ಮನೆ ಎಷ್ಟೇ ದೊಡ್ಡದಾಗಿರಲಿ, ಎಷ್ಟೇ ಐಷಾರಾಮಿಯಾಗಿರಲಿ ಮನೆಯಲ್ಲಿ ಶಾಂತಿ-ನೆಮ್ಮದಿ ಇಲ್ಲವೆಂದ್ರೆ ಸುಖವಿಲ್ಲ. ಹಾಗಾಗಿ ಮನೆ ನಿರ್ಮಾಣ ಮಾಡುವಾಗ ವಾಸ್ತು ಬಗ್ಗೆ ಗಮನ ನೀಡಬೇಕಾಗುತ್ತದೆ. ಹಾಗೆ ಮನೆಯಲ್ಲಿರುವ ಕೆಲವೊಂದು ವಸ್ತುಗಳು ಕೂಡ ನಮ್ಮ ಹಣೆ ಬರಹವನ್ನು ಬದಲಾಯಿಸುತ್ತದೆ. ನಾವು ಮಾಡುವ ಪ್ರತಿಯೊಂದು ಕೆಲಸ ಕೂಡ ನಮ್ಮ ಜ್ಞಾನ, ಸುಖ-ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ತಾಮ್ರದ ಪಾತ್ರೆಯಲ್ಲಿ ಎಂದೂ ಹಾಲನ್ನು ಕುಡಿಯಬಾರದು.
ಹಾಳಾದ-ಒಡೆದ ಪಾತ್ರೆಯಲ್ಲಿ ಎಂದೂ ಆಹಾರ ಸೇವನೆ ಮಾಡಬೇಡಿ.
ಹಾಗೆ ಮನೆಯಲ್ಲಿ ಒಡೆದ, ಮುರಿದ ಪಾತ್ರೆಗಳನ್ನು ಇಡಬೇಡಿ.
ಮನೆಯಲ್ಲಿ ತಾಮ್ರದ ಪಿರಾಮಿಡ್ ಇಡಿ. ಮನೆಯಲ್ಲಿ 9 ದಿನ ಅಖಂಡ ಕೀರ್ತನೆಯನ್ನು ಮಾಡಿ.
ಗೂಗಲ್ ಕ್ರೋಮ್, ಮೊಜಿಲ್ಲಾ ಬಳಕೆದಾರರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ
ಮನೆಯ ಮುಖ್ಯ ದ್ವಾರದ ಮುಂದೆ ಕುಂಕುಮದಿಂದ ಸ್ವಸ್ತಿಕವನ್ನು ರಚಿಸಿ.
ಅಶೋಕ, ಮಾವು ಮತ್ತು ಅಶ್ವತ್ಥ ಮತ್ತು ಕರವೀರದ ಎಲೆಗಳು ಬಹಳ ಶುಭ ಸೂಚಕ. ಇವುಗಳ ಎಲೆಗಳನ್ನು ಮನೆಯ ಮುಖ್ಯದ್ವಾರದಲ್ಲಿ ಕಟ್ಟಿಡುವುದರಿಂದ ವಾಸ್ತು ದೋಷ ದೂರವಾಗುತ್ತದೆ.