alex Certify ಈ ಉಪಾಯ ಮಾಡಿದ್ರೆ ಮಾಯವಾಗುತ್ತೆ ತಲೆ ಹೊಟ್ಟು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಉಪಾಯ ಮಾಡಿದ್ರೆ ಮಾಯವಾಗುತ್ತೆ ತಲೆ ಹೊಟ್ಟು

ತಲೆಹೊಟ್ಟು ಈಗ ಸಾಮಾನ್ಯ. ಬೇಸಿಗೆ, ಮಳೆ, ಚಳಿಗಾಲ ಯಾವುದೇ ಇರಲಿ  ತಲೆಹೊಟ್ಟು ಸಮಸ್ಯೆ ಸಾಮಾನ್ಯವಾಗಿದೆ. ಹೆಚ್ಚಿನ ಜನರ ಜೀವನ ಶೈಲಿ ಇದಕ್ಕೆ ಕಾರಣವಾಗುತ್ತದೆ. ತಲೆ ಹೊಟ್ಟಿಗೆ ಮನೆಯಲ್ಲಿಯೇ ಮದ್ದಿದೆ.

ನಿಂಬೆ ರಸ: ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲು ನಿಂಬೆ ರಸವನ್ನು ಬಳಸುವುದು ತುಂಬಾ ಪ್ರಯೋಜನಕಾರಿ. ಸಾಸಿವೆ ಎಣ್ಣೆಯಲ್ಲಿ ಅಥವಾ ತೆಂಗಿನ ಎಣ್ಣೆಯಲ್ಲಿ ಒಂದು ನಿಂಬೆ ರಸವನ್ನು ಹಾಕಬೇಕು. ಈ ಎಣ್ಣೆಯಿಂದ ನೆತ್ತಿಗೆ ಮಸಾಜ್ ಮಾಡಿ ಸ್ವಲ್ಪ ಹೊತ್ತು ಬಿಡಿ. ಇದರ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಮಾಡಬೇಕು.

ಟೀ ಟ್ರೀ ಆಯಿಲ್: ಟಿ-ಟ್ರೀ ಎಣ್ಣೆಯು ಜೀವಿರೋಧಿ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ತಲೆಹೊಟ್ಟು ಸಮಸ್ಯೆಯನ್ನು ನಿವಾರಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಶಾಂಪೂದಲ್ಲಿ ಅದರ ಕೆಲವು ಹನಿಗಳನ್ನು ಬೆರೆಸಿ ತಲೆ ತೊಳೆಯಿರಿ. ನಾಲ್ಕರಿಂದ ಐದು ಬಾರಿ ಬಳಸುವುದರಿಂದ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

ಮೊಸರು:  ತಲೆಹೊಟ್ಟು ಸಮಸ್ಯೆಯಲ್ಲಿ ಮೊಸರು ಬಳಸುವುದು ತುಂಬಾ ಪ್ರಯೋಜನಕಾರಿ. ಒಂದು ಕಪ್ ಮೊಸರಿನಲ್ಲಿ ಒಂದು ಚಮಚ ಅಡಿಗೆ ಸೋಡಾ ಮಿಶ್ರಣ ಮಾಡಿ. ಈ ಪ್ಯಾಕ್ ಅನ್ನು ನೆತ್ತಿಗೆ ಹಾಕಿ. ಕೆಲ ದಿನ ಮಾಡುತ್ತ ಬಂದರೆ ವ್ಯತ್ಯಾಸ ನಿಮಗೆ ಕಾಣುತ್ತದೆ.

ಬೇವಿನ ಮತ್ತು ತುಳಸಿ ಎಲೆಗಳನ್ನು ನೀರಿನಲ್ಲಿ ಕುದಿಸಿ. ನೀರು ಅರ್ಧವಾದ್ಮೇಲೆ  ಫಿಲ್ಟರ್ ಮಾಡಿ ಮತ್ತು ತಣ್ಣಗಾಗಲು ಬಿಡಿ. ಈ ನೀರಿನಿಂದ ಕೂದಲನ್ನು ತೊಳೆಯಿರಿ. ಕೆಲವು ಬಾರಿ ಬಳಸುವುದರಿಂದ ತಲೆಹೊಟ್ಟು ಸಮಸ್ಯೆ ಕಡಿಮೆಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...