alex Certify ಈ ಚಿತ್ರದಲ್ಲಿರುವ ಹಕ್ಕಿಯನ್ನು ನೀವು ಗುರುತಿಸಬಲ್ಲಿರಾ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಚಿತ್ರದಲ್ಲಿರುವ ಹಕ್ಕಿಯನ್ನು ನೀವು ಗುರುತಿಸಬಲ್ಲಿರಾ..?

ಪ್ರಕೃತಿ ತನ್ನ ಮಡಿಲಲ್ಲಿ ಹಲವಾರು ವೈಶಿಷ್ಟ್ಯಗಳನ್ನು ಹೊಂದಿವೆ. ಮರದಲ್ಲಿರುವ ಹಸಿರು ಬಣ್ಣದ ಹಾವನ್ನು ಗುರುತಿಸುವುದು ಸ್ವಲ್ಪ ಕಷ್ಟವೇ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋದಲ್ಲಿ ನೀವು ಗೂಬೆಯನ್ನು ಹುಡುಕಬಲ್ಲಿರಾ..?

ಕಣ್ಣು ಮುಚ್ಚಿ ಮರದ ಮೇಲೆ ಕುಳಿತಿರುವ ಗೂಬೆಯ ಛಾಯಾಚಿತ್ರವನ್ನು ಹಂಚಿಕೊಳ್ಳಲಾಗಿದ್ದು, ಇದನ್ನು ಹುಡುಕುವಲ್ಲಿ ನೆಟ್ಟಿಗರು ಹೆಣಗಾಡಿದ್ದಾರೆ.

ಟ್ವಿಟರ್‌ನಲ್ಲಿ ಆಗಾಗ್ಗೆ ಆಸಕ್ತಿದಾಯಕ ವನ್ಯಜೀವಿಗಳಿಗೆ ಸಂಬಂಧಪಟ್ಟ ಫೋಟೋ, ವಿಡಿಯೋಗಳನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅವರು, ಧ್ಯಾನ ಮಾಡುತ್ತಿರುವಂತೆ ಕಾಣುವ ಗೂಬೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಮರದ ತೊಗಟೆಯ ಮಧ್ಯದಲ್ಲಿ ಅದೇ ಬಣ್ಣದಲ್ಲಿರುವ ಗೂಬೆಯು ಕುಳಿತಿದೆ. ಹೀಗಾಗಿ ಪಕ್ಷಿಯನ್ನು ಕಂಡುಹಿಡಿಯಲು ತುಸು ಕಷ್ಟವಾಗಿದೆ.

ಫೋಟೋವನ್ನು ಆರಂಭದಲ್ಲಿ ಟ್ವಿಟ್ಟರ್ ಬಳಕೆದಾರ ಮಾಸ್ಸಿಮೊ ಹಂಚಿಕೊಂಡಿದ್ದಾರೆ. ಮರದ ತೊಗಟೆಯಂತೆಯೇ ಇರುವ ಹಕ್ಕಿಯ ಬಣ್ಣದಿಂದಾಗಿ ಅನೇಕ ಬಳಕೆದಾರರು ಛಾಯಾಚಿತ್ರದ ಮಧ್ಯದಲ್ಲಿ ಗೂಬೆಯನ್ನು ಗುರುತಿಸಲು ಸ್ವಲ್ಪ ಸಮಯ ತೆಗೆದುಕೊಂಡಿದ್ದಾರೆ.

ಇದು ಫೋಟೋದಲ್ಲಿ ಹಕ್ಕಿ ಗುರುತಿಸಿ ಸ್ಪರ್ಧೆಗೆ ಒಳ್ಳೆಯ ಛಾಯಾಚಿತ್ರವಾಗಿದೆ. ಮಧ್ಯದಲ್ಲಿ ಗೂಬೆ ಕುಳಿತಿದೆ ಎಂಬುದು ಅರಿವಾಗಲು ಸ್ವಲ್ಪ ಸಮಯ ಹಿಡಿಯಿತು ಅಂತಾ ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇದು ಮರದಿಂದ ಮಾಡಲ್ಪಟ್ಟಿದೆ ಎಂದು ಮತ್ತೊಬ್ಬ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ.

ನ್ಯಾಷನಲ್ ಜಿಯಾಗ್ರಫಿಕ್ ಪ್ರಕಾರ, ಮರೆಮಾಚುವಿಕೆ ಅಥವಾ ನಿಗೂಢ ಬಣ್ಣವು ಒಂದು ರಕ್ಷಣಾತ್ಮಕ ಕಾರ್ಯವಿಧಾನವಾಗಿದ್ದು, ಪರಭಕ್ಷಕಗಳಿಗೆ ಬೇಟೆಯನ್ನು ಹಿಡಿಯದಂತೆ ಮರೆಮಾಡಲು ಬಳಸುತ್ತದೆ. ಅತ್ಯಂತ ಸಾಮಾನ್ಯವಾದ ಮರೆಮಾಚುವ ತಂತ್ರಗಳಲ್ಲಿ ಒಂದಾದ ಬಣ್ಣ, ರೂಪ ಅಥವಾ ಚಲನೆಯಲ್ಲಿ ತಮ್ಮ ಸುತ್ತಮುತ್ತಲಿನ ಪ್ರದೇಶಗಳನ್ನು ಹೋಲುವ ಮೂಲಕ ಆ ವೇಷದಲ್ಲಿ ಇರಲು ಇವುಗಳಿಗೆ ಸಹಾಯ ಮಾಡುತ್ತದೆ.

— Susanta Nanda IFS (@susantananda3) March 30, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...