alex Certify ಈ ಒಂದು ಶಬ್ಧದಲ್ಲಿ ಅಡಗಿದೆ ಸುಖ ದಾಂಪತ್ಯದ ಗುಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಒಂದು ಶಬ್ಧದಲ್ಲಿ ಅಡಗಿದೆ ಸುಖ ದಾಂಪತ್ಯದ ಗುಟ್ಟು

ದಾಂಪತ್ಯ ಜೀವನದಲ್ಲಿ ಸಣ್ಣ-ಪುಟ್ಟ ಗಲಾಟೆ ಸಾಮಾನ್ಯ. ಆಗಾಗ ಪತಿ-ಪತ್ನಿ ನಡುವೆ ಸಣ್ಣ ಸಣ್ಣ ಜಗಳಗಳಾಗುತ್ತಿರುತ್ತವೆ. ಆದ್ರೆ ಈ ಜಗಳ ದೊಡ್ಡದಾದ್ರೆ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಪರಸ್ಪರ ದ್ವೇಷ ಹೆಚ್ಚಾಗುತ್ತದೆ. ದಾಂಪತ್ಯ ಜೀವನ ಗಟ್ಟಿಯಾಗಿ, ಸುಖಕರವಾಗಿರಲು ಏನು ಮಾಡಬೇಕು ಎನ್ನುವ ಬಗ್ಗೆ ರಿವ್ಯೂ ಆಫ್ ಕಮ್ಯೂನಿಕೇಷನ್ ಒಂದು ಸಂಶೋಧನೆ ಮಾಡಿದೆ.

ಯಾವ ವಸ್ತು ಅಥವಾ ವಿಷ್ಯ ದಾಂಪತ್ಯ ಜೀವನವನ್ನು ಸಂತೋಷವಾಗಿಡಲು ಸಾಧ್ಯ ಎಂಬುದರ ಬಗ್ಗೆ ಸಂಶೋಧನೆ ನಡೆದಿದೆ. ಸಂಶೋಧಕರ ಪ್ರಕಾರ ಪತಿ-ಪತ್ನಿ ನಡುವೆ ಆರೋಗ್ಯಕರ ಸಂಬಂಧವಿರಬೇಕೆಂದಾದಲ್ಲಿ ಪರಸ್ಪರ ಥ್ಯಾಂಕ್ಯೂ ಹೇಳುವುದು ಅವಶ್ಯಕ. ಇದು ಇಬ್ಬರಲ್ಲೂ ಒಳ್ಳೆ ಭಾವನೆ ಮೂಡಲು ನೆರವಾಗುತ್ತದೆ.

ಸಂಶೋಧಕರ ಪ್ರಕಾರ ಮಾನಸಿಕವಾಗಿಯೊಂದೇ ಅಲ್ಲ ವೈಜ್ಞಾನಿಕವಾಗಿಯೂ ಥ್ಯಾಂಕ್ಯೂ ಹೇಳುವುದು ಒಳ್ಳೆಯದು. ಕೃತಜ್ಞತೆ ಸಲ್ಲಿಸುವ ಒಂದು ವಿಧಾನ ಇದು. ನಿಮ್ಮ ಸಂಗಾತಿ ನಿಮಗೆ ಮೆಚ್ಚುಗೆಯಾಗುವ ತಿಂಡಿ ತಯಾರಿಸಿದಾಗ ಅದನ್ನು ಹೊಗಳಿ ಥ್ಯಾಂಕ್ಯೂ ಹೇಳಿದಾಗ ಅವರ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಇಬ್ಬರು ಮತ್ತಷ್ಟು ಹತ್ತಿರವಾಗಲು ಸಹಾಯವಾಗುತ್ತದೆ. ದಂಪತಿ ನಡುವೆ ಶಾರೀರಿಕ ಸಂಬಂಧವೂ ಉತ್ತಮವಾಗಿರುತ್ತದೆ. ಹೊಸ ಉಲ್ಲಾಸ, ಉತ್ಸಾಹ, ಧನಾತ್ಮಕ ಶಕ್ತಿ ಮನದಲ್ಲಿ ಸದಾ ನೆಲೆಸಿರುವುದರಿಂದ ಆಯಾಸ, ಆತಂಕವೆಲ್ಲ ಮಾಯವಾದ ಅನುಭವವಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...