alex Certify ಈ ಕ್ಷಣದಲ್ಲಿ ಬದುಕಲು ಇಷ್ಟಪಡುವುದಾಗಿ ಹೇಳಿದ ರವಿಶಾಸ್ತ್ರಿ: ಟ್ವಿಟ್ಟರ್ ನಲ್ಲಿ ಮೀಮ್ ಗಳ ಹಾವಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕ್ಷಣದಲ್ಲಿ ಬದುಕಲು ಇಷ್ಟಪಡುವುದಾಗಿ ಹೇಳಿದ ರವಿಶಾಸ್ತ್ರಿ: ಟ್ವಿಟ್ಟರ್ ನಲ್ಲಿ ಮೀಮ್ ಗಳ ಹಾವಳಿ

Ravi Shastri likes to 'live in the moment' and so does Twitter. Best jokes  and memes - Trending News Newsಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿಶಾಸ್ತ್ರಿ ಅವರು ಟ್ವಿಟ್ಟರ್ ನಲ್ಲಿ ಸುದ್ದಿಯಾಗಿದ್ದಾರೆ. ತಾನು ಈ ಕ್ಷಣದಲ್ಲಿ ಬದುಕಲು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಶಾಸ್ತ್ರಿ ಇತ್ತೀಚೆಗೆ ಟ್ವಿಟ್ಟರ್‌ನಲ್ಲಿ ತಮ್ಮ ಚಿತ್ರವನ್ನು ಈ ರೀತಿ ಶೀರ್ಷಿಕೆ ನೀಡಿ ಹಂಚಿಕೊಂಡಿದ್ದಾರೆ. ಇದಕ್ಕೆ ಟ್ವಿಟ್ಟರ್ ನಲ್ಲಿ ಉಲ್ಲಾಸದ ಪ್ರತಿಕ್ರಿಯೆಗಳ ಸುರಿಮಳೆಗೈದಿದೆ.

ರವಿಶಾಸ್ತ್ರಿ ಅವರು ನೀಲಿ ಬಣ್ಣದ ಬ್ಲಿಂಗಿ ಜಾಕೆಟ್ ಮತ್ತು ಚಿನ್ನದ ಸರವನ್ನು ಧರಿಸಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ತನ್ನ ಕುಟುಂಬ ಮುಂಬೈನಲ್ಲಿ ವಾಸಿಸುತ್ತಿದೆ. ಹಾಗೂ ತಾನು ಈ ಕ್ಷಣದಲ್ಲಿ ವಾಸಿಸುತ್ತಿದ್ದೇನೆ ಎಂದು ಶಾಸ್ತ್ರಿ ಫೋಟೋಗೆ ಶೀರ್ಷಿಕೆ ನೀಡಿದ್ದಾರೆ.

ಈ ಪೋಸ್ಟ್ ಶೀಘ್ರದಲ್ಲಿ ನೆಟ್ಟಿಗರ ಗಮನಸೆಳೆದಿದ್ದು, 47 ಸಾವಿರಕ್ಕೂ ಹೆಚ್ಚು ಲೈಕ್ಸ್ ಗಳನ್ನು ಗಳಿಸಿದ್ದು, ಮತ್ತಷ್ಟು ಹೆಚ್ಚುತ್ತಿದೆ. ನೆಟ್ಟಿಗರು ಶಾಸ್ತ್ರಿ ಅವರ ಈ ಫೋಟೋವನ್ನು ಕಂಡು ವಿನೋದಗೊಂಡಿದ್ದಾರೆ. ಕಾಮೆಂಟ್‌ ಬಾಕ್ಸ್‌ನಲ್ಲಿ ಅನೇಕ ತಮಾಷೆಯ ಹೋಲಿಕೆಗಳನ್ನು ಹಂಚಿಕೊಂಡಿದ್ದಾರೆ. ಭಾರತದ ಮಾಜಿ ಕೋಚ್ ರವಿಶಾಸ್ತ್ರಿಗೆ ವಯಸ್ಸಾದಂತೆ ಕಾಣುತ್ತಿಲ್ಲ. ಅವರ ವರ್ಚಸ್ಸು ಇನ್ನೂ ಹಾಗೆಯೇ ಇದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ.

— Ravi Shastri (@RaviShastriOfc) May 20, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...