alex Certify ಈ ಜಾದು ವೀಕ್ಷಿಸಿದ್ದು ಬರೋಬ್ಬರಿ 6 ಮಿಲಿಯನ್ ಮಂದಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಜಾದು ವೀಕ್ಷಿಸಿದ್ದು ಬರೋಬ್ಬರಿ 6 ಮಿಲಿಯನ್ ಮಂದಿ..!

ಸಕ್ಕರೆ ಪೊಟ್ಟಣದೊಂದಿಗೆ ವ್ಯಕ್ತಿಯೊಬ್ಬರ ಮ್ಯಾಜಿಕ್ ಟ್ರಿಕ್ ನೋಡುಗರನ್ನು ಸಂಪೂರ್ಣವಾಗಿ ಬೆಚ್ಚಿ ಬೀಳಿಸಿದೆ. ಆನ್‌ಲೈನ್‌ನಲ್ಲಿ ಭಾರೀ ವೈರಲ್ ಆಗಿರುವ ದೃಶ್ಯಾವಳಿಗಳು ಪೆಟ್ರೋಲ್ ಪಂಪ್‌ನಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ಮ್ಯಾಜಿಕ್ ಮಾಡುವುದನ್ನು ನೋಡಬಹುದು.

ಪೊಟ್ಟಣವನ್ನು ಹರಿದು ತನ್ನ ಎಡಗೈಗೆ ಸಕ್ಕರೆಯನ್ನು ಸುರಿದು, ಅದನ್ನು ಮುಷ್ಟಿಯಲ್ಲಿ ಬಿಗಿಗೊಳಿಸಿದ್ದಾನೆ. ನಂತರ ಖಾಲಿಯಾಗಿರೋ ಪೊಟ್ಟಣವನ್ನು ಬಾಯಿಯಲ್ಲಿ ಹಿಡಿದುಕೊಂಡು ನಂತರ ಬಲಗೈ ಮುಖಾಂತರ ಗಾಳಿಯಲ್ಲಿ ಸಕ್ಕರೆಯನ್ನು ಸುರಿಯುತ್ತಾನೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರನ್ನು ಗೊಂದಲಕ್ಕೀಡು ಮಾಡಿದೆ.

ಈ ವಿಡಿಯೋವನ್ನು ಮೊದಲಿಗೆ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಟಿಕ್ ಟಾಕ್ ನಲ್ಲಿ 6.5 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಟ್ವಿಟ್ಟರ್‌ನಲ್ಲಿ, ಈ ವಿಡಿಯೋವನ್ನು 5.4 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಅನೇಕ ವೀಕ್ಷಕರು ಮ್ಯಾಜಿಕ್ ಟ್ರಿಕ್ ಬಗ್ಗೆ ಗೊಂದಲ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಈತನ ಅಸಾಧಾರಣ ಸಾಧನೆಯನ್ನು ಕೊಂಡಾಡಿದ್ದಾರೆ. ವ್ಯಕ್ತಿಯು ನಕಲಿ ಹೆಬ್ಬೆರಳಿನ ಮುಖಾಂತರ ಮರೆ ಮಾಡಿದ್ದ ಸಕ್ಕರೆಯನ್ನು ಸುರಿದಿದ್ದಾನೆ ಎಂದು ಹಲವರು ಶಂಕಿಸಿದ್ದಾರೆ.

— Overtime (@overtime) February 25, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...