alex Certify ಈ ಮಸಾಲೆಗಳನ್ನು ನಿಯಮಿತವಾಗಿ ಬಳಸಿದ್ರೆ ಕರಗಿ ಹೋಗುತ್ತೆ ಹೊಟ್ಟೆಯ ಬೊಜ್ಜು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಮಸಾಲೆಗಳನ್ನು ನಿಯಮಿತವಾಗಿ ಬಳಸಿದ್ರೆ ಕರಗಿ ಹೋಗುತ್ತೆ ಹೊಟ್ಟೆಯ ಬೊಜ್ಜು…!

ತೂಕವನ್ನು ಕಡಿಮೆ ಮಾಡಲು ಸಾಧ್ಯವಿರುವ ಎಲ್ಲಾ ವಿಧಾನಗಳನ್ನೂ ನಾವು ಅಳವಡಿಸಿಕೊಳ್ಳುತ್ತೇವೆ. ಕಟ್ಟುನಿಟ್ಟಾದ ಆಹಾರ, ಭಾರೀ ವ್ಯಾಯಾಮ ಹೀಗೆ ಎಲ್ಲಾ ಕಸರತ್ತನ್ನೂ ಮಾಡುತ್ತೇವೆ. ಆದರೂ ತೂಕ ಇಳಿಸುವುದು ಸುಲಭವೇನಲ್ಲ. ಹಲವು ಬಾರಿ ಇಷ್ಟೆಲ್ಲಾ ಪ್ರಯತ್ನದ ನಂತರವೂ ಬಯಸಿದ ಫಲಿತಾಂಶ ಸಿಗುವುದಿಲ್ಲ. ಹಾಗಾಗಿ ಸರಳವಾಗಿ ತೂಕ ಕಡಿಮೆ ಮಾಡಲು ಕೆಲವು ಮಸಾಲೆಗಳನ್ನು ಸೇವನೆ ಮಾಡಬಹುದು. ಇವುಗಳು ಪ್ರಮುಖವಾಗಿ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡುತ್ತವೆ.

ನಾವು ಸಾಮಾನ್ಯವಾಗಿ ಅಡುಗೆಯ ರುಚಿಯನ್ನು ಹೆಚ್ಚಿಸಲು ಮಸಾಲೆಗಳನ್ನು ಬಳಸುತ್ತೇವೆ. ಅವುಗಳಲ್ಲಿ ಅನೇಕ ಆಯುರ್ವೇದ ಗುಣಗಳು ಕಂಡುಬರುತ್ತವೆ. ಹಾಗಾಗಿ ಮಸಾಲೆ ಪದಾರ್ಥಗಳು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.

ಜೀರಿಗೆ : ಸಾಮಾನ್ಯವಾಗಿ ಬಹುತೇಕ ಎಲ್ಲಾ ಬಗೆಯ ತಿನಿಸುಗಳಿಗೆ ಜೀರಿಗೆ ಬಳಸುತ್ತೇವೆ. ಅಡುಗೆಯ ರುಚಿ ಹೆಚ್ಚಿಸಬಲ್ಲ ಮಸಾಲೆ ಇದು. ಜೀರಿಗೆ ಸೇವನೆಯಿಂದ ಇನ್ಸುಲಿನ್ ಸೂಕ್ಷ್ಮತೆಯ ಬದಲಾವಣೆಗಳು ಬರಲು ಪ್ರಾರಂಭಿಸುತ್ತವೆ. ಇದರಲ್ಲಿರುವ ಫೈಟೊಸ್ಟೆರಾಲ್‌ಗಳ ಸಹಾಯದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಹುದು. ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ಜೀರಿಗೆ ನೀರನ್ನು ಕುಡಿಯಿರಿ. ಮೊಸರು ಅಥವಾ ಮಜ್ಜಿಗೆಯನ್ನು ಜೀರಿಗೆ ಪುಡಿಯೊಂದಿಗೆ ಬೆರೆಸಿ ಕುಡಿಯುವುದು ಕೂಡ ಪ್ರಯೋಜನಕಾರಿಯಾಗಿದೆ.

