ್ಮದಿ ಇದೆ.

ಕಟಕ : ವ್ಯವಹಾರದಲ್ಲಿ ದೊಡ್ಡ ಮಟ್ಟದಲ್ಲಿ ಹೂಡಿಕೆ ಮಾಡಲು ಇದು ಸಕಾಲವಾಗಿದೆ. ಹಿರಿಯರ ಸಲಹೆ ಪಡೆದು ಸೂಕ್ತ ಹೆಜ್ಜೆ ಇಡಿ. ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಇದರಿಂದ ವಿದೇಶ ಪ್ರಯಾಣ ಮಾಡಬೇಕು ಎಂಬ ನಿಮ್ಮ ಕನಸು ಈಡೇರುವ ಸಾಧ್ಯತೆ ಇದೆ.

ಸಿಂಹ : ವಿದ್ಯಾರ್ಥಿಗಳು ಅಂದುಕೊಂಡ ಗುರಿಯನ್ನು ತಲುಪಲಿದ್ದಾರೆ. ಇದು ಪೋಷಕರಿಗೆ ಗೌರವ ತಂದುಕೊಡಲಿದೆ. ಮನೆಯಲ್ಲಿ ಚಿನ್ನಾಭರಣ ಖರೀದಿ ಮಾಡುವ ಸಾಧ್ಯತೆ ಇದೆ. ಆಸ್ತಿ ವ್ಯವಹಾರದಲ್ಲಿ ದಾಯಾದಿ ಕಲಹ ಉಂಟಾಗಬಹುದು.

ಕನ್ಯಾ: ಸಂಗಾತಿ ಜೊತೆ ಉತ್ತಮ ಸಂಬಂಧ ಹೊಂದಲಿದ್ದೀರಿ. ಕೋರ್ಟ್ ಕಚೇರಿ ವ್ಯವಹಾರದಲ್ಲಿ ಪರಿಸ್ಥಿತಿ ನಿಮ್ಮದಾಗಲಿದೆ. ಪೋಷಕರ ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು. ಇದರಿಂದ ನೀವು ವಿಚಲಿತರಾಗಲಿದ್ದೀರಿ. ಇಂದು ನಿಮ್ಮ ಕೈನಿಂದ ಹಣ ತುಸು ಹೆಚ್ಚೇ ಖರ್ಚಾಗಲಿದೆ.

ತುಲಾ : ಸ್ನೇಹಿತರೆಲ್ಲ ಒಂದೆಡೆ ಸೇರಿ ಔತಣ ಕೂಟ ಮಾಡಲಿದ್ದೀರಿ. ಈ ದಿನ ನಿಮ್ಮ ಆರ್ಥಿಕ ಸ್ಥಿತಿ ಬಲವಾಗಿ ಇರಲಿದೆ. ಕಚೇರಿಯಲ್ಲಿ ಅತಿಯಾದ ಒತ್ತಡದಿಂದ ಬೆನ್ನು ನೋವಿನ ಸಮಸ್ಯೆ ನಿಮ್ಮನ್ನು ಕಾಡಬಹುದು. ಹಿತಶತ್ರುಗಳು ಹೆಣೆದ ಬಲೆಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಿ.

ವೃಶ್ಚಿಕ : ನೀವು ಆರ್ಥಿಕವಾಗಿ ಬೆಳವಣಿಗೆ ಕಾಣುವ ಸ್ಥಿತಿಗೆ ದೇವರು ಕೂಡ ಸಾಥ್​ ನೀಡಲಿದ್ದಾರೆ. ಇಂದು ನಿಮಗೆ ದಿಢೀರ್​ ಹಣ ಲಾಭವಿದೆ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಸಹೋದ್ಯೋಗಿಗಳು ಸಾಥ್​ ನೀಡಲಿದ್ದಾರೆ. ಅಮೂಲ್ಯವಾದ ವಸ್ತುವೊಂದು ಕಳೆದುಹೋಗುವ ಸಾಧ್ಯತೆ ಇದೆ.

ಧನು : ಸಂಬಂಧಿಗಳು ನಿಮಗೆ ಜೀವನಕ್ಕೆ ಬೇಕಾದ ಉತ್ತಮ ಸಲಹೆ ನೀಡಲಿದ್ದಾರೆ. ವೃತ್ತಿ ಜೀವನವು ನಿಮ್ಮನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ. ಹೀಗಾಗಿ ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ.

ಮಕರ : ಜವಳಿ ಉದ್ಯಮಿಗಳು, ಎಲೆಕ್ಟ್ರಾನಿಕ್​ ಉದ್ಯಮಿಗಳಿಗೆ ಇಂದು ಧನಲಾಭವಿದೆ. ವೈವಾಹಿಕ ಸಂಬಂಧಕ್ಕಾಗಿ ಹುಡುಕಾಟ ನಡೆಸುತ್ತಿರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿ ಇರಲಿದೆ.

ಕುಂಭ : ವ್ಯವಹಾರದಲ್ಲಿ ಈ ದಿನ ನಿಮಗೆ ಕಠಿಣವಾಗಿ ಇರಲಿದೆ. ಮನೆಗೆ ಅನಿರೀಕ್ಷಿತ ಅತಿಥಿ ಆಗಮನವಿದೆ, ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದೆ. ತಾಯಿಯಿಂದ ಕೊಂಚ ಕಿರಿಕಿರಿಗೆ ಒಳಗಾಗುವ ಸಾಧ್ಯತೆ ಇದೆ. ಮನೆಯಲ್ಲಿ ಶುಭ ಕಾರ್ಯ ನಡೆಯಲಿದೆ.

ಮೀನ: ಸಹೋದ್ಯೋಗಿಗಳ ಜೊತೆ ವೈಮನಸ್ಯ ಮೂಡುವ ಸಾಧ್ಯತೆ ಇದೆ. ಪಿತ್ರಾರ್ಜಿತ ಆಸ್ತಿ ಸಂಬಂಧ ಇದ್ದ ಹಳೆಯ ವಿವಾದವೊಂದು ಬಗೆಹರಿಯಲಿದೆ. ವಾಹನ ಖರೀದಿಗೆ ಈ ದಿನ ಸೂಕ್ತವಲ್ಲ. ಜಾನುವಾರು ಖರೀದಿ ಮಾಡಬಹುದು. ತರಕಾರಿ ವ್ಯಾಪಾರಿಗಳಿಗೆ ಲಾಭವಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...