alex Certify ಈ ಐದು ಕಾಯಿಲೆಗಳಿಂದ ಬಳಲುತ್ತಿದ್ರೆ ಅಪ್ಪಿತಪ್ಪಿಯೂ ಕುಡಿಯಬೇಡಿ ಹಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಐದು ಕಾಯಿಲೆಗಳಿಂದ ಬಳಲುತ್ತಿದ್ರೆ ಅಪ್ಪಿತಪ್ಪಿಯೂ ಕುಡಿಯಬೇಡಿ ಹಾಲು  

ಹಾಲು ಸಂಪೂರ್ಣ ಆಹಾರ, ಹಾಲು ಕುಡಿಯೋದ್ರಿಂದ ಸಾಕಷ್ಟು ಪ್ರಯೋಜನಗಳಿವೆ ಅನ್ನೋದನ್ನು ಚಿಕ್ಕಂದಿನಿಂದ್ಲೂ ಕೇಳಿರ್ತೀರಾ. ಹಾಲಿನಲ್ಲಿ ಕ್ಯಾಲ್ಷಿಯಂ, ವಿಟಮಿನ್‌ ಎ, ಬಿ12 ಜೊತೆಗೆ ಥೈಮೈನ್‌ ಮತ್ತು ನಿಕೋಟಿನಿಕ್‌ ಆಸಿಡ್‌ ನಂತಹ ಹಲವು ಪೋಷಕಾಂಶಗಳಿವೆ.

ಪ್ರತಿದಿನ ಹಾಲು ಕುಡಿಯುವುದರಿಂದ ಮಲಬದ್ಧತೆ, ಒತ್ತಡ, ನಿದ್ರಾಹೀನತೆ, ಆಯಾಸ ಮತ್ತು ದೌರ್ಬಲ್ಯದ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ. ಅಷ್ಟೇ ಅಲ್ಲ ಹಾಲಿನಲ್ಲಿರುವ ಕ್ಯಾಲ್ಸಿಯಂ, ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸಲು ಅಗತ್ಯವೆಂದು ಪರಿಗಣಿಸಲಾಗಿದೆ.

ಆದರೆ ಹಾಲು ಎಲ್ಲರಿಗೂ ಪ್ರಯೋಜನಕಾರಿಯಲ್ಲ ಅನ್ನೋದನ್ನು ಅರ್ಥಮಾಡಿಕೊಳ್ಳಬೇಕು. ಕೆಲವರಿಗೆ ಹಾಲಿನ ಸೇವನೆಯು ತುಂಬಾ ಹಾನಿಕಾರಕ. ಕಾಮಾಲೆ, ಅತಿಸಾರ, ಭೇದಿ ಅಥವಾ ಕೀಲುಗಳಲ್ಲಿ ಊತದ ಸಮಸ್ಯೆ ಇರುವವರು ಹಾಲನ್ನು ಸೇವಿಸಬಾರದು. ಅತಿಯಾಗಿ ಹಾಲು ಕುಡಿಯುವುದರಿಂದ ಕೆಲವರಿಗೆ ಯಕೃತ್ತಿನಲ್ಲಿ ಊತ ಹೆಚ್ಚಾಗುತ್ತದೆ. ಫೈಬ್ರಾಯ್ಡ್‌ಗಳ ಸಮಸ್ಯೆ ಇರುವವರು ಕೂಡ ನಿರಂತರವಾಗಿ ಹಾಲನ್ನು ಸೇವಿಸುತ್ತಿದ್ದರೆ ಅದು ಗಂಭೀರ ಸ್ವರೂಪ ಪಡೆದುಕೊಳ್ಳಬಹುದು.

ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರು ಹಾಲು ಕುಡಿಯಬಾರದು.  ಅಂಥವರಿಗೆ ಹಾಲು ಸುಲಭವಾಗಿ ಜೀರ್ಣವಾಗುವುದಿಲ್ಲ. ಪಿತ್ತಜನಕಾಂಗದಲ್ಲಿ ಕೊಬ್ಬು ಶೇಖರಣೆಯಾಗಿದ್ದರೆ ಬಹಳ ಸೀಮಿತ ಪ್ರಮಾಣದಲ್ಲಿ ಪ್ರೋಟೀನ್ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ. ಹಾಲಿನಲ್ಲಿ ಪ್ರೋಟೀನ್‌ ಸಮೃದ್ಧವಾಗಿರುವುದರಿಂದ ಅದನ್ನು ಕುಡಿದರೆ ಅಜೀರ್ಣ, ಆಸಿಡಿಟಿ, ಗ್ಯಾಸ್, ಆಲಸ್ಯ, ಆಯಾಸ, ತೂಕ ಹೆಚ್ಚಾಗುವುದು ಅಥವಾ ತೂಕ ನಷ್ಟದಂತಹ ಸಮಸ್ಯೆಗಳು ಉಂಟಾಗಬಹುದು.

ಹಾಲಿನಲ್ಲಿ ಲ್ಯಾಕ್ಟೋಸ್ ಇರುತ್ತದೆ. ಇದು ಕೆಲವೊಮ್ಮೆ ಜೀರ್ಣಕ್ರಿಯೆಯನ್ನು ದುರ್ಬಲಗೊಳಿಸುತ್ತದೆ. ಈ ಕಾರಣದಿಂದಾಗಿ, ಹೆಚ್ಚು ಹಾಲು ಕುಡಿಯುವುದರಿಂದ ಅತಿಸಾರ, ಹೊಟ್ಟೆ ಉಬ್ಬರಿಸುವುದು ಮತ್ತು ಗ್ಯಾಸ್ಟ್ರಿಕ್‌ ಸಮಸ್ಯೆ ಉಂಟಾಗುತ್ತದೆ. ಕೆಲವರಿಗೆ ಹಾಲಿನಿಂದಲೂ ಅಲರ್ಜಿ ಉಂಟಾಗುತ್ತದೆ. ಇದಕ್ಕೆ ಕಾರಣ ಲ್ಯಾಕ್ಟೋಸ್. ಇದು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು.

ಚರ್ಮದ ಮೇಲೆ ತುರಿಕೆ, ಉಸಿರಾಟದ ತೊಂದರೆ ಅಥವಾ ದೇಹದಲ್ಲಿ ಕೆಂಪು ದದ್ದುಗಳ ಜೊತೆಗೆ ಊತ ಬರಬಹುದು. ಆದ್ದರಿಂದ ಅಲರ್ಜಿಯ ಸಮಸ್ಯೆ ಇದ್ದರೆ  ಅವರು ಹಾಲು ಸೇವಿಸಬಾರದು.ನೀವು ಸ್ಥೂಲಕಾಯತೆಯಿಂದ ತೊಂದರೆಗೊಳಗಾಗಿದ್ದರೆ, ಹಾಲನ್ನು ಕಡಿಮೆ ಸೇವಿಸಿ. ಯಾಕೆಂದರೆ ಹಾಲು ದೇಹದಲ್ಲಿ ಹೆಚ್ಚುವರಿ ಕೊಬ್ಬನ್ನು ಸಂಗ್ರಹಿಸುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಹಾಲನ್ನು ಸೇವಿಸುವುದು ಚರ್ಮಕ್ಕೆ ಪ್ರಯೋಜನಕಾರಿಯಲ್ಲ. ಇದರಿಂದ ಮೊಡವೆಗಳು ಏಳಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...