ಅರಿಶಿನ: ಭಾರತದ ಪ್ರತಿ ಅಡುಗೆ ಮನೆಯಲ್ಲೂ ಅರಿಶಿನ ಇದ್ದೇ ಇರುತ್ತದೆ. ಅರಿಶಿನ ತಿನಿಸುಗಳಿಗೆ ಸುಂದರ ಬಣ್ಣ ಕೊಡಬಲ್ಲ ಮಸಾಲೆ. ಇದರಲ್ಲಿ ಅನೇಕ ಔಷಧೀಯ ಗುಣಗಳೂ ಇವೆ. ಅರಿಶಿನವನ್ನು ಸೇವನೆ ಮಾಡುವುದರಿಂದ ದೇಹದ ಸುಡುವ ಸಂವೇದನೆ ಕಡಿಮೆಯಾಗುತ್ತದೆ. ಅನೇಕ ವಿಷಕಾರಿ ವಸ್ತುಗಳು ದೇಹದಿಂದ ಹೊರಬರುತ್ತವೆ. ಅರಿಶಿನದ ಸಹಾಯದಿಂದ ಚಯಾಪಚಯವನ್ನು ನಿಯಂತ್ರಿಸಬಹುದು, ಇದು ತೂಕವನ್ನು ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ. ಅರಿಶಿನದ ಹಾಲನ್ನು ಕುಡಿದರೆ ಹೆಚ್ಚಿನ ಲಾಭವಾಗುತ್ತದೆ.

ಕಾಳು ಮೆಣಸು: ಕಾಳು ಮೆಣಸನ್ನು ತಿನ್ನುವುದರಿಂದ ಕೊಬ್ಬಿನ ಕೋಶಗಳ ರಚನೆಯ ಪ್ರಕ್ರಿಯೆಯು ಹೆಚ್ಚಿನ ಪ್ರಮಾಣದಲ್ಲಿ ನಿಲ್ಲುತ್ತದೆ. ಇದು ಹೊಟ್ಟೆ ಮತ್ತು ಸೊಂಟದಲ್ಲಿ ಕೊಬ್ಬು ಸಂಗ್ರಹವಾಗಲು ಬಿಡುವುದಿಲ್ಲ. ಕಾಳುಮೆಣಸಿನ ಕಷಾಯ ಅಥವಾ ಚಹಾ ಮಾಡಿಕೊಂಡು ಕುಡಿಯಬಹುದು. ಸಲಾಡ್ ಅಥವಾ ಬೇಯಿಸಿದ ಮೊಟ್ಟೆಗಳಿಗೆ ಕಾಳು ಮೆಣಸಿನ ಪುಡಿ ಸಿಂಪಡಿಸಿ ತಿನ್ನುವುದು ಕೂಡ ಪ್ರಯೋಜನಕಾರಿ.

ದಾಲ್ಚಿನ್ನಿ: ದಾಲ್ಚಿನ್ನಿ ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ಇದು ಸಕ್ಕರೆ ಕೊಬ್ಬಾಗಿ ಪರಿವರ್ತನೆಯಾಗುವುದನ್ನು ತಡೆಯುತ್ತದೆ. ಇದರಿಂದ ಹೊಟ್ಟೆಯ ಕೊಬ್ಬು ಹೆಪ್ಪುಗಟ್ಟುವುದಿಲ್ಲ. ದಾಲ್ಚಿನ್ನಿಯನ್ನು ಪುಡಿ ಮಾಡಿ ಲೋ ಫ್ಯಾಟ್‌ ಮಿಲ್ಕ್‌ಗೆ ಸೇರಿಸಿಕೊಂಡು ಕುಡಿಯಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...