alex Certify ಈ ಅಭ್ಯಾಸಗಳನ್ನು ಬಿಡದಿದ್ದರೆ ನಿಮಗೂ ಆಗಬಹುದು ಹೃದಯಾಘಾತ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಅಭ್ಯಾಸಗಳನ್ನು ಬಿಡದಿದ್ದರೆ ನಿಮಗೂ ಆಗಬಹುದು ಹೃದಯಾಘಾತ….!

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಸಮಸ್ಯೆ ಬಹಳ ವೇಗವಾಗಿ ಹೆಚ್ಚುತ್ತಿದೆ. ಈ ಸಮಸ್ಯೆ ಕೇವಲ ವಯೋವೃದ್ಧರಿಗೆ ಮಾತ್ರವಲ್ಲ, ಯುವಕರನ್ನೂ ಕಾಡುತ್ತಿದೆ. ಆರೋಗ್ಯವಾಗಿರುವ ವ್ಯಕ್ತಿಗೆ ಇದ್ದಕ್ಕಿದ್ದಂತೆ ಹೃದಯಾಘಾತವಾಗುತ್ತದೆ, ತಕ್ಷಣವೇ ಸಾವು ಸಂಭವಿಸುತ್ತದೆ.

ಇದಕ್ಕೆ ನಮ್ಮ ಕೆಲವೊಂದು ದುರಭ್ಯಾಸಗಳು ಕೂಡ ಕಾರಣವಾಗುತ್ತವೆ. ಯಾವ ಕಾರಣಗಳಿಗಾಗಿ ಹೃದಯಾಘಾತ ಸಂಭವಿಸುತ್ತದೆ ಅನ್ನೋದನ್ನು ನೋಡೋಣ.

ಕೊಲೆಸ್ಟ್ರಾಲ್ ಹೆಚ್ಚಿಸುವ ಪದಾರ್ಥಗಳ ಸೇವನೆ: ಕೊಲೆಸ್ಟ್ರಾಲ್ ಒಂದು ಜಿಗುಟಾದ ವಸ್ತುವಾಗಿದ್ದು ಹೃದಯಕ್ಕೆ ತುಂಬಾ ಅಪಾಯಕಾರಿ. ಇದು ರಕ್ತನಾಳಗಳಲ್ಲಿ ರಕ್ತವನ್ನು ತೀವ್ರವಾಗಿ ನಿಲ್ಲಿಸುತ್ತದೆ. ಅದಕ್ಕಾಗಿಯೇ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ವಸ್ತುಗಳನ್ನು ಸೇವಿಸಬಾರದು. ಕರಿದ ತಿನಿಸುಗಳು, ರೆಡ್‌ ಮೀಟ್‌, ಜಂಕ್‌ ಫುಡ್‌ಗಳಿಂದ ದೂರವಿದ್ದರೆ ಹೃದಯ ಆರೋಗ್ಯವಾಗಿರುತ್ತದೆ.

ರಕ್ತದಲ್ಲಿನ ಸಕ್ಕರೆ ಹೆಚ್ಚಿಸುವ ಆಹಾರಗಳ ಸೇವನೆ: ಮಧುಮೇಹ, ಮೂತ್ರಪಿಂಡಗಳು ಮಾತ್ರವಲ್ಲದೆ ನರಗಳ ಮೇಲೆ ಕೂಡ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ನರಗಳ ದೌರ್ಬಲ್ಯ ಕಾಡಬಹುದು. ನರಗಳು ದುರ್ಬಲವಾದಾಗ ಹೃದಯವು ಕೂಡ ದುರ್ಬಲಗೊಳ್ಳುತ್ತದೆ ಮತ್ತು ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ. ಹಾಗಾಗಿ ಸಿಹಿ ತಿನಿಸುಗಳು, ಸಕ್ಕರೆಯಿಂದ ಮಾಡಿದ ಪದಾರ್ಥಗಳನ್ನು ಕಡಿಮೆ ಸೇವಿಸಿ.

ವ್ಯಾಯಾಮ ಮಾಡದಿರುವುದು: ವ್ಯಾಯಾಮ ಮಾಡದೇ ಇರುವವರು ಬೇಗನೆ ಸ್ಥೂಲಕಾಯಕ್ಕೆ ಬಲಿಯಾಗುತ್ತಾರೆ. ಇದರಿಂದಾಗಿ ಬೊಜ್ಜು ರಕ್ತನಾಳಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ ಮತ್ತು ಅವು ಮುಚ್ಚಲ್ಪಡುತ್ತವೆ. ಈ ರೀತಿಯಾದಾಗ ಇದು ಕೂಡ ಹೃದಯಾಘಾತಕ್ಕೆ ಕಾರಣವಾಗಬಲ್ಲದು.

ಧೂಮಪಾನದ ಚಟ: ಹೃದಯಾಘಾತವನ್ನು ತಪ್ಪಿಸಲು ಧೂಮಪಾನದ ಅಭ್ಯಾಸವನ್ನು ಬಿಡಬೇಕು. ಧೂಮಪಾನದಿಂದ ಹೃದಯ ಮತ್ತು ನರಗಳೆರಡೂ ದುರ್ಬಲವಾಗುತ್ತವೆ. ಇದರಿಂದಾಗಿ ಹೃದಯಾಘಾತದ ಅಪಾಯವು ಹೆಚ್ಚಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...