alex Certify ಈ ಕಾರಣಕ್ಕೆ ವಿಶ್ವ ದಾಖಲೆಯ ಪುಸ್ತಕದಲ್ಲಿ ಹೆಸರು ನೋಂದಾಯಿಸಿಕೊಂಡ ʼಅಟಲ್​ ಟನಲ್​ʼ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ವಿಶ್ವ ದಾಖಲೆಯ ಪುಸ್ತಕದಲ್ಲಿ ಹೆಸರು ನೋಂದಾಯಿಸಿಕೊಂಡ ʼಅಟಲ್​ ಟನಲ್​ʼ

ನಿನ್ನೆ ನಡೆದ ಐತಿಹಾಸಿಕ ಸಮಾರಂಭದಲ್ಲಿ ವಿಶ್ವ ದಾಖಲೆಯ ಪುಸ್ತಕದಲ್ಲಿ 10 ಸಾವಿರ ಅಡಿ ಎತ್ತರದ ಅಟಲ್​ ಸುರಂಗವನ್ನು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಎಂದು ಪ್ರಮಾಣೀಕರಿಸಲಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.

ಗಡಿ ರಸ್ತೆಗಳ ಸಂಸ್ಥೆಯ ಮಹಾನಿರ್ದೇಶಕ ಲೆಫ್ಟಿನಂಟ್​ ಜನರಲ್​ ರಾಜೀವ್​ ಚೌಧರಿ ಮನಾಲಿಯನ್ನು ಲಾಹೌಲ್​ – ಸ್ಪಿತಿಗೆ ಸಂಪರ್ಕಿಸುವ ಈ ಅದ್ಭುತ ಹೆದ್ದಾರಿಯನ್ನು ನಿರ್ಮಿಸಿದ ಬಾರ್ಡರ್​ ರೋಡ್ಸ್​ ಆರ್ಗನೈಸೇಷನ್​​ ಕಾರ್ಯಕ್ಷಮತೆಯನ್ನು ಗುರುತಿಸಿ ಪ್ರಶಸ್ತಿ ಸ್ವೀಕರಿಸಿದರು.

ಪ್ರಧಾನಿ ನರೇಂದ್ರ ಮೋದಿ 2020ರ ಅಕ್ಟೋಬರ್​ ಮೂರರಂದು ಅಟಲ್​ ಸುರಂಗವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು. ಮನಾಲಿ – ಲೇಹ್​ ಹೆದ್ದಾರಿಯಲ್ಲಿರುವ ಅಟಲ್​ ಸುರಂಗವು ರೋಹ್ಡಾಂಟ್​ ಪಾಸ್​ ಅಡಿಯಲ್ಲಿ ಸಾಗುವ 9.02 ಕಿಲೋಮೀಟರ್​​ ಸುರಂಗವಾಗಿದೆ. ಅಲ್ಲದೇ ಇದನ್ನು ಘನೀಕರಿಸುವ ತಾಪಮಾನದಂತಹ ಸವಾಲಿನ ಪರಿಸ್ಥಿತಿಯ ನಡೆಯುವೆಯೂ ನಿರ್ಮಿಸಲಾಗಿದೆ.

ಸುರಂಗ ನಿರ್ಮಾಣದ ಪ್ರಯುಕ್ತ ಚಳಿಗಾಲದ ಅವಧಿಯಲ್ಲಿ ಹೆದ್ದಾರಿಯನ್ನು ಆರು ತಿಂಗಳುಗಳ ಕಾಲ ಮುಚ್ಚಲಾಗಿತ್ತು. ಹೀಗಾಗಿ ಲಾಹೌಲ್​ ಹಾಗೂ ಸ್ಪಿತಿ ಬರೋಬ್ಬರಿ ಆರು ತಿಂಗಳುಗಳ ಕಾಲ ಭಾರತದೊಂದಿಗೆ ಸಂಪರ್ಕವನ್ನು ಕಡಿದುಕೊಂಡಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...